ಬಾಲಿವುಡ್ ನಟ ಗೋವಿಂದ (Govinda) ದಾಂಪತ್ಯದಲ್ಲಿ ಬಿರುಕಾಗಿದೆ ಎನ್ನಲಾದ ಸುದ್ದಿಯೊಂದು ಕಳೆದ ಕೆಲವು ದಿನಗಳಿಂದ ಚರ್ಚೆಗೆ ಗ್ರಾಸವಾಗಿದೆ. ಇದುವರೆಗೂ ಇಬ್ಬರ ಡಿವೋರ್ಸ್ ಕುರಿತು ಅಧಿಕೃತವಾಗಿ ಘೋಷಣೆ ಆಗಿಲ್ಲ. ಹೀಗಿರುವಾಗ ಗೋವಿಂದ ಪತ್ನಿ ಸುನೀತಾ ಅಹುಜಾ ರಿಯಾಕ್ಟ್ ಮಾಡಿದ್ದಾರೆ. ನಮ್ಮಿಬ್ಬರನ್ನು ದೂರ ಮಾಡಲು ಸಾಧ್ಯವೇ ಇಲ್ಲ ಎಂದು ಸುನೀತಾ ಅಹುಜಾ (Sunita Ahuja) ಹೇಳಿದ್ದಾರೆ.
ಗೋವಿಂದ ಮತ್ತು ಸುನೀತಾ ಪ್ರತ್ಯೇಕವಾಗಿ ವಾಸಿಸುತ್ತಿರುವ ಬಗ್ಗೆ ಅಸಲಿ ಕಾರಣವನ್ನು ನಟನ ಪತ್ನಿ ಹಂಚಿಕೊಂಡಿದ್ದಾರೆ. ಗೋವಿಂದ ಅವರು ರಾಜಕೀಯಕ್ಕೆ ಸೇರ್ಪಡೆಗೊಂಡಾಗ ಪಕ್ಷದ ಅನೇಕ ಕಾರ್ಯಕರ್ತರು ಮನೆಗೆ ಭೇಟಿ ನೀಡುತ್ತಿದ್ದರು. ಆ ಸಮಯದಲ್ಲಿ ನಮ್ಮ ಮಗಳು ಹದಿಹರೆಯದವಳು. ನಮಗೆ ಪ್ರೈವಸಿ ಬೇಕಾಗಿತ್ತು. ಇನ್ನೂ ಸಾಮಾನ್ಯವಾಗಿ ಮನೆಯಲ್ಲಿ ಶಾರ್ಟ್ಸ್ ಧರಿಸಿ ತಿರುಗಾಡುತ್ತಿರುತ್ತೇವೆ. ನಿರಂತರವಾಗಿ ಮನೆಗೆ ಜನರು ಬರುತ್ತಿದ್ದರು. ಹಾಗಾಗಿ ನಾವು ಮನೆಯ ಎದುರೇ ಕಚೇರಿ ತೆರೆಯಲು ನಿರ್ಧರಿಸಿದೇವು ಎಂದು ತಿಳಿಸಿದ್ದಾರೆ.
ಈ ಜಗತ್ತಿನಲ್ಲಿ ನಮ್ಮಿಬ್ಬರನ್ನು ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗೋವಿಂದ ಪತ್ನಿ ಸುನೀತಾ ಅವರು ಹೇಳಿಕೆ ನೀಡಿದ್ದಾರೆ. ಈ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಇದನ್ನೂ ಓದಿ:ಪ್ರೆಗ್ನೆನ್ಸಿ ಗುಡ್ ನ್ಯೂಸ್ ಕೊಟ್ಮೇಲೆ ಮತ್ತೆ ಚಿತ್ರೀಕರಣದಲ್ಲಿ ಕಿಯಾರಾ ಬ್ಯುಸಿ
ಅಂದಹಾಗೆ, ನಟ ಗೋವಿಂದ ಮತ್ತು ಸುನೀತಾ ಅವರು 1987ರಲ್ಲಿ ಮದುವೆಯಾದರು. ಈ ದಂಪತಿಗೆ ಟೀನಾ ಮತ್ತು ಯಶವರ್ಧನ್ ಎಂಬ ಇಬ್ಬರೂ ಮಕ್ಕಳಿದ್ದಾರೆ.