ರಿಲಯನ್ಸ್ ಜ್ಯುವೆಲ್ಸ್ (Reliance Jewels) ವತಿಯಿಂದ ಮೆಜೆಸ್ಟಿಕ್ ತಂಜಾವೂರ್ ಕಲೆಕ್ಷನ್ ಆಭರಣಗಳ ಅನಾವರಣ ಮಾಡಲಾಯ್ತು. ಅಕ್ಷಯ ತೃತೀಯ ಅಂಗವಾಗಿ ತಮಿಳುನಾಡಿನ ತಂಜಾವೂರಿನ (Thanjavur) ದೇವಾಲಯಗಳು, ಅರಮನೆ, ದರ್ಬಾರ್ ಹಾಲ್‌ಗಳಿಂದ ಸ್ಪೂರ್ತಿಗೊಂಡು ತಯಾರಿಸಿರೋ ಆಭರಣಗಳನ್ನ ಬೆಂಗಳೂರಿನ ರಿಲಾಯನ್ಸ್ ಜುವೆಲ್ಸ್ ಅನಾವರಣಗೊಳಿಸಿತು. ಈ ವೇಳೆ ತಂಜಾವೂರ್ ಕಲೆಕ್ಷನ್ ಆಭರಣಗಳನ್ನ ಧರಿಸಿ ಹೆಜ್ಜೆ ಹಾಕಿದ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ (Janhavi Kapoor) ಎಲ್ಲರ ಗಮನ ಸೆಳೆದಿದ್ದಾರೆ.


ನಟಿ ಜಾನ್ವಿ ಕಪೂರ್ ಮಾತನಾಡಿ, ರಿಲಯನ್ಸ್ ಜ್ಯುವೆಲ್ಸ್ ಬಿಡುಗಡೆ ಮಾಡಿದ ತಂಜಾವೂರ್ ಕಲೆಕ್ಷನ್‌ನ ಭಾಗವಾಗಿರುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ. ಆಭರಣವು ಅದ್ಭುತವಾಗಿದೆ ಮತ್ತು ತಂಜಾವೂರಿನ ವೈಭವಯುತ ಪರಂಪರೆಯ ಸ್ವಾದವನ್ನು ಇದು ಸೆರೆಹಿಡಿಯುತ್ತದೆ. ತಮಿಳುನಾಡು ಮತ್ತು ಅದರ ಶ್ರೀಮಂತ ಸಂಸ್ಕೃತಿಯು ಎಂದಿಗೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಏಕೆಂದರೆ, ನನ್ನ ಕುಟುಂಬದ ಮೂಲ ಇದಾಗಿದೆ ಮತ್ತು ಈ ಅದ್ಭುತ ನೆಕ್ಲೇಲೆಸ್ ಸೆಟ್ ಅನ್ನು ಧರಿಸಲು ನನಗೆ ತುಂಬಾ ಖುಷಿಯಾಗುತ್ತದೆ. ಇದನ್ನು ಕುಸುರಿ ಕೆಲಸಕ್ಕೆ ಹೆಚ್ಚಿನ ಗಮನ ನೀಡಿ ಮತ್ತು ಅತ್ಯುತ್ತಮ ಕೌಶಲದಿಂದ ವಿನ್ಯಾಸ ಮಾಡಿ ರೂಪಿಸಲಾಗಿದೆ ಎಂದು ನಟಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ತಂಜಾವೂರು ಕಲೆಕ್ಷನ್ ಈಗ ಭಾರತದ ಎಲ್ಲ ರಿಲಯನ್ಸ್ ಜ್ಯುವೆಲ್ಸ್ ಸ್ಟೋರ್‌ಗಳಲ್ಲಿ ಲಭ್ಯವಿದೆ. ಏ.1 ರಿಂದ 24ರವರೆಗೆ ಕ್ಯಾಂಪೇನ್ ಅವಧಿಯಲ್ಲಿ ಚಿನ್ನದ ಆಭರಣ ತಯಾರಿಕೆ ಮತ್ತು ವಜ್ರದ ಆಭರಣ ಇನ್ವಾಯ್ಸ್‌ಗಳ ಮೇಲೆ ಶೇಕಡ 25ರ ವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ.

