ಬಹುಭಾಷಾ ನಟ ಪ್ರಭುದೇವ ಅಜ್ಜಿ ನಂಜನಗೂಡಿನಲ್ಲಿ ನಿಧನ

Public TV
1 Min Read
prabhudeva

ನ್ನಡಿಗ, ಬಹುಭಾಷಾ ನಟ ಪ್ರಭುದೇವ (Prabhudeva) ಅವರ ಅಜ್ಜಿ (Grand Mother) ಪುಟ್ಟಮ್ಮಣ್ಣಿ ವಯೋಸಹಜ ಕಾಯಿಲೆಯಿಂದ ಜು.9ರಂದು ವಿಧಿವಶರಾಗಿದ್ದಾರೆ. ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಸಹೋದರರ ಜೊತೆ ಪ್ರಭುದೇವ ಚೆನ್ನೈನಿಂದ ಮೈಸೂರಿಗೆ ಆಗಮಿಸಿದ್ದಾರೆ. ಇದನ್ನೂ ಓದಿ:ಪ್ರಣಂ ದೇವರಾಜ್, ಖುಷಿ ರವಿ ನಟನೆಯ ‘S/o ಮುತ್ತಣ್ಣ’ನಿಗೆ ಕುಂಬಳಕಾಯಿ ಪ್ರಾಪ್ತಿ

prabhudeva 1

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರಭುದೇವ ಅಜ್ಜಿ 97ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಜು.9ರಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೂರ ಗ್ರಾಮದಲ್ಲಿ ಅಜ್ಜಿ ನಿಧನರಾಗಿದ್ದಾರೆ. ದೂರ ಗ್ರಾಮದಲ್ಲಿ ಇಂದು (ಜು.10) ಸಂಜೆ ಅಜ್ಜಿ ಪುಟ್ಟಮ್ಮಣ್ಣಿ ಅಂತ್ಯಕ್ರಿಯೆ ನಡೆಯಲಿದೆ.

ಅಂದಹಾಗೆ, ಪುಟ್ಟಮ್ಮಣ್ಣಿ ಅವರು ಪ್ರಭುದೇವ ತಾಯಿ ಮಹಾದೇವಮ್ಮ ಅವರ ತಾಯಿ. ಅವರ ನಿಧನದಿಂದ ಕುಟುಂಬಕ್ಕೆ ಆಘಾತವಾಗಿದೆ.

Share This Article