ಆದಿಪುರುಷ (Adipurush) ಚಿತ್ರದ ನಾಯಕಿ ಕೃತಿ ಸನೋನ್ (Kriti Sanon), ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಆದಿಪುರುಷ ಸಿನಿಮಾ ಬಿಡುಗಡೆಯ ಹೊತ್ತಲ್ಲಿ, ತಾವೇ ಒಂದು ಸಿನಿಮಾವನ್ನು ನಿರ್ಮಾಣ (Production) ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ, ಆ ಸಿನಿಮಾದಲ್ಲಿ ತಾವೇ ನಾಯಕಿಯಾಗಿ ನಟಿಸುತ್ತೇನೆ ಎಂದೂ ಸ್ಪಷ್ಟಪಡಿಸಿದ್ದಾರೆ.
Advertisement
ಸಿನಿಮಾ ಯಾರದೇ ಆಗಿರಲಿ, ಅಲ್ಲಿ ನಾಯಕಿಯರಿಗೆ ಸಿಗಬೇಕಾದ ಅವಕಾಶ ಸಿಗುವುದಿಲ್ಲ ಎಂದು ಈ ಹಿಂದೆ ಕೃತಿ ಹೇಳಿಕೊಂಡಿದ್ದರು. ನಾಯಕನಷ್ಟೇ ತಮಗೂ ನ್ಯಾಯ ಸಿಗಬೇಕು ಎಂದೂ ಅವರು ಮಾತನಾಡಿದ್ದರು. ಈ ಹೊತ್ತಿನಲ್ಲೇ ಸಿನಿಮಾ ನಿರ್ಮಾಣದ ಘೋಷಣೆ ಮಾಡಿದ್ದು, ತಮ್ಮಿಷ್ಟದಂತೆ ಚಿತ್ರವನ್ನು ಅವರು ತಯಾರಿಸಲಿದ್ದಾರೆ. ಇದನ್ನೂ ಓದಿ:ಮೊದಲ ವರ್ಷದ ವಿವಾಹ ಸಂಭ್ರಮದಲ್ಲಿ ‘ಸ್ವಯಂವಿವಾಹಿತೆ’ ಕ್ಷಮಾ ಬಿಂದು
Advertisement
Advertisement
ಸಿನಿಮಾ ರಂಗದಲ್ಲಿ ಮಹಿಳಾ ಪಾತ್ರಗಳಿಗಿಂತ ಪುರುಷ ಪಾತ್ರಗಳೇ ತೆರೆಯ ಮೇಲೆ ಹೆಚ್ಚು ಕಾಣಿಸಿಕೊಳ್ಳುತ್ತವೆ. ನಾಯಕಿಯರಿಗೆ ಹೆಚ್ಚು ಪ್ರಾಶಸ್ತ್ಯ ಇರುವುದಿಲ್ಲ. ಸಿಕ್ಕಿರುವ ಕಡಿಮೆ ಅವಧಿಯಲ್ಲೇ ನಮ್ಮ ಪ್ರತಿಭೆಯನ್ನು ತೋರಿಸುವಂತಹ ಅನಿವಾರ್ಯತೆ ಇರುತ್ತದೆ. ನನಗೆ ಈವರೆಗೂ ಸಿಕ್ಕಿರುವ ಪಾತ್ರಗಳು ಅಂಥದ್ದೇ ಆಗಿವೆ. ಅದರಲ್ಲಿಯೇ ನಾನು ತೃಪ್ತಿ ಪಟ್ಟಿದ್ದೇನೆ ಎಂದಿದ್ದರು ಕೃತಿ ಸನೋನ್.
Advertisement
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, “ಯಾವುದೇ ಸಿನಿಮಾ ರಂಗದಲ್ಲಿ ನಾಯಕ ಮತ್ತು ನಾಯಕಿಗೆ ಸಮಾನವಾಗಿ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲು ಅವಕಾಶ ಸಿಗುವುದು ಕಡಿಮೆ. ಕಥೆಯಲ್ಲಿ ಮಹಿಳೆಗೆ ಹೆಚ್ಚಿನ ಮಹತ್ವವಿದ್ದು ಪುರುಷನಿಗೆ ಕಡಿಮೆ ಇದ್ದರೆ, ಯಾವ ನಟನೂ ಅಂತಹ ಪಾತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಈ ಮನಸ್ಥಿತಿ ಚಿತ್ರರಂಗದಲ್ಲಿ ಬದಲಾಗಬೇಕು ಎಂದು ನಾನು ಬಯಸುತ್ತೇನೆ. ಕೆಲವರು ಇದಕ್ಕೆ ಅಪವಾದವಾಗಿಯೂ ಇರುತ್ತಾರೆ ಎಂದು ಅವರು ಮಾತನಾಡಿದ್ದರು.
ಮುಂದುವರೆದು ಮಾತನಾಡಿದ್ದ ಕೃತಿ, ‘ಬರೇಲಿ ಕಿ ಬರ್ಫಿ’ ಚಿತ್ರದ ನಂತರ ನಾನು ಅನೇಕ ಕಥೆಗಳನ್ನು ಕೇಳಿದೆ. ನನ್ನ ಬಳಿ ಬಂದ ಸಿನಿಮಾಗಳಲ್ಲಿ ಶೇ.99ರಷ್ಟು ಸಿನಿಮಾಗಳಲ್ಲಿ ನನ್ನದು ಸಣ್ಣ ಪಾತ್ರವೇ ಆಗಿರುತ್ತಿತ್ತು. ಕೆಲವನ್ನು ಒಪ್ಪಿದೆ, ಕೆಲವನ್ನು ಬಿಟ್ಟೆ. ಮಾಡಿದ ಪಾತ್ರಗಳಿಂದಾಗಿ ಈಗ ಜನರು ನನ್ನನ್ನು ಗುರುತಿಸುತ್ತಿದ್ದಾರೆ. ಅದು ನನಗೆ ಖುಷಿ ತಂದಿದೆ ಎಂದಿರುವ ಕೃತಿ. ಈ ಎಲ್ಲ ನೋವುಗಳನ್ನು ಮರೆಯಲು ತಾವೇ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.