ಕಿರುತೆರೆ ಜನಪ್ರಿಯ ‘ಶಕ್ತಿಮಾನ್’ (Shaktimaan) ಧಾರಾವಾಹಿ ಇದೀಗ ಸಿನಿಮಾ ರೂಪದಲ್ಲಿ ತೆರೆಗೆ ತರಲು ಪ್ಲ್ಯಾನ್ ನಡೆಯುತ್ತಿದೆ. ಈ ಸೀರಿಯಲ್‌ನಲ್ಲಿ ಮುಕೇಶ್ ಖನ್ನಾ ಅವರು ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಈ ಕುರಿತು ಬಹಳ ಹಿಂದೆಯೇ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಾಗಿತ್ತು. ಆದರೂ ಕೂಡ ‘ಶಕ್ತಿಮಾನ್’ ಸಿನಿಮಾ ಸೆಟ್ಟೇರಲು ಕಾರಣ ಏನು ಎಂಬುದನ್ನು ಮುಕೇಶ್ ಖನ್ನಾ(Actor Mukesh Khanna) ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ನಟ ಈ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಪ್ರಣಿತಾ ಹಾಟ್‌ನೆಸ್‌ಗೆ ಸಂತೂರ್ ಮಮ್ಮಿ ಎಂದ ನೆಟ್ಟಿಗರು
1993ರಲ್ಲಿ ಇಂಡಿಯನ್ ಸೂಪರ್ ಹೀರೋ ಆಗಿ ಮುಖೇಶ್ ಖನ್ನಾ ಅವರು ಮಿಂಚಿದ್ದರು. ಮಕ್ಕಳಿಗಂತೂ ‘ಶಕ್ತಿಮಾನ್’ ಎಂದರೆ ಎಲ್ಲಿಲ್ಲದ ಪ್ರೀತಿ. ಆತನ ಸಾಹಸಗಳು ಒಂದೆರಡಲ್ಲ. ಈಗ ಈ ಸೂಪರ್ ಹೀರೋ ಪಾತ್ರವನ್ನೇ ಮುಖ್ಯವಾಗಿ ಇಟ್ಟುಕೊಂಡು ಸಿನಿಮಾ ಸಿದ್ಧವಾಗುತ್ತಿದೆ. ಶಕ್ತಿಮಾನ್ ಸಿನಿಮಾದ ಬಜೆಟ್ 200-300 ಕೋಟಿ ರೂಪಾಯಿ ನಿರ್ಮಾಣದಲ್ಲಿ ಬರಲಿದೆ. ‘ಸ್ಪೈಡರ್ ಮ್ಯಾನ್’ (Spider Man) ಸಿನಿಮಾ ಮಾಡಿದ್ದ ಸೋನಿ ಪಿಕ್ಚರ್ಸ್ (Sony Pictures) ಸಂಸ್ಥೆಯವರು ಶಕ್ತಿಮಾನ್ ಸಾಥ್ ನೀಡ್ತಿದ್ದಾರೆ. ಮೊದಲು ಕೊರೊನಾ ಬಂತು. ಅದರಿಂದ ವಿಳಂಬ ಆಯಿತು ಎಂದು ಮುಕೇಶ್ ಖನ್ನಾ ಹೇಳಿದ್ದಾರೆ.
ಇದು ದೊಡ್ಡ ಸಿನಿಮಾ ಆದ್ದರಿಂದ ಸಮಯ ಹಿಡಿಯುತ್ತದೆ. ನಾನು ಶಕ್ತಿಮಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನಾ ಎಂಬುದು ದೊಡ್ಡ ಪ್ರಶ್ನೆ. ಬೇರೆ ಯಾರಾದರೂ ಶಕ್ತಿಮಾನ್ ಪಾತ್ರ ಮಾಡುತ್ತಾರಾ? ಆ ಬಗ್ಗೆ ನನಗೆ ತಿಳಿದಿಲ್ಲ. ಇದೊಂದು ಕಮರ್ಷಿಯಲ್ ಸಿನಿಮಾ. ದುಡ್ಡಿನ ಮಾತುಕತೆ ಸಾಕಷ್ಟು ಇರುತ್ತದೆ. ಈ ಸಿನಿಮಾದಲ್ಲಿ ನಾನು ಇರುತ್ತೇನೆ. ನನ್ನನ್ನು ಬಿಟ್ಟು ಈ ಸಿನಿಮಾ ಮಾಡೋಕೆ ಆಗಲ್ಲ ಎಂಬುದು ಎಲ್ಲರಿಗೂ ಗೊತ್ತು ಎಂದು ನಟ ಮುಖೇಶ್ ರಿಯಾಕ್ಟ್ ಮಾಡಿದ್ದಾರೆ.
ಈ ಚಿತ್ರದಲ್ಲಿ ಮುಕೇಶ್ ಖನ್ನಾ ಇರುತ್ತಾರೆ ಆದರೆ ಶಕ್ತಿಮಾನ್ ವೇಷದಲ್ಲಿ ಕಾಣಿಸಿಕೊಳ್ಳುವುದಿಲ್ಲವಂತೆ. ಯಾಕೆಂದರೆ ಇದು ನಿರ್ಮಾಪಕರ ನಿರ್ಧಾರವಾಗಿದೆ. ಪಾತ್ರವರ್ಗ ಮತ್ತು ತಾಂತ್ರಿಕ ಬಳಗದ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು ಎಂದು ಮುಕೇಶ್ ಖನ್ನಾ ಹೇಳಿದ್ದಾರೆ. ರಣವೀರ್ ಸಿಂಗ್ (Ranveer Singh) ಅವರು ಶಕ್ತಿಮಾನ್ ಆಗಿ ಕಾಣಿಸಿಕೊಳ್ಳಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂದು ಕಾದುನೋಡಬೇಕಿದೆ.