ಮುಂಬೈ: ಬಾಲಿವುಡ್ ನಟಿ ದಿಶಾ ಪಟಾನಿ ಬಿಕಿನಿ ತೊಟ್ಟು ಹಾಟ್ ಆಗಿ ಪೋಸ್ ಕೊಟ್ಟ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕವಾಗಿ ಪಡ್ಡೆಗಳ ನಿದ್ದೆ ಗೆಡಿಸಿದ್ದಾರೆ.
ದಿಶಾ ಪಟಾನಿ ಮಾಲ್ಡೀವ್ಸ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ನಟಿ ಸಾಗರವನ್ನು ಎಷ್ಟು ಇಷ್ಟಪಡುತ್ತಾರೆ ಎಂಬುದು ಅವರ ಇನ್‍ಸ್ಟಾಗ್ರಾಮ್ ನೋಡಿದರೆ ಗೊತ್ತಾಗುತ್ತದೆ. ಮತ್ತೊಮ್ಮೆ ಬೀಚ್ ಮೇಲಿನ ಪ್ರೀತಿಯನ್ನು ತೋರಿಸುವ ಫೋಟೋಗಳು ಮತ್ತು ಬಿಕಿನಿ ತೊಟ್ಟು ಬೋಲ್ಡ್ ಲುಕ್‍ನಲ್ಲಿ ಕಾಣಿಸಿಕೊಂಡ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮೀಸಲಾತಿ ಅವಹೇಳನ- ವಿವಾದಕ್ಕೆ ಒಳಗಾದ 83 ಸಿನಿಮಾ
View this post on Instagram
ದಿಶಾ ಪಟಾನಿ ಅವರು ಕಡಲ ಕಿನಾರೆಯಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಬಿಕಿನಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳ ಎದೆಬಡಿತ ಹೆಚ್ಚಾಗಿದೆ. ನಟಿ ದಿಶಾ ಪಟಾನಿ ತಮ್ಮ ಗ್ಲಾಮರಸ್ ಫೋಟೋಶೂಟ್‍ಗಳಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಈ ಫೋಟೋ ತುಂಬಾ ಬೋಲ್ಡ್ ಮತ್ತು ಗ್ಲಾಮರಸ್ ಆಗಿ ಕಾಣಿಸುತ್ತಿದೆ. ಈ ಫೋಟೋಗೆ ಸಾಕಷ್ಟು ಲೈಕ್ಸ್ ಮತ್ತು ಕಾಮೆಂಟ್‍ಗಳು ಬರುತ್ತಿವೆ. ಇದನ್ನೂ ಓದಿ: ದಿಶಾ ಪಟಾನಿ ಬಿಕಿನಿ ಫೋಟೋಗೆ ಪಡ್ಡೆಗಳು ಫಿದಾ
View this post on Instagram
ದಿಶಾ ಪಟಾನಿ, ಉತ್ತರ ಪ್ರದೇಶದ ರಾಯ್ ಬರೇಲಿಯ ರಜಪೂತ್ ಮನೆತನದವರು. ದಿಶಾ ಅವರ ತಂದೆ ಪೊಲೀಸ್ ಆಫೀಸರ್ ಆಗಿದ್ದಾರೆ. ದಿಶಾ ಅವರು ಮೊದಲು ಅಭಿನಯಿಸಿದ ಸಿನಿಮಾ ತೆಲುಗು ಭಾಷೆಯ ಲೋಫರ್. ವರುಣ್ ತೇಜ ಜೊತೆ ನಾಯಕಿಯಾಗಿ ದಿಶಾ ಅಭಿನಯಿಸಿದ ಈ ಸಿನಿಮಾ ಆಕೆಗೆ ಭಾರೀ ಹೆಸರು ತಂದುಕೊಟ್ಟಿತ್ತು. ಎಂ.ಎಸ್. ಧೋನಿ, ರಾಧೆ ಸಿನಿಮಾ ಖ್ಯಾತಿಯ ದಿಶಾ ಪಟಾನಿಗೆ ತೆಲುಗು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.