ದಾವಣಗೆರೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಭೇಟಿ

Public TV
1 Min Read
DVG DEEPIKA PADUKONE AV 3

ದಾವಣಗೆರೆ: ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯವರು ದಾವಣೆಗೆರೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸೋಮವಾರ ಸಂಜೆ ದಾವಣಗೆರೆಗೆ ಆಗಮಿಸಿದ್ದ ದೀಪಿಕಾ ಪಡುಕೋಣೆಯವರು ಹೋಟೆಲ್ ಒಂದರಲ್ಲಿ ತಂಗಿ, ಮಂಗಳವಾರ ಬೆಳಗ್ಗೆ 10 ಗಂಟೆಗೆ ದಾವಣಗೆರೆ ತಾಲೂಕಿನ ಮತ್ತು ಜಗಳೂರು ತಾಲೂಕಿನ ಬಿಳಿಚೋಡು, ಪಲ್ಲಾಗಟ್ಟೆ ಹಾಗೂ ಮೆಳ್ಳೆಕಟ್ಟೆ ಗ್ರಾಮಗಳಿಗೆ ಭೇಟಿ ನೀಡಿದ್ದರು.

ದೀಪಿಕಾ ಪಡುಕೋಣೆಯವರು ಲೈವ್ ಲವ್ ಲಾಫ್  ಫೌಂಡೇಶನ್ (ಎನ್‍ಜಿಓ) ಸಹಯೋಗದೊಂದಿಗೆ ನಡೆದ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾನಸಿಕ ಅಸ್ವಸ್ಥರ ಜೊತೆ ಮಾತುಕತೆ ನಡೆಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕಾರ್ಯಕ್ರಮ ಮುಗಿದ ಬಳಿಕ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಾಣಗಟ್ಟೆ ಮಾಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

deepika

DVG deepika 2

DVG deepika 4

DVG deepika 1

DVG DEEPIKA PADUKONE

DVG DEEPIKA PADUKONE 4

Share This Article
Leave a Comment

Leave a Reply

Your email address will not be published. Required fields are marked *