ಮುಂಬೈ: ವಿವಾದಾತ್ಮಕ ಟ್ವೀಟ್ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಸಹೋದರಿ ರಂಗೋಲಿ ಚಾಂಡೆಲ್ ಅವರ ಖಾತೆಯನ್ನು ಟ್ವೀಟರ್ ಸಂಸ್ಥೆಯು ಇಂದು ಅಮಾನತು ಮಾಡಿದೆ.
ರಂಗೋಲಿ ಏಪ್ರಿಲ್ 16ರಂದು ಟ್ವೀಟ್ ಮಾಡಿ, ಹೆಮ್ಮಾರಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದ ತಬ್ಲಿಘಿ ಜಮಾತ್ ವ್ಯಕ್ತಿಯ ಮನೆಗೆ ಪೊಲೀಸರು ಹಾಗೂ ವೈದ್ಯರು ಪರಿಶೀಲನೆ ನಡೆಸಲು ಹೋಗಿದ್ದರು. ಆಗ ಮೃತನ ಕುಟುಂಬಸ್ಥರು ದಾಳಿ ನಡೆಸಿದ್ದರು. ಈ ಮುಲ್ಲಾಗಳನ್ನು ಹಾಗೂ ಸೆಕ್ಯುಲರ್ ಮಾಧ್ಯಮಗಳನ್ನು ಸಾಲಾಗಿ ನಿಲ್ಲಿಸಿ ಗುಂಡಿಕ್ಕಬೇಕು. ಅವರು ನಮ್ಮನ್ನು ನಾಝಿ ಎಂದು ಕರೆದರೂ ಪರವಾಗಿಲ್ಲ ಎಂದು ಬರೆದುಕೊಂಡಿದ್ದರು.
Advertisement
Dear @Twitter gencocide calls from a verified account. Suspend. pic.twitter.com/lLUvEKdBcz
— Swati Chaturvedi (@bainjal) April 16, 2020
Advertisement
ರಂಗೋಲಿ ಚಾಂಡೆಲ್ ಟ್ವೀಟ್‍ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಒಂದು ಧರ್ಮದ ಬಗ್ಗೆ ಹೀಗೆ ಪ್ರಚೋದನಾಕಾರಿ ಹೇಳಿಕೆ ನೀಡುವುದು ಎಷ್ಟು ಸರಿ ಎಂಬ ಚರ್ಚೆ ಶುರುವಾಗಿತ್ತು. ಅಷ್ಟೇ ಅಲ್ಲದೆ ಅನೇಕ ನೆಟ್ಟಿಗರು ಟ್ವಿಟ್ಟರ್ ಸಂಸ್ಥೆಗೆ ದೂರಿದ್ದರು.
Advertisement
ಈ ಕುರಿತು ಪ್ರಸಿದ್ಧ ಕೋರಿಯೋಗ್ರಾಫರ್ ಫರಾ ಖಾನ್ ಟ್ವೀಟ್ ಮಾಡಿ, ಒಂದು ಸಮುದಾಯದ ಜನರನ್ನು ಕೊಲ್ಲಿ ಎಂದು ಹೇಳುವ ಈ ವಿಕೃತ ಮನಸ್ಸಿನ ಮಹಿಳೆಯನ್ನು ಅರೆಸ್ಟ್ ಮಾಡಿ ಎಂದು ಮುಂಬೈ ಪೊಲೀಸರಿ ಟ್ವೀಟ್ ಟ್ಯಾಗ್ ಮಾಡಿದ್ದರು. ಜೊತೆಗೆ, ಚಾಂಡೆಲ್ ಟ್ವಿಟರ್ ಖಾತೆ ಅಮಾನತುಗೊಳಿಸಿ ಎಂದು ಟ್ವಿಟ್ಟರ್ ಸಂಸ್ಥೆಗೆ ಕೇಳಿಕೊಂಡಿದ್ದರು.
Advertisement
Arrest this woman immediately for spreading vicious hatred and calling for killings of A community @MumbaiPolice .
Do also block this account @Twitter @TwitterIndia @jack for spreading religious hatred and fascism. https://t.co/NzBKK8JfZP
— Farah Khan (@FarahKhanAli) April 16, 2020
ಇದೇ ರೀತಿ ಸ್ವಾತಿ ಚತುರ್ವೇದಿ, ಕುಬ್ರಾ ಸೈಟ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಟ್ವಿಟ್ಟರ್ ಸಂಸ್ಥೆಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ಟ್ವೀಟರ್ ಸಂಸ್ಥೆಯು ಇಂದು ರಂಗೋಲಿ ಚಾಂಡೆಲ್ ಅವರ ಖಾತೆಯನ್ನು ಟ್ವೀಟರ್ ಅಮಾನತು ಮಾಡಿದೆ.