‘ವಿಜಯ್‌ 69’ ಶೂಟಿಂಗ್‌ ವೇಳೆ ಬಾಲಿವುಡ್‌ ನಟ ಅನುಪಮ್‌ ಖೇರ್‌ಗೆ ಗಾಯ

Public TV
1 Min Read
anupam kher

ಬಾಲಿವುಡ್ (Bollywood)  ನಟ ಅನುಪಮ್ ಖೇರ್ (Anupam Kher) ಅವರು ಕನ್ನಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟ ಅನುಪಮ್  ‘ವಿಜಯ್ 69’ (Vijay 69) ಸಿನಿಮಾ ಶೂಟಿಂಗ್ ವೇಳೆ ಅವರ ಭುಜಕ್ಕೆ ಪೆಟ್ಟಾಗಿದೆ. ಆತಂಕದಲ್ಲಿರುವ ಅಭಿಮಾನಿಗಳಿಗೆ ಅನುಪಮ್ ಖೇರ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಶಿವಣ್ಣ ನಟನೆಯ ‘ಬೈರತಿ ರಣಗಲ್‌’ ಸಿನಿಮಾದ ಬಿಗ್‌ ಅಪ್‌ಡೇಟ್

anupam kher

ಕನ್ನಡದ ‘ಘೋಸ್ಟ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಿರುವ ಖ್ಯಾತ ನಟ ಅನುಪಮ್ ಅವರಿಗೆ ‘ವಿಜಯ್ 69’ ಸಿನಿಮಾ ಚಿತ್ರೀಕರಣದ ವೇಳೆ ಭುಜಕ್ಕೆ ಗಾಯವಾಗಿದೆ. ಈ ಬಗ್ಗೆ ನಟ ರಿಯಾಕ್ಟ್ ಮಾಡಿದ್ದಾರೆ. ನಾನು ಆರೋಗ್ಯವಾಗಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. ಸ್ಪೋರ್ಟ್ಸ್ ಸಿನಿಮಾ ಮಾಡುತ್ತೀರಿ ಮತ್ತು ನೀವು ಗಾಯಗೊಂಡಿಲ್ಲ ಅಂದರೆ ಅದು ಹೇಗೆ ಸಾಧ್ಯ ‘ವಿಜಯ್ 69’ರ ಶೂಟಿಂಗ್ ಸಮಯದಲ್ಲಿ ಭುಜಕ್ಕೆ ತೀವ್ರವಾಗಿ ಗಾಯವಾಯಿತು’ ಎಂದು ಅವರು ಬರೆದುಕೊಂಡಿದ್ದಾರೆ. ಸದ್ಯ ಅವರು ಗಾಯಗೊಂಡಿರುವುದರಿಂದ ಶೂಟಿಂಗ್‌ಗೆ ಬ್ರೇಕ್ ಪಡೆದಿದ್ದಾರೆ. ನೆಚ್ಚಿನ ನಟ ಶ್ರೀಘ್ರವೇ ಗುಣಮುಖರಾಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.

ಯಶ್ ರಾಜ್ ಫಿಲ್ಮ್ಸ್ ಸಂಸ್ಥೆಯ ‘ವೈಆರ್‌ಎಫ್ ಎಂಟರ್‌ಟೈನ್ಮೆಂಟ್’ ಒಟಿಟಿ ಮೂಲಕ ವಿಜಯ್ 69 ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ನೇರವಾಗಿ ಒಟಿಟಿ ಮೂಲಕ ತೆರೆ ಕಾಣಲಿದೆ. ಈ ಚಿತ್ರಕ್ಕೆ ಅಕ್ಷಯ್ ರಾಯ್ ನಿರ್ದೇಶನ ಮಾಡುತ್ತಿದ್ದಾರೆ.

Share This Article