ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಎಲಾನ್ ಮಸ್ಕ್ (Elon Musk) ತಾಯಿ ಮಾಯೆ ಮಸ್ಕ್ (Maye Musk) ಜೊತೆ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಮುಂಬೈನ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಪ್ರಣಿತಾ ಮಗನ ನಾಮಕರಣದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು
ಏ.20ರಂದು ಮಾಯೆ ಮಾಸ್ಕ್ ಅವರೊಂದಿಗೆ ನಟಿ ಜಾಕ್ವೆಲಿನ್ (Jacqueline Fernandez) ಮುಂಬೈನ ಸಿದ್ಧಿವಿನಾಯಕ ದೇವಾಲಯಕ್ಕೆ (Siddhi Vinayak Temple) ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ನಟಿ ಗೋಲ್ಡನ್ ಬಣ್ಣದ ಬಟ್ಟೆಯಲ್ಲಿ ಮಿಂಚಿದ್ರೆ, ಹಳದಿ ಬಣ್ಣದ ಉಡುಗೆಯನ್ನು ಎಲಾನ್ ಮಸ್ಕ್ ತಾಯಿ ಧರಿಸಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶ ಸಿಎಂ ಭೇಟಿಯಾದ ರಾಕಿಂಗ್ ಸ್ಟಾರ್ ಯಶ್
ತಮ್ಮ ಬರವಣಿಗೆಯ ʻಎ ವುಮೆನ್ ಮೇಕ್ಸ್ ಎ ಪ್ಲ್ಯಾನ್ʼ ಎಂಬ ಪುಸ್ತಕವನ್ನು ಮುಂಬೈನಲ್ಲಿ ಬಿಡುಗಡೆ ಮಾಡಲಿದ್ದಾರೆ. ಹೀಗಾಗಿ ಪುಸ್ತಕ ಲಾಂಚ್ ಮಾಡುವ ಮುನ್ನ ಮಾಯೆ ಮಸ್ಕ್ ಅವರು ಸಿದ್ಧಿ ವಿನಾಯಕನ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ಜಾಕ್ವೆಲಿನ್ ಕೂಡ ಸಾಥ್ ನೀಡಿದ್ದಾರೆ.
ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಾಕ್ವೆಲಿನ್ ಅವರ ತಾಯಿ ಕಿಮ್ ಫರ್ನಾಂಡಿಸ್ ಏ.6ರಂದು ನಿಧನರಾದರು. ಅಮ್ಮನ ಅಗಲಿಕೆಯ ನೋವಿನ ನಡುವೆ ಮತ್ತೆ ಸಿನಿಮಾ ಕೆಲಸದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.