ಬಾಲಿವುಡ್ ನಟಿ ಅನನ್ಯ ಪಾಂಡೆ ಕಾಪಿ ಮಾಡಿದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ

Public TV
2 Min Read
FotoJet 1 66

ಗತ್ತಿನಾದ್ಯಂತ ಇದೀಗ  ಲಿಯೋನೆಲ್ ಮೆಸ್ಸಿ ಕುರಿತಾಗಿಯೇ ಮಾತು. ಅರ್ಜೆಂಟಿನಾ (Argentina) ಫಿಫಾ ವಿಶ್ವಕಪ್ ಗೆಲ್ಲುತ್ತಿದ್ದಂತೆಯೇ ಮೆಸ್ಸಿ ಗುಣಗಾನ ಯಾವ ದೇಶವನ್ನೂ ಬಿಟ್ಟಿಲ್ಲ. ಬಹುತೇಕ ದೇಶಗಳಲ್ಲಿ ಮೆಸ್ಸಿಯನ್ನು ಕೊಂಡಾಡಲಾಗುತ್ತಿದೆ. ಇಂತಹ ಮೆಸ್ಸಿ ಇದೀಗ ಬಾಲಿವುಡ್ ನಟಿ ಅನನ್ಯ ಪಾಂಡೆ (Ananya Pandey)ಯನ್ನು ಕಾಪಿ ಮಾಡಿದರಾ ಅನ್ನುವ ಅನುಮಾನವನ್ನು ಭಾರತದಲ್ಲಿರುವ ಮೆಸ್ಸಿ ಅಭಿಮಾನಿಗಳು ವ್ಯಕ್ತ ಪಡಿಸಿದ್ದಾರೆ. ಈ ಅನುಮಾನಕ್ಕೆ ಕಾರಣ, ಮೆಸ್ಸಿ ಟ್ರೋಫಿಯನ್ನು ತಬ್ಬಿಕೊಂಡು ಮಲಗಿರುವ ಫೋಟೋ.

Lionel Messi 1 2

ಹೌದು, ಫಿಫಾ ವಿಶ್ವಕಪ್ ಗೆಲ್ಲುವುದು ಮೆಸ್ಸಿ ಪಾಲಿಗೆ ದೊಡ್ಡ ಗುರಿಯೇ ಆಗಿತ್ತು. ಇನ್ನೆಂದೂ ವಿಶ್ವಕಪ್ ನಲ್ಲಿ ಆಡಲಾರೆ ಎಂದು ಘೋಷಿಸಿಯೂ ಬಿಟ್ಟಿದ್ದರು. ವಿಶ್ವಕಪ್ ನಲ್ಲಿ ಇದು ಅವರ ಕೊನೆಯ ಆಟವಾಗಿದ್ದರಿಂದ ಆಸೆಗಣ್ಣಿನಿಂದಲೇ ಫುಟ್ ಬಾಲ್ (Football) ಮೇಲೆ ಕಾಲಿಟ್ಟಿದ್ದರು. ಕೊನೆಗೂ ಅದು ಈಡೇರಿದೆ. ರೋಚಕ ಪಂದ್ಯದಲ್ಲಿ ಗೆದ್ದು, ಮೆಸ್ಸಿ (Lionel Messi) ವಿಶ್ವ ಕಪ್ ಗೆ ಮುತ್ತಿಟ್ಟಿದ್ದರು. ಆ ಮುತ್ತಿನ ಗಮ್ಮತ್ತಿನಿಂದ ಹೊರಬರಲು ಇವತ್ತಿಗೂ ಅವರಿಗೆ ಸಾಧ್ಯವಾಗುತ್ತಿಲ್ಲ. ಅದರಲ್ಲೂ ವಿಶ್ವ ಕಪ್ ಗೆದ್ದ ದಿನ ಕಪ್ ಅನ್ನು ತಬ್ಬಿಕೊಂಡೇ ಮಲಗಿದ್ದರು ಮೆಸ್ಸಿ. ಆ ಫೋಟೋ ವೈರಲ್ ಆಗಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಅಚ್ಚರಿಯ ಎಂಟ್ರಿ : ಹಾವು ಏಣಿ ಆಟದಲ್ಲಿ ಮಂಜು ಪಾವಗಡ

FotoJet 2 63

ಈ ಜಗತ್ತಿನಲ್ಲಿ ಇರುವುದು ನಾನು ಮತ್ತು ಕಪ್ ಎಂದು ನಿರಾಳವಾಗಿ ಮಲಗಿರುವ ಮೆಸ್ಸಿ, ಫೋಟೋ ರೀತಿಯಲ್ಲೇ ಈ ಹಿಂದೆ ಬಾಲಿವುಡ್ ನಟಿ ಅನನ್ಯ ಪಾಂಡೆ ಕೂಡ ಫಿಲ್ಮ್ ಫೇರ್ ಪ್ರಶಸ್ತಿಯ ಟ್ರೋಫಿಯನ್ನು ಹಿಡಿದು ಮಲಗಿದ್ದಾರೆ. ಆ ಮುಖಭಾವವೂ ಮೆಸ್ಸಿ ರೀತಿಯಲ್ಲೇ ಆನಂದದಿಂದಿದೆ. ಹಾಗಾಗಿ ಅನನ್ಯ ಪಾಂಡೆ ಅವರನ್ನು ಮೆಸ್ಸಿ ನಕಲು ಮಾಡಿದ್ದಾರೆ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ. ಹಾಗಂತ ಇದು ಸೀರಿಯಸ್ ಆಗಿ ಆಗುತ್ತಿರುವ ಟ್ರೋಲ್ ಅಲ್ಲ, ತಮಾಷೆ ಅನ್ನುವಂತೆ ಮೆಸ್ಸಿಯನ್ನು ಕಾಲೆಳೆದಿದ್ದಾರೆ.

Lionel Messi 7

ಮೆಸ್ಸಿಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಒಲಿದು ಬಂದಿದ್ದರೂ ಫಿಫಾ ವಿಶ್ವಕಪ್ (World Cup) ಮಾತ್ರ ಮರಿಚಿಕೆಯಾಗಿತ್ತು. ಈ ಬಾರಿ ತನ್ನ ಕೊನೆಯ ವಿಶ್ವಕಪ್ ಆಡಲು ಕಣಕ್ಕಿಳಿದ ಮೆಸ್ಸಿ ವಿಶ್ವಕಪ್ ಮುಡಿಗೇರಿಸಿಕೊಳ್ಳುವ ಬಯಕೆಯೊಂದಿಗೆ ಕತಾರ್‌ಗೆ ಕಾಲಿಟ್ಟಿದ್ದರು. ಆದರೆ ಅರ್ಜೆಂಟಿನಾಗೆ ಆರಂಭದಲ್ಲೇ ಶಾಕ್ ಎದುರಾಗಿತ್ತು. ಅಚ್ಚರಿ ಎಂಬಂತೆ ಅರ್ಜೆಂಟಿನಾ ತನ್ನ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾ ವಿರುದ್ಧ ಸೋತು ಟೂರ್ನಿಯಿಂದ ಹೊರ ಬೀಳುವ ಇಕ್ಕಟ್ಟಿಗೆ ಸಿಲುಕಿತ್ತು. ಆದರೆ ಛಲಬಿಡದ ಮೆಸ್ಸಿ ತನ್ನ ಮ್ಯಾಜಿಕ್ ಮುಂದುವರಿಸಿದರು. ಆ ಬಳಿಕ ಲೀಗ್ ಮತ್ತು ನಾಕೌಟ್, ಸೆಮಿಫೈನಲ್ ಸಹಿತ ಫೈನಲ್‍ನಲ್ಲಿ ಗೋಲು ಸಿಡಿಸುತ್ತ ಫೈನಲ್‍ನಲ್ಲಿ ಫ್ರಾನ್ಸ್‌ನ್ನು ಬಗ್ಗುಬಡಿದು ಪ್ರಶಸ್ತಿ ಗೆದ್ದು ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದರು. ಜೊತೆಗೆ ವಿಶ್ವಕಪ್ ಗೆಲ್ಲುವ ತಮ್ಮ ಕನಸನ್ನು ಈಡೇರಿಸಿಕೊಂಡರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *