ತೆಲುಗಿನ ಮತ್ತೊಂದು ಚಿತ್ರ ಒಪ್ಪಿಕೊಂಡ ಬಾಲಿವುಡ್ ನಟಿ ಜಾನ್ವಿ ಕಪೂರ್

Public TV
1 Min Read
Janhvi Kapoor 5

ಲವು ದಿನಗಳ ಹಿಂದೆಯಷ್ಟೇ ತೆಲುಗು ಸಿನಿಮಾ ರಂಗಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದರು ಬಾಲಿವುಡ್ (Bollywood) ನಟಿ ಜಾನ್ವಿ ಕಪೂರ್ (Janhvi Kapoor). ಜ್ಯೂನಿಯರ್ ಎನ್.ಟಿ. ಆರ್ (Jr. NTR) ಸಿನಿಮಾದ ಮೂಲಕ ದಕ್ಷಿಣದ ಚಿತ್ರಗಳತ್ತ ಅವರು ಮುಖ ಮಾಡಿದ್ದರು. ಮೊನ್ನೆಯಷ್ಟೇ ಈ ಸಿನಿಮಾದ ಮುಹೂರ್ತವಾಗಿದ್ದು, ಶೂಟಿಂಗ್ ಕೂಡ ಶುರುವಾಗಿದೆ.

Janhvi Kapoor 3

ಜಾನ್ವಿ ಒಪ್ಪಿಕೊಂಡ ತೆಲುಗಿನ ಮೊದಲ ಸಿನಿಮಾ ಇನ್ನೂ ಒಂದು ಹಂತದ ಶೂಟಿಂಗ್ ಕೂಡ ಮುಗಿಸಿಲ್ಲ. ಆಗಲೇ ತೆಲುಗಿನ ಮತ್ತೊಂದು ಚಿತ್ರವನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ರಾಮ್ ಚರಣ್ (Ram Charan) ನಟನೆಯ ಹೊಸ ಸಿನಿಮಾಗೆ ಜಾನ್ವಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ತೆಲುಗು ಸಿನಿಮಾ ರಂಗದಲ್ಲೇ ಇನ್ನೂ ಹತ್ತು ವರ್ಷ ಪ್ರಶಾಂತ್ ನೀಲ್ ಲಾಕ್?

Janhvi kapoor 3 1

`ದಢಕ್’ (Dhadak) ಸಿನಿಮಾದ ಮೂಲಕ ಬಾಲಿವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿರುವ ಜಾನ್ವಿ ಕಪೂರ್ (Janhavi Kapoor) ಹಲವು ಬಗೆಯ ಪಾತ್ರಗಳ ಮೂಲಕ ಕಾಣಿಸಿಕೊಂಡರು. ನಟಿ ಶ್ರೀದೇವಿ ಕೂಡ ಬಹುಭಾಷಾ ನಟಿಯಾಗಿ ಸೈ ಎನಿಸಿಕೊಂಡಿದ್ದರು. ಈಗ ಅಮ್ಮನ ಹಾದಿಯನ್ನೇ ಜಾನ್ವಿ ಕೂಡ ಫಾಲೋವ್ ಮಾಡ್ತಿದ್ದಾರೆ. ಸೌತ್ ರಂಗದತ್ತ ನಟಿ ಮುಖ ಮಾಡ್ತಿದ್ದಾರೆ.

janhvi kapoor 3

ಸಾಕಷ್ಟು ಸಂದರ್ಶನಗಳಲ್ಲಿ ಜಾನ್ವಿ ತೆಲುಗಿನಲ್ಲಿ ನಟಿಸುವ ಬಗ್ಗೆ ಮಾತನಾಡಿದ್ದರು. ಜ್ಯೂನಿಯರ್ ಎನ್‌ಟಿಆರ್ ನಟನೆ ಅಂದ್ರೆ ಇಷ್ಟ, ಅವರೊಂದಿಗೆ ನಟಿಸಬೇಕು ಎಂದು ಕೂಡ ಹೇಳಿದ್ದರು. ಈ ಎಲ್ಲಾ ವಿಚಾರಗಳು ಸಖತ್ ಸದ್ದು ಮಾಡಿದ್ದವು. ಕೊನೆಗೂ ಕೊರಟಾಲ ಶಿವ (Kortala Shiva)  ನಿರ್ದೇಶನದ ಸಿನಿಮಾದಲ್ಲಿ ತಾರಕ್‌ಗೆ ಜಾನ್ವಿ ನಾಯಕಿಯಾಗಿ ಆಯ್ಕೆಯಾದರು.

Share This Article