ನಾಯಕನಾಗಿ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ಬಾಲಿವುಡ್ ನಟ ಸಂಜಯ್ ದತ್, ಇತ್ತೀಚಿನ ದಿನಗಳಲ್ಲಿ ಹೆಚ್ಚು ವಿಲನ್ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಲ್ಲಿ ಮಾತ್ರವಲ್ಲ, ಇತರ ಭಾಷಾ ಸಿನಿಮಾ ರಂಗಗಳೂ ಕೂಡ ಅವರನ್ನು ಖಳ ಪಾತ್ರಕ್ಕೆ ಕೈ ಬೀಸಿ ಕರೆಯುತ್ತಿವೆ. ಹಾಗಾಗಿ ಸಂಜತ್ ದತ್ ವಿಲನ್ ಪಾತ್ರಗಳಿಗೆ ಫಿಕ್ಸ್ ಆದರಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.
ಕೆಜಿಎಫ್ 2 ಸಿನಿಮಾದಲ್ಲಿ ಅಧೀರನ ಪಾತ್ರ ಮಾಡಿದ್ದ ಸಂಜಯ್ ದತ್, ಈ ಮೂಲಕ ದೇಶದ ನಾನಾ ಭಾಷೆಯ ಅಭಿಮಾನಿಗಳನ್ನು ಏಕಕಾಲಕ್ಕೆ ಅವರದ್ದೇ ಭಾಷೆಯಲ್ಲಿ ತಲುಪಿದರು. ಸಿನಿಮಾ ಕೂಡ ದೊಡ್ಡ ಹಿಟ್ ಆಯಿತು. ಈ ಸಿನಿಮಾದ ಮೂಲಕ ಸಂಜಯ್ ಆಯಾ ಭಾಷೆಯ ಕಲಾವಿದರಾಗಿಯೇ ನೋಡುಗನ ಮನಸ್ಸಲ್ಲಿ ಉಳಿದುಕೊಂಡರು. ಹೀಗಾಗಿ ತಮಿಳು, ತೆಲುಗು ಸಿನಿಮಾ ರಂಗದಿಂದಲೂ ಅವರಿಗೆ ಕರೆಗಳು ಬರುತ್ತಿವೆಯಂತೆ. ಇದನ್ನೂ ಓದಿ:ಅಪ್ಪು ಹೆಸರಿನಲ್ಲಿ ಮಕ್ಕಳ ಚಿತ್ರೋತ್ಸವ: ಅದ್ಧೂರಿ ಚಾಲನೆ
ಕೆಜಿಎಫ್ 2 ಸಿನಿಮಾದ ನಂತರ ಮತ್ತೊಂದು ಕನ್ನಡ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಸಂಜಯ್ ದತ್, ಈ ಸಿನಿಮಾದಲ್ಲೂ ಅವರದ್ದು ಖಳನ ಪಾತ್ರವಂತೆ. ಈಗಾಗಲೇ ಒಂದು ಹಂತದ ಚಿತ್ರೀಕರಣಕ್ಕೂ ಅವರು ಬಂದು ಹೋಗಿದ್ದಾರೆ. ಈ ಸಿನಿಮಾ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿದೆ. ಎರಡು ವಾರಗಳ ಹಿಂದೆಯಷ್ಟೇ ಧ್ರುವ ಮತ್ತು ಸಂಜಯ್ ದತ್ ಕಾಂಬಿನೇಷನ್ ನ ದೃಶ್ಯಗಳನ್ನು ಪ್ರೇಮ್ ಸೆರೆ ಹಿಡಿದ್ದಾರೆ.
ಈ ಸಿನಿಮಾದ ಬೆನ್ನಲ್ಲೇ ಬಾಲಿವುಡ್ ನ ಮತ್ತೊಂದು ಪಾತ್ರವನ್ನು ಒಪ್ಪಿಕೊಂಡಿದ್ದಾರಂತೆ ಸಂಜಯ್ ದತ್. ‘ಹೇರಾ ಫೇರಿ 4’ ಹೆಸರಿನ ಸಿನಿಮಾದಲ್ಲೂ ಅವರು ವಿಲನ್ ಪಾತ್ರ ನಿರ್ವಹಿಸಲಿದ್ದಾರಂತೆ. ಸಿನಿಮಾದ ಪ್ರೋಮೋ ಶೂಟ್ ಆಗಿದ್ದು, ಇನ್ನೆರಡು ತಿಂಗಳಲ್ಲಿ ಸಿನಿಮಾದ ಚಿತ್ರೀಕರಣ ಶುರು ಮಾಡಲಿದೆಯಂತೆ ಚಿತ್ರತಂಡ.