ದರ್ಶನ್ ಸಿನಿಮಾದಲ್ಲಿ ಬಾಲಿವುಡ್ ನಟ ಮಹೇಶ್ ಮಂಜ್ರೇಕರ್

Public TV
1 Min Read
Mahesh Manjrekar 1

ಬಾಲಿವುಡ್ ನ ಹೆಸರಾಂತ ಹಿರಿಯ ನಟ ಮಹೇಶ್ ಮಂಜ್ರೇಕರ್ (Mahesh Manjrekar) ಬರೋಬ್ಬರಿ 19 ವರ್ಷಗಳ ನಂತರ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡುತ್ತಿದ್ದಾರೆ. ಈ ಹಿಂದೆ ಅವರು ಎನ್ ಕೌಂಟರ್ ದಯಾನಾಯಕ ಸಿನಿಮಾದಲ್ಲಿ ಪಾತ್ರ ಮಾಡಿದ್ದರು. ಈಗ ದರ್ಶನ್ ನಟನೆಯ ಡೆವಿಲ್ ಚಿತ್ರದಲ್ಲಿ ವಿಶೇಷ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.

Devil 3

ಡೆವಿಲ್ ಈಗಾಗಲೇ ಮೊದಲನೇ ಹಂತದ ಚಿತ್ರೀಕರಣ ಮುಗಿಸಿದೆ. ಈ ಸಮಯದಲ್ಲೇ ನಟ ದರ್ಶನ್ (Darshan) ಅವರ ಕೈಗೆ ಏಟಾಗಿತ್ತು. ಈಗ ಶಸ್ತ್ರ ಚಿಕಿತ್ಸೆ ಪಡೆದಿರುವ ದರ್ಶನ್, ಒಂದು ತಿಂಗಳ ವಿಶ್ರಾಂತಿ ಪಡೆದುಕೊಳ್ಳಬೇಕಿದೆ. ಹಾಗಾಗಿ ದರ್ಶನ್ ಇಲ್ಲದ ದೃಶ್ಯಗಳನ್ನು ಚಿತ್ರೀಕರಿಸಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.

Devil 1

ಈಗಾಗಲೇ ‘ಡೆವಿಲ್’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿ ಭರ್ಜರಿ ಸೌಂಡ್ ಮಾಡ್ತಿದೆ. ದಚ್ಚು ಹುಟ್ಟುಹಬ್ಬದ ದಿನ ಫ್ಯಾನ್ಸ್‌ಗೆ ಇದೊಂದು ಸರ್ಪ್ರೈಸ್ ಗಿಫ್ಟ್ ಆಗಿತ್ತು. ದರ್ಶನ್ ‘ಡೆವಿಲ್’ನಲ್ಲಿ (Devil Film) ವಿಭಿನ್ನ ಲುಕ್‌ನಲ್ಲಿ ಕಾಣಿಸ್ಕೊಂಡಿದ್ದಾರೆ.

devil

ದರ್ಶನ್ ಹುಟ್ಟುಹಬ್ಬದ ದಿನವೇ ‘ಡೆವಿಲ್’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಯ್ತು. ಅಬ್ಬರಿಸುವ ಡೈಲಾಗ್ ಮೂಲಕ ದಚ್ಚು ಎಂಟ್ರಿ ಬಹಳ ಕುತೂಹಲಕಾರಿಯಾಗಿತ್ತು. ‘ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು’ ಎಂಬ ವಿಭಿನ್ನ ಡೈಲಾಗ್ ಹೇಳುವ ಮೂಲಕ ದರ್ಶನ್ ಉಗ್ರವಾಗಿ ಕಾಣಿಸಿಕೊಂಡಿದ್ದಾರೆ.

 

ಮಿಲನ ಪ್ರಕಾಶ್ (Milana Prakash) ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ, ವೈಷ್ಣೋ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.

Share This Article