ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ (Akshay Kumar) ಲಕ್ ಕೈ ಕೊಟ್ಟಿಂತಿದೆ. ಅವರು ನಟಿಸಿರುವ ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿವೆ. ಇದರ ನಡುವೆ ಇದೀಗ ಮಗನ ಬಗ್ಗೆ ಅಕ್ಷಯ್ ನೀಡಿರುವ ಹೇಳಿಕೆ ಈಗ ಸದ್ದು ಮಾಡುತ್ತಿದೆ. ನನ್ನ ಮಗ ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು ಧರಿಸುತ್ತಾನೆ ಎಂದು ಅಕ್ಷಯ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಆರವ್ ಓದುತ್ತಿದ್ದಾನೆ. 15 ವರ್ಷಕ್ಕೆ ಮಗ ಮನೆ ತೊರೆದಿದ್ದನು. ವಿದ್ಯಾಭ್ಯಾಸದ ಬಗ್ಗೆ ಅವನಿಗೆ ಯಾವಾಗಲೂ ಆಸಕ್ತಿ ಇತ್ತು. ಒಬ್ಬನೇ ಇರಲು ಇಷ್ಟಪಡುತ್ತಾನೆ. ಆದರೆ ಆರವ್ (Aarav Kumar) ಲಂಡನ್‌ಗೆ ಹೋಗೋದು ನನಗೆ ಇಷ್ಟವಿರಲಿಲ್ಲ. ಆದರೆ ಅದು ಅವನ ನಿರ್ಧಾರ. ಹಾಗಂತ ನಾನು ಅವನನ್ನು ತಡೆಯಲಿಲ್ಲ. ಯಾಕೆಂದರೆ ನಾನು ಕೂಡ 14ನೇ ವಯಸ್ಸಿಗೆ ಮನೆ ಬಿಟ್ಟಿದ್ದೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಆರವ್ ತನ್ನ ಬಟ್ಟೆಯನ್ನು ತಾನೇ ತೊಳೆದುಕೊಳ್ಳುತ್ತಾನೆ. ಚೆನ್ನಾಗಿ ಅಡುಗೆ ಮಾಡುತ್ತಾನೆ ಕೂಡ. ದುಬಾರಿಯಾದ ಬಟ್ಟೆಗಳನ್ನು ಖರೀದಿಸಲು ಆತ ಇಷ್ಟಪಡುವುದಿಲ್ಲ. ಬಟ್ಟೆ ಖರೀದಿಸಲು ಸೆಕೆಂಡ್ ಹ್ಯಾಂಡ್ ಸ್ಟೋರ್‌ಗೆ ಹೋಗುತ್ತಾನೆ. ಸುಮ್ಮನೆ ಖರ್ಚು ಮಾಡುವುದು ಅವನಿಗೆ ಇಷ್ಟ ಇಲ್ಲ ಎಂದಿದ್ದಾರೆ. ಇದನ್ನೂ ಓದಿ:ರಾಮ್ ಚರಣ್ ತಾಯಿಯ ಪಾತ್ರದಲ್ಲಿ ವಿಜಯ ಶಾಂತಿ
ಆರವ್ ಕುಮಾರ್‌ಗೆ ಈಗ 21 ವರ್ಷ ವಯಸ್ಸು. ಹಾಗಾದ್ರೆ ನಟನೆಗೆ ಎಂಟ್ರಿ ಕೊಡುವುದು ಯಾವಾಗ ಎಂದು ಕೇಳಲಾಯ್ತು. ಆರವ್‌ಗೆ ನಟನೆ ಇಷ್ಟವಿಲ್ಲ. ಫ್ಯಾಷನ್ ಕ್ಷೇತ್ರದಲ್ಲಿ ಸಾಧನೆ ಮಾಡಲು ಅವರು ನಿರ್ಧರಿಸಿದ್ದಾರೆ. ಪತ್ನಿ ಮಗನನ್ನು ಬೆಳೆಸಿರುವ ರೀತಿಯ ಬಗ್ಗೆ ಖುಷಿಯಿದೆ ಎಂದು ಅಕ್ಷಯ್ ಮಾತನಾಡಿದ್ದಾರೆ.