BollywoodCinemaLatest

ಕಂಗನಾ ರಣಾವತ್ ಸಿನಿಮಾಗೆ ವಿಶ್ ಮಾಡಿ ತಕ್ಷಣ ಡಿಲೀಟ್ ಮಾಡಿದ ಅಮಿತಾಭ್ ಬಚ್ಚನ್

ಬಾಲಿವುಡ್‌ನಲ್ಲಿ ಸದ್ಯ ಚಿತ್ರದ ಪೋಸ್ಟರ್ ಲುಕ್ ಮತ್ತು ಟ್ರೇಲರ್‌ನಿಂದ `ಧಾಕಡ್’ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. `ಧಾಕಡ್’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರಕ್ಕೆ ಸೂಪರ್ ಸ್ಟಾರ್ಸ್ ಶುಭಹಾರೈಸುತ್ತಿದ್ದಾರೆ. ಇದೀಗ `ಧಾಕಡ್’ ಚಿತ್ರದ ಹಾಡಿನ ಟೀಸರ್‌ನ್ನ ಬಿಗ್ ಬಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಡಿಲೀಟ್ ಮಾಡಿದ್ದಾರೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.

ಕಂಗನಾ ರಣಾವತ್ ನಟನೆಯ ಬಹುನಿರೀಕ್ಷಿತ ಸಿನಿಮಾ `ಧಾಕಡ್’ ಇದೇ ಮೇ 20ಕ್ಕೆ ತೆರೆಗೆ ಬರುತ್ತಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್‌ನ್ನ ಸಲ್ಮಾನ್ ಖಾನ್ ಶೇರ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಬಳಿಕ ಅಮಿತಾಭ್ ಬಚ್ಚನ್ ಕೂಡ ಚಿತ್ರದ ಹಾಡಿನ ಟೀಸರ್ ಹಂಚಿಕೊಂಡು ಗುಡ್ ವಿಶ್ಸ್ ಅಂತಾ ಪೋಸ್ಟ್ ಹಾಕಿದ್ದರು. ಆಮೇಲೆ ಅದೇನು ಆಯ್ತು ಗೊತ್ತಿಲ್ಲ ಏಕಾಎಕಿ ಬಿಗ್ ಬಿ ಪೋಸ್ಟ್ ಡಿಲೀಟ್ ಮಾಡಿದ್ರು.

ಇದೀಗ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿರೋ ಕಂಗನಾ, ಬಿಗ್ ಬಿ ಪೋಸ್ಟ್ ಡಿಲೀಟ್ ಕುರಿತು ಪ್ರತಿಕ್ರಿಯಿಸಿದ್ದಾರೆ. ಎಲ್ಲರಿಗೂ ವಯಕ್ತಿಕ ಅಭದ್ರತೆಗಳಿವೆ. ಅಮಿತಾಭ್ ಬಚ್ಚನ್ ಅವರು ಪೋಸ್ಟ್ ಹಾಕಿ 10 ನಿಮಿಷದಲ್ಲಿ ಡಿಲೀಟ್ ಮಾಡಿದ್ದಾರೆ. ಅವರಂತಹ ನಟರಿಗೆ ಅದ್ಯಾವ ಪ್ರೇಶರ್ ಇರುತ್ತದೆ ನನಗೆ ಗೊತ್ತಿಲ್ಲ, ಇದು ಕೊಂಚ ವಿಚಿತ್ರವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು

ಇನ್ನು ಸಲ್ಮಾನ್ ಖಾನ್ ವಿಶ್ಸ್‌ಗೆ ಕಂಗನಾ ರೀ ಪೋಸ್ಟ್ ಮಾಡಿ, ನನ್ನ ದಬಾಂಗ್ ಹೀರೋಗೆ ಧನ್ಯವಾದ. ಚಿತ್ರರಂಗದಲ್ಲಿ ನಾನು ಒಂಟಿ ಅಂತಾ ಎಂದು ಹೇಳುವುದಿಲ್ಲ. ಇಡೀ ʻಧಾಕಡ್ʼ ಚಿತ್ರದಿಂದ ನಿಮಗೆ ಥ್ಯಾಂಕ್ಸ್ ಎಂದು ಬರೆದುಕೊಂಡಿದ್ದಾರೆ. ಒಟ್ನಲ್ಲಿ ಕಾಂಟ್ರವರ್ಸಿ ಕ್ವೀನ್ ಕಂಗನಾ ಒಂದಲ್ಲಾ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ.

Leave a Reply

Your email address will not be published.

Back to top button