ಬಾಲಿವುಡ್ (Bollywood) ಬ್ಯೂಟಿ ಆಲಿಯಾ ಭಟ್ (Alia Bhatt) ಸದ್ಯ ವೈವಾಹಿಕ ಬದುಕಿನತ್ತ ಬ್ಯುಸಿಯಾಗಿದ್ದಾರೆ. ಮುದ್ದು ಮಗಳು ರಾಹಾ (Raha) ಆರೈಕೆಯ ಜೊತೆ ಸಿನಿಮಾರಂಗಕ್ಕೆ ಕಮ್ಬ್ಯಾಕ್ ಆಗಲು ರೆಡಿಯಾಗಿದ್ದಾರೆ. ಸದ್ಯ ಆಲಿಯಾ, ಜಾಹೀರಾತಿನ ಪೋಸ್ಟ್ನೊಂದಿಗೆ ಮಗುವಿನ ಫೋಟೋ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.
Advertisement
ನಟಿ ಆಲಿಯಾ – ರಣ್ಬೀರ್ ಕಪೂರ್ (Ranbir Kapoor) ಕಳೆದ ವರ್ಷ ಹಸೆಮಣೆ ಏರಿದ್ದರು. ಈಗ ಮುದ್ದು ಮಗಳು ರಾಹಾ ಆಗಮನದ ಖುಷಿಯಲ್ಲಿದ್ದಾರೆ. ಮಗಳ ಬೆಳವಣಿಗೆಯನ್ನ ನೋಡಿ ಕಪೂರ್ ಖುಷಿಪಡ್ತಿದ್ದಾರೆ. ಇದೀಗ ಅನುಷ್ಕಾ ಶರ್ಮಾ ಅವರ ಹಾದಿಯಲ್ಲಿ ಆಲಿಯಾ ಭಟ್ (Alia Bhatt) ಸಾಗುತ್ತಿದ್ದಾರೆ. ಮಗಳ ಮುಖವನ್ನ ಹೊರ ಜಗತ್ತಿಗೆ ಪರಿಚಯಿಸದೇ ಕ್ಯಾಮೆರಾ ಕಣ್ಣಿಂದ ದೂರವಿಟ್ಟಿದ್ದಾರೆ.
Advertisement
View this post on Instagram
Advertisement
ಇದೀಗ ನಟಿ ಆಲಿಯಾ ಭಟ್ ಹೊಸ ಪೋಸ್ಟ್ ಹಂಚಿಕೊಂಡಿದ್ದಾರೆ. ಜಾಹೀರಾತಿನ ಪೋಸ್ಟ್ ಅನ್ನು ನಟಿ ಹಂಚಿಕೊಂಡಿರೋದನ್ನ ನೋಡಿ ಆಲಿಯಾ ಮಗು ಎಂದೇ ಕೆಲವರು ಭಾವಿಸಿದ್ದಾರೆ. ಚಿತ್ತಾರಗಳ ಮಧ್ಯೆ ಕುಳಿತಿರುವ ಮಗು ಪಿಂಕ್ ಬಣ್ಣದ ಬಟ್ಟೆ ತೊಟ್ಟಿದೆ. ಅಂದಹಾಗೆ ಇದು ಬ್ರ್ಯಾಂಡ್ ಪ್ರಚಾರಕ್ಕಾಗಿ ಆಲಿಯಾ ಭಟ್ ಪೋಸ್ಟ್ ಶೇರ್ ಮಾಡಿದ್ದಾರೆ. ಹಾಗಾಗಿ ಇದು ಆಲಿಯಾ ಮಗು ರಾಹಾ ಎಂದು ಅಭಿಮಾನಿಗಳು ತಪ್ಪು ಗ್ರಹಿಸಿದ್ದಾರೆ. ಇದನ್ನೂ ಓದಿ: ತುಪ್ಪದ ಹುಡುಗಿ ಹಾಟ್ ಹಾಟ್, ಪಡ್ಡೆಹುಡುಗರ ನಿದ್ದೆಗೆಡಿಸಿದ `ರಾ’ಗಿಣಿ
Advertisement
ಅನುಷ್ಕಾ ಶರ್ಮಾ(Anushka Sharma) ಮತ್ತು ವಿರಾಟ್ ಕೊಹ್ಲಿ (Viraat Kohli) ಅವರಂತೆಯೇ ಆಲಿಯಾ ದಂಪತಿ ಯೋಚನೆ ಮಾಡಿದ್ದು, ಸದ್ಯ ಮಗಳು ರಾಹಾ ಮುಖವನ್ನು ರಿವೀಲ್ ಮಾಡುವ ಪ್ಲ್ಯಾನ್ನಲ್ಲಿ ಇಲ್ಲ. ರಾಹಾ ಬೆಳವಣಿಗೆಯನ್ನು ಖಾಸಗಿಯಾಗಿ ಇಡಲು ಆಲಿಯಾ-ರಣ್ಬೀರ್ ಜೋಡಿ ಯೋಚಿಸಿದ್ದಾರೆ.
ಇನ್ನೂ ನಟಿ ಆಲಿಯಾ ಭಟ್ `ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’, `ಬ್ರಹ್ಮಾಸ್ತ್ರ 2′ (Bhramastra 2) ಚಿತ್ರದ ಮೂಲಕ ತೆರೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k