BollywoodCinemaLatestMain Post

ಕತ್ರಿನಾ ಕೈಫ್ ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್?

Advertisements

ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯ ವಿಚಾರವಾಗಿ ಸೌಂಡ್ ಮಾಡ್ತಿದ್ದಾರೆ. ನಟಿಯ ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಆಗಿದ್ಯಾ ಅಂತಾ ಅಭಿಮಾನಿಗಳನ್ನ ಕಾಡ್ತಿದೆ.

ಗಾಸಿಪ್‌ಗಳಿಂದ ದೂರವಿರುವ ನಟಿ ಕತ್ರಿನಾ ಕೈಫ್ ಇನ್ಸ್ಟಾಗ್ರಾಂ ಖಾತೆಯಲ್ಲಿ ನಟಿಯ ಹೆಸರಿನ ಬದಲು ಬೇರೊಬ್ಬರ ಹೆಸರು ಕಾಣಿಸಿಕೊಂಡಿತ್ತು. ಕತ್ರಿನಾ ಸೋಷಿಯಲ್ ಮೀಡಿಯಾ ಅಕೌಂಟ್ ಹ್ಯಾಕ್ ಆಯ್ತಾ ಅಂತಾ ನೆಟ್ಟಿಗರು ಪ್ರಶ್ನೆಸುತ್ತಿದ್ದಾರೆ. ನಟಿಯ ಫ್ಯಾನ್ಸ್ ಪ್ರೋಫೈಲ್ ಸ್ಕ್ರೀನ್‌ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ಅಕೌಂಟ್ ಹ್ಯಾಕ್ ಆಗಿದ್ಯಾ ಅಂತಾ ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ:ಲಂಡನ್ ಸ್ಟುಡಿಯೋದಲ್ಲಿ ಕನ್ನಡ ಚಿತ್ರಕ್ಕೆ ಹಿನ್ನೆಲೆ ಸಂಗೀತ

ಕತ್ರಿನಾ ಕೈಫ್ ಹೆಸರಿನ ಬದಲಿಗೆ ಕಾಮಿಡಿಯಾ ಮಾಡರೇಟ್ಸ್ ಎಂಬ ಹೆಸರು ನಟಿಯ ಖಾತೆಯಲ್ಲಿ ಕಾಣಿಸಿದೆ. ಬಳಿಕ ಕತ್ರಿನಾ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಯಾಕೆ ಈ ರೀತಿ ಆಗಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ಇದಾದ ಬಳಿಕ 66 ಮಿಲಿಯನ್ ಫಾಲೋವರ್ಸ್ ಹೆಚ್ಚಳವಾಗಿದೆ. ನಟಿಯ ಅಕೌಂಟ್‌ ಕೂಡ ಹ್ಯಾಕ್‌ ಆಗಿಲ್ಲ. ಆದರೆ ನಟಿಯ ನಡೆ ನೋಡಿ ನೆಟ್ಟಿಗರು, ಫಾಲೋವರ್ಸ್ ಜಾಸ್ತಿಯಾಗಬೇಕೆಂದು ಹೀಗೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

Live Tv

Leave a Reply

Your email address will not be published.

Back to top button