ಕ್ರಿಕೆಟರ್ ಆಗುವ ಕನಸು ಕಂಡ ಬಡ ಹುಡುಗಿಗೆ ನಟ ಅರ್ಜುನ್ ಕಪೂರ್ ಸಾಥ್

Public TV
2 Min Read
arjun kapoor

ಬಾಲಿವುಡ್ (Bollywood) ನಟ ಅರ್ಜುನ್ ಕಪೂರ್ (Arjun Kapoor) ಅವರು ತಮ್ಮ ಸಿನಿಮಾಗಳಿಗಿಂತ ಮಲೈಕಾ ಅರೋರಾ ಜೊತೆಗಿನ ರಿಲೇಷನ್‌ಶಿಪ್ ವಿಷ್ಯ ಹೆಚ್ಚೆಚ್ಚು ಸುದ್ದಿಯಾಗಿದ್ದಾರೆ. ಸಿನಿಮಾ ಕುಟುಂಬವಾಗಿದ್ರು ಕೂಡ ಅರ್ಜುನ್‌ಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಆದರೆ ಈ ನಡುವೆ ಅಭಿಮಾನಿಗಳು ಒಂದು ಕಾರ್ಯವನ್ನು ಅರ್ಜುನ್ ಕಪೂರ್ ಮಾಡಿದ್ದಾರೆ. ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಿರುವ ಅನಿಶಾ ರಾವತ್ (Anisha Rawat) ಎಂಬ ಬಡ ಹುಡುಗಿಗೆ ಸಹಾಯ ಮಾಡಲು ಅರ್ಜುನ್ ಕಪೂರ್ ಮುಂದೆ ಬಂದಿದ್ದಾರೆ.

Arjun Kapoor

ಕ್ರಿಕೆಟ್ ಕ್ಷೇತ್ರದಲ್ಲಿ ಹುಡುಗರು ಮಾತ್ರವಲ್ಲ, ಹುಡುಗಿಯರು ಕೂಡ ಗುರುತಿಸಿಕೊಳ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಿರುವ ಲಕ್ಷಾಂತರ ಹುಡುಗಿಯರು ಇದ್ದಾರೆ. ಆದರೆ ಎಲ್ಲರಿಗೂ ಸೂಕ್ತ ತರಬೇತಿ ಸಿಗುವುದಿಲ್ಲ. ಅದನ್ನು ಅರ್ಥ ಮಾಡಿಕೊಂಡಿರುವ ಅರ್ಜುನ್ ಕಪೂರ್ ಅವರು ಅನಿಶಾ ರಾವತ್‌ಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಅನಿಶಾಗೆ ಈಗ 11 ವರ್ಷ ವಯಸ್ಸು. ಆಕೆಗೆ 18ರ ಪ್ರಾಯ ಆಗುವ ತನಕ ಕ್ರಿಕೆಟ್ ತರಬೇತಿಗೆ ಬೇಕಾಗುವ ಎಲ್ಲ ಸಾಮಾಗ್ರಿಗಳನ್ನು ಅರ್ಜುನ್ ಕಪೂರ್ ಪೂರೈಸಲಿದ್ದಾರೆ. ಇದನ್ನೂ ಓದಿ: ಬೋಲ್ಡ್ ಅವತಾರ ತಾಳಿದ ‘ಕಬ್ಜ’ ಸುಂದರಿ ಶ್ರೀಯಾ

 

View this post on Instagram

 

A post shared by Viral Bhayani (@viralbhayani)

ಪ್ರಸಿದ್ಧ ಕ್ರಿಕೆಟರ್ ಆಗಬೇಕು ಎಂಬುದು ಅನಿಶಾ ಆಸೆ. ಅದಕ್ಕಾಗಿ ಪ್ರತಿ ದಿನ 80 ಕಿಲೋ ಮೀಟರ್ ಪ್ರಯಾಣ ಮಾಡಿ ಆಕೆ ತರಬೇತಿ ಪಡೆಯುತ್ತಿದ್ದಾಳೆ. ಅವಳ ಕನಸನ್ನು ನನಸು ಮಾಡಲು ಆಕೆಯ ತಂದೆ ಕೂಡ ಸಕಲ ಸಹಕಾರ ನೀಡುತ್ತಿದ್ದಾರೆ. ಆದರೆ ಬೇಕಾಗಿರುವ ಸಾಮಾಗ್ರಿಗಳನ್ನು ಒದಗಿಸಲು ಅವರಿಗೆ ಕಷ್ಟ ಆಗುತ್ತಿದೆ. ಈಗ ಅರ್ಜುನ್ ಕಪೂರ್ ಸಹಾಯ ಹಸ್ತ ಚಾಚಿರುವುದರಿಂದ ಅನಿಶಾ ಕನಸಿಗೆ ಸಾಥ್ ಸಿಕ್ಕಿದೆ. ಅನಿಶಾ 10ನೇ ವಯಸ್ಸಿನಲ್ಲಿ ಆಕೆ ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಪರವಾಗಿ ಅಂಡರ್-15 ಮಹಿಳಾ ತಂಡದಲ್ಲಿ ಕ್ರಿಕೆಟ್ ಆಡಿದ್ದಾಳೆ. ಮೂರು ಹಾಫ್ ಸೆಂಚುರಿ ಬಾರಿಸಿದ್ದಾಳೆ. ಪ್ರಸ್ತುತ ಎಂಐಜಿ ಕ್ಲಬ್ ಪರವಾಗಿ ಓಪನಿಂಗ್ ಬ್ಯಾಟರ್ ಆಗಿ ಆಡುತ್ತಿದ್ದಾಳೆ. ಒಟ್ನಲ್ಲಿ ಅರ್ಜುನ್ ಕಪೂರ್ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

Share This Article