ಚಿತ್ರರಂಗದಲ್ಲಿ ಇತ್ತೀಚೆಗೆ ಸಂಚಲನ ಮೂಡಿಸಿದ ಸಿನಿಮಾಗಳಲ್ಲಿ ‘ಹನುಮಾನ್’ (Hanuman Film) ಸಿನಿಮಾ ಕೂಡ ಒಂದು. ಈ ಚಿತ್ರದ ಸಕ್ಸಸ್ ನಂತರ ಡೈರೆಕ್ಟರ್ ಪ್ರಶಾಂತ್ ವರ್ಮಾ ‘ರಾಕ್ಷಸ್’ (Rakshas Film) ಸಿನಿಮಾಗಾಗಿ ರಣ್‌ವೀರ್ ಸಿಂಗ್ (Ranveer Singh) ಜೊತೆ ಕೈಜೋಡಿಸಿದ್ದರು. ಕೆಲ ಮನಸ್ತಾಪಗಳಿಂದ ರಣವೀರ್ ಸಿಂಗ್ ‘ಹನುಮಾನ್’ ನಿರ್ದೇಶಕನ ಮುಂಬರುವ ಚಿತ್ರಕ್ಕೆ ಗುಡ್ ಬೈ ಹೇಳಿದ್ದಾರೆ.
ಡೈರೆಕ್ಟರ್ ಪ್ರಶಾಂತ್ ವರ್ಮಾ ಮತ್ತು ರಣ್‌ವೀರ್ ಸಿಂಗ್ ನಡುವೆ ಕತೆ ಮತ್ತು ಮೇಕಿಂಗ್ ವಿಷಯವಾಗಿ ಭಿನ್ನಾಭಿಪ್ರಾಯಗಳು ಮೂಡಿದ ಕಾರಣದಿಂದ ರಣ್‌ವೀರ್ ಸಿಂಗ್ ಈ ಸಿನಿಮಾದಿಂದ ಹೊರನಡೆದಿದ್ದಾರೆ. ಇತ್ತೀಚೆಗೆ ರಣ್‌ವೀರ್ ಹೈದರಾಬಾದ್‌ಗೆ ಹೋಗಿ ಸಿನಿಮಾದ ಫೋಟೊಶೂಟ್‌ನಲ್ಲಿ ಸಹ ಭಾಗಿಯಾಗಿ ಬಂದಿದ್ದರು. ಆದರೆ ಅದಾದ ಬಳಿಕ ಇಬ್ಬರ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ‘ಪದ್ಮಾವತ್’ ಹೀರೋ ಸಿನಿಮಾದಿಂದ ಹೊರಬಂದಿದ್ದಾರೆ. ಇದನ್ನೂ ಓದಿ:‘ಉತ್ತರಕಾಂಡ’ ಸಿನಿಮಾದ ಚಿತ್ರೀಕರಣದಲ್ಲಿ ಶಿವರಾಜ್ ಕುಮಾರ್ ಭಾಗಿ
ರಣ್‌ವೀರ್ ಕೈಬಿಟ್ಟ ಪ್ರಾಜೆಕ್ಟ್‌ಗೆ ಇದೀಗ ಹೊಸ ನಟನ ಹುಡುಕಾಟದಲ್ಲಿದೆ ಚಿತ್ರತಂಡ. ‘ರಾಕ್ಷಸ್’ಗಾಗಿ ನಟರಾಕ್ಷಸನ ಹುಡುಕಾಟದಲ್ಲಿದೆ ಟೀಮ್. ಹಾಗಾದ್ರೆ ಯಾರು ಈ ಚಿತ್ರತಂಡವನ್ನು ಸೇರಿಕೊಳ್ತಾರೆ ಕಾದುನೋಡಬೇಕಿದೆ.
ಸದ್ಯ ಸಿಂಗಂ ಅಗೇನ್, ಡಾನ್ 3, ಡೈರೆಕ್ಟರ್ ಎಸ್. ಶಂಕರ್ ಜೊತೆ ‘ಅನ್ನಿಯನ್’ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ರಣ್‌ವೀರ್ ಸಿಂಗ್ ಕೈಯಲ್ಲಿವೆ.