ಹಲವು ವರ್ಷಗಳಿಂದ ಭಾರತದಲ್ಲಿ ನೆಲೆಯೂರಿರುವ ಮತ್ತು ಭಾರತದವರೇ ಆಗಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar), ಈವರೆಗೂ ಭಾರತದ (India) ಪೌರತ್ವ (Citizenship) ಹೊಂದಿರಲಿಲ್ಲ. ಹಾಗಾಗಿ ಪೌರತ್ವದ ವಿಷಯದಲ್ಲಿ ಪದೇ ಪದೇ ಟೀಕೆಗೆ ಒಳಗಾಗುತ್ತಿದ್ದರು. ದೇಶದ ಪರವಾಗಿ ಅಕ್ಷಯ್ ಕುಮಾರ್ ಮಾತನಾಡಿದಾಗೆಲ್ಲ ಪೌರತ್ವವನ್ನು ಪ್ರಶ್ನೆ ಮಾಡಲಾಗುತ್ತಿತ್ತು. ಇದರಿಂದ ಪಾರಾಗುವುದಕ್ಕಾಗಿಯೇ ಅವರು ಕೆನಡಾಗೆ ಅರ್ಜಿ ಸಲ್ಲಿಸಿದ್ದಾರಂತೆ.
Advertisement
ಭಾರತದ ಪೌರತ್ವ ಪಡೆಯುವುದಕ್ಕಾಗಿ ಅವರು ಕೆನಡಾದ (Canada)ಪಾಸ್ ಪೋರ್ಟ್ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ರಾಷ್ಟ್ರೀಯ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅಕ್ಷಯ್, ‘ನನಗೆ ಭಾರತವೇ ಎಲ್ಲ. ಅದು ಎಲ್ಲವನ್ನೂ ನನಗೆ ಕೊಟ್ಟಿದೆ. ನಾನು ಇಲ್ಲಿಯವನು ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತದೆ. ಹಾಗಾಗಿ ನಾನು ಕೆನಡಾ ಪಾಸ್ ಪೋರ್ಟ್ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
Advertisement
Advertisement
ಪೌರತ್ವದ ವಿಷಯದಲ್ಲಿ ಬೇಸರವನ್ನು ವ್ಯಕ್ತ ಪಡಿಸಿರುವ ಅವರು, ‘ನಾನು ಭಾರತದಿಂದ ಎಲ್ಲವನ್ನೂ ಪಡೆದುಕೊಂಡಿದ್ದೇನೆ. ಪಡೆದದ್ದೆಲ್ಲವನ್ನೂ ಭಾರತಕ್ಕೆ ಕೊಡಲಿದ್ದೇನೆ. ಆದರೆ, ಜನರನ್ನು ಕೆಲವರು ಹಾದಿ ತಪ್ಪಿಸುತ್ತಿದ್ದಾರೆ. ಹಾಗಾಗಿ ಅವರು ನನ್ನ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಇದರಿಂದ ನಿಜಕ್ಕೂ ನನಗೆ ಬೇಸರವಾಗಿದೆ’ ಎಂದು ಅವರು ಮಾತನಾಡಿದ್ದಾರೆ. ಇದನ್ನೂ ಓದಿ:ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ
Advertisement
ತಾವು ಕೆನಡಾ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರ ಕುರಿತು ಮಾತನಾಡಿರುವ ಅವರು, 1990ರ ದಶಕದಲ್ಲಿ ಇವರ ಬಹುತೇಕ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದವಂತೆ. ರಿಲೀಸ್ ಆದ ಅಷ್ಟೂ ಸಿನಿಮಾಗಳು ಸೋತವು. ಈ ಕಾರಣದಿಂದಾಗಿ ಅವರು ಕೆನಡಾ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರಂತೆ. ದೇಶಭಕ್ತಿ ಸಾರುವಂತಹ ಸಾಕಷ್ಟು ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಇಂತಹ ಸಿನಿಮಾಗಳು ಬಂದಾಗೆಲ್ಲ ಇವರ ಪೌರತ್ವದ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಹಾಗಾಗಿ ಅವರಿಗೆ ಸಹಜವಾಗಿಯೇ ಬೇಸರವಾಗಿದೆಯಂತೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k
The point of view of your article has taught me a lot, and I already know how to improve the paper on gate.oi, thank you. https://www.gate.io/vi/signup/XwNAU
Your article gave me a lot of inspiration, I hope you can explain your point of view in more detail, because I have some doubts, thank you.