CinemaBollywoodLatestMain PostNational

ಕರ್ವಾ ಚೌತ್ ಪ್ರಯುಕ್ತ ಪತ್ನಿಗೆ ಬಿಎಂಡಬ್ಲೂ ಕಾರು ಗಿಫ್ಟ್ ಮಾಡಿದ ಗೋವಿಂದ

ಮುಂಬೈ: ಬಾಲಿವುಡ್ ಸೆಲೆಬ್ರೆಟಿಗಳು ಬಹಳ ಸಂಭ್ರಮದಿಂದ ಆಚರಿಸುವ ಹಬ್ಬ ಎಂದರೆ ಅದು ಕರ್ವಾ ಚೌತ್. 90ರ ದಶಕದ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದ ನಟ ಗೋವಿಂದ ಕರ್ವಾ ಕೌತ್ ಹಬ್ಬವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲಾಗಿದ್ದು, ಹಬ್ಬದ ಪ್ರಯುಕ್ತ ಪತ್ನಿ ಸುನೀತಾ ಅಹುಜಾಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

Govinda 1

ಕರ್ವಾ ಚೌತ್ ಹಬ್ಬದ ದಿನದಂದು ಗೋವಿಂದ ಅವರ ಪತ್ನಿ ಸುನೀತಾ ಅಹುಜಾ ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡಿದ್ದರು. ಈ ವೇಳೆ ಪತ್ನಿಗೆ ಪ್ರೀತಿಯಿಂದ ಗೋವಿಂದ ಬಿಎಂಡಬ್ಲೂ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಸೊಳ್ಳೆ ಕಾಯಿಲ್ ಕಿಡಿಯಿಂದ ಹೊತ್ತಿ ಉರಿದ ಮನೆ- ನಿದ್ರೆಯಲ್ಲಿದ್ದ ಕುಟುಂಬದ ನಾಲ್ವರು ಚಿರನಿದ್ರೆಗೆ!

Govinda 2

ಹೊಸ ಕಾರಿನ ಮುಂದೆ ಗೋವಿಂದ ಹಾಗೂ ಅವರ ಪತ್ನಿ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದು, ಈ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಗೋವಿಂದ ಕೆಂಪು ಬಣ್ಣದ ಕುರ್ತಾ-ಪೈಜಾಮ ಮತ್ತು ಕಪ್ಪು ಬಣ್ಣದ ಜಾಕೆಟ್ ಧರಿಸಿದ್ದರೆ, ಅವರ ಪತ್ನಿ ಸಂಪ್ರಾದಾಯಿಕ ಕೆಂಪು ಬಣ್ಣದ ಸೀರೆಯುಟ್ಟು, ಕೆಲವಷ್ಟು ಆಭರಣ ಧರಿಸಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಕೋಟೆನಾಡಿನ ರಾಜಕೀಯಕ್ಕೆ ಚಿತ್ರನಟ ಶಶಿಕುಮಾರ್ ರೀ-ಎಂಟ್ರಿ!

 

View this post on Instagram

 

A post shared by Govinda (@govinda_herono1)

ಫೋಟೋ ಜೊತೆಗೆ ನನ್ನ ಆತ್ಮೀಯ ಸ್ನೇಹಿತೆ, ನನ್ನ ಜೀವನದ ಪ್ರೀತಿ, ನನ್ನ ಇಬ್ಬರು ಸುಂದರ ಮಕ್ಕಳ ತಾಯಿಗೆ ಕರ್ವಾ ಚೌತ್ ಶುಭಾಶಯಗಳು. ಐ ಲವ್ ಯೂ. ನಿನ್ನ ಮೇಲೆ ನನಗೆ ಅಪಾರ ಪ್ರೀತಿ ಇದೆ. ಈ ದಿನದಂದು ನಿನಗೆ ನನ್ನದೊಂದು ಪುಟ್ಟ ಕಾಣಿಕೆ. ಅಳತೆ ಮಾಡಿ ತೆಗೆದುಕೋ. ನೀನು ಈ ಪ್ರಪಂಚದ ಎಲ್ಲಾ ಸಂತೋಷವನ್ನು ಅನುಭವಿಸಲು ಅರ್ಹಳು. ಲವ್ ಯು ಮೈ ಸೋನಾ ಎಂದು ಕ್ಯಾಪ್ಷನ್‍ನಲ್ಲಿ ಗೋವಿಂದ ಬರೆದುಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *