ಮುಂಬೈ: ನಟಿ ಮಣಿಯರಿಗೆ ವಯಸ್ಸೆ ಆಗಲ್ಲ, ಎನ್ನುವಷ್ಟರ ಮಟ್ಟಿಗೆ ಸೌಂದರ್ಯವನ್ನು ಹೊಂದಿರುತ್ತಾರೆ. ಹೀಗಿರುವಾಗ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರು 54 ವರ್ಷದಲ್ಲಿಯೂ ಯಾವ ನಟಿಗೂ ಕಮ್ಮಿ ಎಲ್ಲ ಎನ್ನವಂತೆ ಕಾಣಿಸುತ್ತಾರೆ. ಲೆಟೆಸ್ಟ್ ಆಗಿ ಫೋಟೋಶೂಟ್ ಮಾಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕಮಾಲ್ ಮಾಡುತ್ತಿದ್ದಾರೆ.
ವಯಸ್ಸು 54 ಆದರೂ ಮಾಧುರಿ ದೀಕ್ಷಿತ್ ಅವರ ಸೌಂದರ್ಯ ಮಾತ್ರ ಚೂರು ಮಾಸಿಲ್ಲ, ಹಾಗೇ ಇದ್ದಾರೆ. ಇದೀಗ ಕೆಂಪುನ ಕಲರ್ ಗೌನ್ ತೊಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದನ್ನೂ ಓದಿ : ಡಿಸೆಂಬರ್ ನಲ್ಲಿ ರಶ್ಮಿಕಾ ಮಂದಣ್ಣ -ದೇವರಕೊಂಡ ಮದುವೆ? ಏನಿದು ಮ್ಯಾರೇಜ್ ಕಹಾನಿ
ಬಾಲಿವುಡ್ ಚಿತ್ರರಂಗ ಕಂಡ ಅಪ್ರತಿಮ ಕಲಾವಿದೆ ಮಾಧುರಿ ದೀಕ್ಷಿತ್. ರೆಟ್ರೋ ಕಾಲದಲ್ಲಿ ಕೋಟ್ಯಂತರ ಅಭಿಮಾನಿಗಳ ಹೃದಯ ಕದ್ದ ಈ ಚೆಲುವೆಗೆ ಬೇರೆ ಯಾರೂ ಸಾಟಿ ಇಲ್ಲ. ಏಕ್ ದೋ ತೀನ್.. ಎಂದು ಕುಣಿದು, ಪಡ್ಡೆಗಳ ನಿದ್ದೆ ಕೆಡಿಸಿದ ಮಾಧುರಿ ದೀಕ್ಷಿತ್ ಅಂದು ಭಾರತೀಯ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿದ್ದರು. ಇಂದಿಗೂ ಕೂಡಾ ಇವರ ಚಾರ್ಮ್ ಹಾಗೆಯೇ ಇದೆ ಎಂದು ಹೇಳಿದರೆ ತಪ್ಪಾಗಲಾರದು. ಇದನ್ನೂ ಓದಿ : ಜೀ ಕನ್ನಡ ವಾಹಿನಿಗೆ ಜಿಗಿದ ರಚಿತಾ ರಾಮ್ – Exclusive
ಮಾಧುರಿ ಅವರು ಸಿನಿಮಾಗೆ ಎಂಟ್ರಿಕೊಟ್ಟಾಗ ಅವರಿಗೆ ಕೇವಲ 17 ವರ್ಷವಾಗಿತ್ತು. 1984ರಲ್ಲಿ ಅಬೋದ್ ಸಿನಿಮಾ ಮೂಲಕ ಮಾಧುರಿ ದೀಕ್ಷಿತ್ ಅವರು ಬಾಲಿವುಡ್‍ಗೆ ಕಾಲಿಟ್ಟರು. ಆರಂಭದಲ್ಲೇ ತಮ್ಮ ನಟನೆ ಮೂಲಕ ಅವರು ಗಮನ ಸೆಳೆದರು. ನಂತರ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದು ತೇಜಾಬ್ ಸಿನಿಮಾ ಮೂಲಕ. ಆ ಚಿತ್ರದ ಏಕ್ ದೋ ತೀನ್.. ಹಾಡು ಸೂಪರ್ ಹಿಟ್ ಆಯಿತು. ಆ ಮೂಲಕ ಮಾಧುರಿ ದೀಕ್ಷಿತ್ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಪಡೆದುಕೊಂಡರು. ಸಿನಿಪ್ರೇಮಿಗಳಿಗೆ ಇಂದಿಗೂ ಆ ಹಾಡು ಫೇವರಿಟ್ ಆಗಿ ಉಳಿದುಕೊಂಡಿದೆ.