ಬಾಲಿವುಡ್ ನಟಿ ಆಲಿಯಾ ಭಟ್ ತಾತ ನಿಧನ

Public TV
1 Min Read
alia bhatt grandfather

ಹೆಸರಾಂತ ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಅವರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ  ಫಲಿಸಲಿಲ್ಲ. ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಲಿಯಾ ಭಟ್ ತಾತ   ನರೇಂದ್ರ ರಜ್ದಾನ್ (Narendra Razdan) ಇಂದು ನಿಧನರಾಗಿದ್ದಾರೆ (Passed away). ತಾತನನ್ನು ಅತೀ ಹೆಚ್ಚು ಪ್ರೀತಿಸುತ್ತಿದ್ದ ಆಲಿಯಾ, ಅವರೊಂದಿಗೆ ಮತ್ತಷ್ಟು ಸಮಯ ಕಳೆಯುವುದಕ್ಕಾಗಿ ವಿದೇಶ ಪ್ರವಾಸವನ್ನು ಅವರು ರದ್ದು ಮಾಡಿದ್ದರು.

alia bhatt 4

ಹಲವು ದಿನಗಳ ಹಿಂದೆ ತಾತನ ಆರೋಗ್ಯ (Health) ಸ್ಥಿತಿ ಗಂಭೀರವಾಗಿದೆ ಎಂದು ಅರಿತು ವಿದೇಶ ಪ್ರಯಾಣದ ಸಿದ್ಧತೆಯಲ್ಲಿದ್ದ ಆಲಿಯಾ, ಪ್ರವಾಸವನ್ನು ರದ್ದು ಮಾಡಿಕೊಂಡಿದ್ದರು. ಇನ್ನೇನು ವಿಮಾನ ಏರ ಬೇಕಿದ್ದ ಆಲಿಯಾಗೆ ತಾತನ ಆರೋಗ್ಯ ಸ್ಥಿತಿ ತಿಳಿಯುತ್ತಿದ್ದಂತೆಯೇ ಏರ್ ಪೋರ್ಟ್ ನಿಂದ ಅವರು ವಾಪಸ್ಸಾಗಿದ್ದರು.

alia bhatt 5

ಆಲಿಯಾ ಭಟ್ ಅವರ ತಾತ (grandfather) ನರೇಂದ್ರ ರಜ್ದಾನ್  ಲಂಗ್ ಇನ್ ಫೆಕ್ಷನ್ ನಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅಂದುಕೊಂಡಂತೆ ಆಗಿದ್ದರೆ ಆಲಿಯಾ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಆದರೆ, ತಾತ ಆರೋಗ್ಯ ಹದಗೆಟ್ಟಿದ್ದರಿಂದ ಪ್ರಯಾಣವನ್ನು ಕ್ಯಾನ್ಸಲ್ ಮಾಡಿಕೊಂಡಿದ್ದರು. ಇದೀಗ ತಾತ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

 

ನರೇಂದ್ರ ಅವರ ಚಿಕಿತ್ಸೆಗಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆರೋಗ್ಯ ಸ್ಥಿತಿ ಕ್ರಿಟಿಕಲ್ ಆದ ಕಾರಣದಿಂದಾಗಿ ಐಸಿಯುಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ನೆಚ್ಚಿನ ನಟಿ ಆಲಿಯಾ ಅಭಿಮಾನಿಗಳು ಅವರ ತಾತನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದರು. ಆದರೆ, ಅವರೆಲ್ಲರ ಪ್ರಾರ್ಥನೆಗೆ ಫಲ ಸಿಗಲಿಲ್ಲ.

Share This Article