ಶಾರುಖ್ ಪುತ್ರ ಆರ್ಯನ್ ಇನ್ನೂ ಮಗು, ಉಸಿರಾಡಲು ಬಿಡಿ: ನಟ ಸುನೀಲ್ ಶೆಟ್ಟಿ

Public TV
2 Min Read
sunil shetty

ಮುಂಬೈ: ಹೈ ಪ್ರೊಫೈಲ್ ಡ್ರಗ್ಸ್ ಕೇಸ್‍ಗೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ವಿಚಾರವಾಗಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಆತ ಇನ್ನೂ ಮಗು ಉಸಿರಾಡಲು ಬಿಡಿ ಎಂದು ಹೇಳಿದ್ದಾರೆ.

drugs case sharukha khan aryan khan ship

ಮುಂಬೈನ ತೀರ ಪ್ರದೇಶದ ಐಷಾರಾಮಿ ಕ್ರೂಸ್ ಹಡಗಿನಲ್ಲಿ ನಡೆದಿದ್ದ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹಾಗೂ ಇತರ ಏಳು ಜನರನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ (ಎನ್‍ಸಿಬಿ) ಬಂಧಿಸಿದ್ದಾರೆ.   ಇದನ್ನೂ ಓದಿ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ವಶಕ್ಕೆ ಪಡೆದಿದ್ದೇವೆ: ಎನ್‍ಸಿಬಿ ಮುಖ್ಯಸ್ಥ ಪ್ರಧಾನ್

 

ಈ ವಿಚಾರ ಇಂದು ರಾಷ್ಟ್ರೀಯ ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ಹುಟ್ಟಿಹಾಕಿದೆ. ಆರ್ಯನ್ ವಿಚಾರವಾಗಿ ನೇರವಾಗಿ ಅವರ ತಂದೆ ಶಾರುಖ್ ಖಾನ್ ಅವರನ್ನು ಎಳೆದು ತಂದಿರುವ ಅನೇಕ ನೆಟ್ಟಿಗರು, ಮಗನನ್ನು ಬೆಳೆಸಿರುವ ರೀತಿ ಇದೇನಾ ಎಂದು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಾಲಿವುಡ್ ನಟ ಸುನೀಲ್ ಶೆಟ್ಟಿ, ಎನ್‍ಸಿಬಿ ಯಾವುದೇ ಸ್ಥಳದಲ್ಲಿ ದಾಳಿ ಮಾಡಿದಾಗ ಮೊದಲು ಕೂಲಂಕುಷವಾಗಿ ವಿಚಾರಣೆ ಮಾಡುತ್ತದೆ. ಅದೇ ರೀತಿ ಆರ್ಯನ್‍ನ್ನು ವಿಚಾರಣೆ ಮಾಡುತ್ತಿದ್ದಾರೆ. ಆರ್ಯನ್ ಇನ್ನು ಮಗು. ಅವನಿಗೆ ಉಸಿರಾಡಿಸಲು ಬಿಡಿ ಎಂದು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ. ತನಿಖೆ ನಡೆದು ನಿಜವಾದ ವಿಚಾರ ಹೊರ ಬರಲಿ. ಅಲ್ಲಿವರೆಗೆ ಸಮಾಧಾನದಿಂದಿರಿ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ:  ಹೈ ಪ್ರೊಫೈಲ್ ಡ್ರಗ್ಸ್ ಕೇಸ್- ಶಾರುಖ್ ಖಾನ್ ಪುತ್ರನಿಗೆ ಬಂಧನ ಭೀತಿ

shah rukha khan aryan 4

ಶಾರುಖಾನ್ ಮಗ ಆರ್ಯನ್ ಖಾನ್ ಐಷಾರಾಮಿ ಹಡಗಿನ ಡ್ರಗ್ಸ್ ಪಾರ್ಟಿಗೆ ಗೆಸ್ಟ್ ಆಗಿದ್ದ. ಹೀಗಾಗಿ ಆರ್ಯನ್ ಖಾನ್ ವಶಕ್ಕೆ ಪಡೆದಿರುವ ಎನ್‍ಸಿಬಿ ಅಧಿಕಾರಿಗಳು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮೊಬೈಲ್‍ನ್ನು ಸಹ ವಶಪಡಿಸಿಕೊಂಡಿದ್ದು, ಆರ್ಯನ್ ಖಾನ್ ಮೊಬೈಲ್ ಚಾಟಿಂಗ್ ಪರಿಶೀಲಿಸಿದ್ದಾರೆ. ಇನ್ನೊಂದೆಡೆ ಡ್ರಗ್ಸ್ ಸೇವನೆ ಬಗ್ಗೆ ಆರ್ಯನ್ ಖಾನ್ ರಕ್ತ ಪರೀಕ್ಷೆ ನಡೆಸಿದ್ದಾರೆ. ಸತತ 7 ಗಂಟೆಗ ವಿಚಾರಣೆರಯ ಬಳಿಕ ಈ ಪ್ರಕರಣಕ್ಕೆ ಸಂಬಧಿಸಿದಂತೆ 8 ಮಂದಿಯನ್ನು  ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *