ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif) ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ (Kukke Subramanya) ತಂಗಿದ್ದಾರೆ. ದೇವಸ್ಥಾನದಲ್ಲಿ ಇಂದು (ಮಾ.12) ಆಶ್ಲೇಷಾ ಬಲಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ:ನಟಿ ರನ್ಯಾ ಬೆನ್ನಲ್ಲೇ ಮತ್ತಿಬ್ಬರು ಸ್ಯಾಂಡಲ್‌ವುಡ್ ನಟಿಯರಿಗೆ ಮಾಸ್ಟರ್ ಸ್ಟ್ರೋಕ್
ನಿನ್ನೆಯಿಂದ (ಮಾ.11) ಕತ್ರಿನಾ ದೇವಸ್ಥಾನದಲ್ಲಿ ವಿವಿಧ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಸರ್ಪ ಸಂಸ್ಕಾರ ಸೇವೆ, ನಾಗ ಪ್ರತಿಷ್ಠಾ ಸೇವೆಯಲ್ಲಿ ಭಾಗಿಯಾಗಿದ್ದಾರೆ. ಸಂತಾನ, ವ್ಯವಹಾರಿಕ, ಕೌಟುಂಬಿಕ, ಜೀವನದ ಒಳಿತಿಗಾಗಿ ಕತ್ರಿನಾ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ.
ಸಾಮಾನ್ಯವಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮದುವೆಯಾಗದವರು, ಮಕ್ಕಳಾಗದವರು ಹೆಚ್ಚಾಗಿ ಭೇಟಿ ನೀಡುತ್ತಾರೆ. ದೋಷ ನಿವಾರಣೆಗೆ ಅನೇಕರು ಸರ್ಪ ಸಂಸ್ಕಾರ ಪೂಜೆ ನೆರವೇರಿಸುತ್ತಾರೆ. ಹಾಗಾಗಿ ಬಾಲಿವುಡ್ ನಟಿ ಕತ್ರಿನಾ ಕೂಡ ಸುಬ್ರಹ್ಮಣ್ಯನ ಮೊರೆ ಹೋಗಿದ್ದಾರೆ.