Connect with us

Bollywood

ಸಲ್ಮಾನ್ ಜೊತೆ ಡ್ಯಾನ್ಸ್ ಮಾಡಿ, ತಬ್ಬಿಕೊಂಡ ನಟಿ- ಬಳಿಕ ಮನಸ್ಸಿನ ಮಾತುಗಳನ್ನು ಬರೆದು ಪೋಸ್ಟ್

Published

on

ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಗುರುವಾರ ತಮ್ಮ 53ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ನಟಿ ಸುಶ್ಮಿತಾ ಸೇನ್, ಸಲ್ಮಾನ್ ಅವರನ್ನು ತಬ್ಬಿಕೊಂಡು ಭಾವುಕರಾಗಿದ್ದಾರೆ.

ಸಲ್ಮಾನ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಾಲಿವುಡ್ ಕಲಾವಿದರು ಹಾಗೂ ಅವರ ಅಭಿಮಾನಿಗಳು ಬೆಳಗ್ಗೆಯಿಂದ ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರುತ್ತಿದ್ದರು. ಸಲ್ಮಾನ್ ಪ್ರತಿ ವರ್ಷ ಪನ್‍ವೇಲ್ ಫಾರ್ಮ್ ಹೌಸ್‍ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಗುರುವಾರ ಕೂಡ ಅವರು ಅಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಮಧ್ಯರಾತ್ರಿಯೇ ಹಲವು ಬಾಲಿವುಡ್ ಕಲಾವಿದರು ಸಲ್ಮಾನ್ ಮನೆಗೆ ಆಗಮಿಸಿ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾದ್ದರು.

ಸಲ್ಮಾನ್ ಖಾನ್ ಹುಟ್ಟುಹಬ್ಬದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅದರಲ್ಲಿ ನಟಿ ಸುಶ್ಮಿತಾ ಸೇನ್ ಸಲ್ಮಾನ್ ಜೊತೆ ಡ್ಯಾನ್ಸ್ ಮಾಡಿ ನಂತರ ಅವರನ್ನು ತಬ್ಬಿಕೊಂಡಿರುವ ವಿಡಿಯೋ ಕೂಡ ವೈರಲ್ ಆಗಿದೆ. ಈ ವಿಡಿಯೋವನ್ನು ಸುಶ್ಮಿತಾ ಸೇನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ ಭಾವನಾತ್ಮಕವಾಗಿ ತಮ್ಮ ಮನಸ್ಸಿನ ಮಾತುಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ಜೀವನದಲ್ಲಿ ನಮಗೆ ಒಬ್ಬರ ಜೊತೆ ಡ್ಯಾನ್ಸ್ ಮಾಡಲು ಅಥವಾ ಅವರ ಜೊತೆ ಕುಳಿತುಕೊಳ್ಳುವ ಅವಕಾಶ ಸಿಕ್ಕರೆ ನಾವು ಅವರ ಜೊತೆ ಡ್ಯಾನ್ಸ್ ಮಾಡುತ್ತೇವೆ. ನಾನು ಪ್ರೇಮ್(ಹಲವು ಚಿತ್ರಗಳಲ್ಲಿ ಸಲ್ಮಾನ್ ಖಾನ್ ಪಾತ್ರದ ಹೆಸರು)ನನ್ನು ಆ ದಿನದಿಂದ ಪ್ರೀತಿಸುತ್ತಿದ್ದೇನೆ. 1989ರಲ್ಲಿ ‘ಮೈ ನೇ ಪ್ಯಾರ್ ಕಿಯಾ’ ಚಿತ್ರದಿಂದ ಶುರುವಾದ ಈ ಯಾತ್ರೆ 2005ರ ‘ಮೈ ನೇ ಪ್ಯಾರ್ ಕ್ಯೂ ಕೀಯಾ’ ವರೆಗೂ ಜೊತೆಯಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ನಿಜವಾಗಲೂ ಇದು ಅದ್ಭುತವಾದ ಪಯಣ. ತನ್ನ ಹುಟ್ಟುಹಬ್ಬವನ್ನು ಆಚರಿಸಲು ನಿಲ್ಲಿಸದ ಆ ವ್ಯಕ್ತಿಯನ್ನು ನಾನು ಹುಟ್ಟುಹಬ್ಬದ ಶುಭಾಶಯ ಕೋರುತ್ತೇನೆ. ಸಲ್ಮಾನ್ ಅವರ ಜೀವನದಲ್ಲಿ ಮುಂಬರುವ ದಿನಗಳು ಚೆನ್ನಾಗಿರಲಿ. ನಾನು ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ ಎಂಬುದು ನಿಮಗೆ ಗೊತ್ತು” ಎಂದು ಪೋಸ್ಟ್ ಮಾಡಿದ್ದಾರೆ.

ಸುಶ್ಮಿತಾ ಹಾಗೂ ಸಲ್ಮಾನ್ ಮೈ ನೇ ಪ್ಯಾರ್ ಕ್ಯೂಂ ಕಿಯಾ ಚಿತ್ರ ಮಾತ್ರವಲ್ಲದೇ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. 1999ರಲ್ಲಿ ‘ಬೀವೀ ನಂ.1’, 2002ರಲ್ಲಿ ‘ತುಮ್‍ಕೋ ನಾ ಭೂಲ್ ಪಾಯೇಂಗೆ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *