ಬಾಲಿವುಡ್ (Bollywood) ಭಾಯಿ ಜಾನ್ ಸಲ್ಮಾನ್ ಖಾನ್ (Salman Khan) ಕಟ್ಟು ಮಸ್ತಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಸಲ್ಮಾನ್ ಖಾನ್ ನಯಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡ್ತಿದ್ದಂತೆ 2 ಮಿಲಿಯನ್ ಲೈಕ್ಸ್ ಗಿಟ್ಟಿಸಿಕೊಂಡಿದೆ. ಸಲ್ಲು ಹೊಸ ಫೋಟೋಶೂಟ್ ಸಖತ್ ಸದ್ದು ಮಾಡ್ತಿದೆ.
‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾದ ‘ಯೆಂಟಮ್ಮಾ’ ಇತ್ತೀಚಿಗಷ್ಟೇ ರಿಲೀಸ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಸಲ್ಮಾನ್ ಜೊತೆ ರಾಮ್ ಚರಣ್, ವೆಂಕಟೇಶ್, ಪೂಜಾ ಹೆಗ್ಡೆ ಮಸ್ತ್ ಆಗಿ ಲುಂಗಿ ಡ್ಯಾನ್ಸ್ ಮಾಡಿದ್ದಾರೆ. ಈ ವೀಡಿಯೋ ವ್ಯಾಪಕ ಮೆಚ್ಚುಗೆ ವ್ಯಕ್ತವಾಗ ಬೆನ್ನಲ್ಲೇ ಸಲ್ಮಾನ್ ಹೊಸ ಫೋಟೋಶೂಟ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಸುದೀಪ್ ಖಾಸಗಿ ವಿಡಿಯೋ ಬೆದರಿಕೆ ಹಿಂದೆ ಕಾರು ಡ್ರೈವರ್ ಇರುವ ಶಂಕೆ
View this post on Instagram
ಸಲ್ಮಾನ್ ಖಾನ್ Kisi Ka Bhai Kisi Ka Jaan ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಲ್ಮಾನ್‌ಗೆ ಪೂಜಾ ಹೆಗ್ಡೆ (Pooja Hegde) ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೇ ಏ.21ಕ್ಕೆ ಸಿನಿಮಾ ತೆರೆಗೆ ಅಪ್ಪಳಿಸಲಿದೆ.