ಬಾಲಿವುಡ್ ನಟ ವರುಣ್ ಧವನ್ (Varun Dhawan) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ವರುಣ್ ಪತ್ನಿ ನತಾಶಾ (Natasha Dalal) ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದಾರೆ. ಅಪ್ಪನಾದ ಖುಷಿಯಲ್ಲಿರುವ ನಟನಿಗೆ ಫ್ಯಾನ್ಸ್ ಶುಭಕೋರಿದ್ದಾರೆ.
ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನತಾಶಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವರುಣ್ ತಂದೆ ದೇವಿಡ್ ಧವನ್ ತಿಳಿಸಿದ್ದಾರೆ. ಇದನ್ನೂ ಓದಿ:ಮಂಡಿಯಲ್ಲಿ ‘ಕ್ವೀನ್’ ಕಂಗನಾ
View this post on Instagram
ಅಂದಹಾಗೆ, ಬಾಲಿವುಡ್ ಸಿನಿಮಾಗಳ ಮೂಲಕ ವರುಣ್ ಗುರುತಿಸಿಕೊಂಡರೆ, ನತಾಶಾ ಫ್ಯಾಷನ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ.
ಹಲವು ವರ್ಷಗಳ ಡೇಟಿಂಗ್ ನಂತರ ವರುಣ್ ಮತ್ತು ನತಾಶಾ 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.