ಮಂಗಳೂರು: ಬಾಲಿವುಡ್‌ನ ಖ್ಯಾತ ನಟಿ ಕತ್ರಿನಾ ಕೈಫ್(Katrina Kaif), ಕ್ರಿಕೆಟಿಗ ಕೆ.ಎಲ್. ರಾಹುಲ್ (KL Rahul) ಹಾಗೂ ನಟ ಸುನಿಲ್ ಶೆಟ್ಟಿ(Sunil Shetty) ಕುಟುಂಬ ಉಳ್ಳಾಲದ ಕುತ್ತಾರು ಕೊರಗಜ್ಜನ ಕಟ್ಟೆಯಲ್ಲಿ ಭಾನುವಾರ ನಡೆದ ಹರಕೆಯ ಕೋಲದಲ್ಲಿ ಭಾಗಿಯಾಗಿತ್ತು.
ಕತ್ರಿನಾ ಕೈಫ್, ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಅಥಿಯಾ ಶೆಟ್ಟಿ, ಮ್ಯಾಟ್ರಿಕ್ಸ್ ಎಂಟರ್‌ಟೈನ್‌ಮೆಂಟ್‌ನ ರೇಷ್ಮಾ ಶೆಟ್ಟಿ, ಕತ್ರಿನಾ ಪತಿ ವಿಕಿ ಕೌಶಲ್ ಹಾಗೂ ವಿ.ಎಂ. ಕಾಮತ್ ಸಹಿತ 9 ಮಂದಿಯ ಕೋಲವನ್ನು ಎರಡು ತಿಂಗಳ ಹಿಂದೆ ಬರೆಸಲಾಗಿತ್ತು. ವಿಕಿ ಕೌಶಲ್ ಹೊರತುಪಡಿಸಿ ಉಳಿದೆಲ್ಲರೂ ಕೋಲದಲ್ಲಿ ಭಾಗಿಯಾಗಿದ್ದರು.
Advertisement
ಮಹಿಳೆಯರಿಗೆ ರಾತ್ರಿ ಹೊತ್ತು ಕಟ್ಟೆಯ ಒಳಗೆ ಪ್ರವೇಶ ಇಲ್ಲದ ಕಾರಣ ಕತ್ರಿನಾ, ಅಥಿಯಾ ಮತ್ತು ರೇಷ್ಮಾ ದೈವಸ್ಥಾನದ ಹೊರಗಡೆಯಿಂದ ಕೋಲವನ್ನು ವೀಕ್ಷಿಸಿದರು. ರಾಹುಲ್ ಮತ್ತು ಅಹಾನ್ ಕೋಲದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಕಸ ತೆಗೆಯಲು 30 ವರ್ಷಕ್ಕೆ ಗುತ್ತಿಗೆ – 45 ಸಾವಿರ ಕೋಟಿ ಟೆಂಡರ್‌ನಲ್ಲಿ 15 ಸಾವಿರ ಕಿಕ್ ಬ್ಯಾಕ್: ಹೆಚ್‌ಡಿಕೆ ಬಾಂಬ್
Advertisement
Advertisement
ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ದೈವಸ್ಥಾನದ ಆಡಳಿತ ಮಂಡಳಿಯಲ್ಲಿ ಬಾಲಿವುಡ್ ಕುಟುಂಬ ಸದಸ್ಯರು ಮನವಿ ಮಾಡಿದ್ದರು. ಸಂಜೆ 6 ಗಂಟೆ ವೇಳೆಗೆ ಕುತ್ತಾರಿಗೆ ಆಗಮಿಸಿದ ಇವರು ಕೋಲ ಮುಗಿದ ನಂತರ ತೆರಳಿದರು.
Advertisement
ಕುತ್ತಾರುನಲ್ಲಿ ಕೊರಗಜ್ಜನ ಕೋಲ ನೀಡುವ ಮೊದಲು ಟೀಂ ಇಂಡಿಯಾ (Team India) ಆಟಗಾರ ಕೆ.ಎಲ್ ರಾಹುಲ್ ಮಂಗಳೂರು ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ(Bappanadu Sri Durga Parameshwari Temple) ಪತ್ನಿ ಸಮೇತರಾಗಿ ಭೇಟಿ ನೀಡಿದರು.
ದೇವಿಯ ದರ್ಶನ ಪಡೆದ ಕೆ.ಎಲ್ ರಾಹುಲ್, ಪತ್ನಿ ಅಥಿಯಾ ಶೆಟ್ಟಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು.