ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಕಾನ್ ಫಿಲ್ಮ್ ಫೆಸ್ಟಿವಲ್ (Cannes Film Festival) ಕೂಡ ಒಂದು. ಕಾನ್ ಫಿಲ್ಮ್ ಫೆಸ್ಟಿವಲ್ ಮೇ 14ರಿಂದ ಆರಂಭ ಆಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಐಶ್ವರ್ಯಾ ರೈ (Aishwarya Rai) ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಲು ರೆಡಿಯಾಗಿದ್ದಾರೆ. ಮೇ 15ರಂದು ಐಶ್ವರ್ಯಾ ಅವರು ಮಗಳು ಆರಾಧ್ಯ ಜೊತೆ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ, ಐಶ್ವರ್ಯಾ ಅವರ ಕೈಗೆ ಪೆಟ್ಟಾಗಿ ಬ್ಯಾಂಡೇಜ್ ಕೂಡ ಸುತ್ತಿಕೊಂಡಿದ್ದರು. ನಟಿಯ ಸ್ಥಿತಿ ನೋಡಿ ಫ್ಯಾನ್ಸ್ ಆತಂಕಕ್ಕೆ ಒಳಗಾಗಿ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ:ಆಸ್ಪತ್ರೆಯಲ್ಲಿ ಮಲಗಿ ಡ್ರಾಮಾ ಮಾಡ್ತಿದ್ದಾಳೆ ರಾಖಿ : ಆದಿಲ್ ಕಿಡಿ
View this post on Instagram
ಐಶ್ವರ್ಯಾ ಅವರು ಮಗಳ ಜೊತೆ ಕಾರಿನಿಂದ ಇಳಿದಿದ್ದಾರೆ. ಅವರ ಬಲಗೈಗೆ ಬ್ಯಾಂಡೇಜ್ ಹಾಕಲಾಗಿತ್ತು. ನಟಿ ಕಪ್ಪು ಉಡುಪಿನೊಂದಿಗೆ ನೀಲಿ ಕೋಟ್ ಧರಿಸಿದ್ದರು. ಆರಾಧ್ಯ ಅವರು ತಿಳಿ ನೀಲಿ ಹೂಡಿ ಮತ್ತು ಕಪ್ಪು ಪ್ಯಾಂಟ್‌ನಲ್ಲಿ ಕಾಣಿಸಿಕೊಂಡರು. ಕೆಲ ಸೆಕೆಂಡುಗಳ ಕಾಲ ಮಾಧ್ಯಮದವರತ್ತ ಕೈ ಬೀಸಿದ ಐಶ್ವರ್ಯಾ ನಂತರ ಮುಂಬೈ ವಿಮಾನ ನಿಲ್ದಾಣ ಪ್ರವೇಶಿಸಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಸಲಿಗೆ ಐಶ್ವರ್ಯಾ ಕೈಗೆ ಏನಾಗಿದೆ ಎಂಬುದು ತಿಳಿದು ಬಂದಿಲ್ಲ.
ಬಲಗೈಗೆ ಬ್ಯಾಂಡೇಜ್ ಕಟ್ಟಿಕೊಂಡಿರುವ ಐಶ್ವರ್ಯಾ ರೈ ಕೈ ನೋವಿನ ನಡುವೆಯೂ ಕಾನ್ಸ್ ಫೆಸ್ಟಿವಲ್‌ನಲ್ಲಿ ಹೇಗೆ ಕಾಣಿಸಿಕೊಳ್ತಾರೆ ಎಂಬುದನ್ನು ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.