ಬಾಲಿವುಡ್ ಸಿನಿಮಾರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕನಾಗಿ ಸೈ ಎನಿಸಿಕೊಂಡಿರುವ ಅಜಯ್ ದೇವಗನ್ (Ajay Devgn) ಅವರು ಮುಂಬೈನಲ್ಲಿ ಕೋಟಿ ಕೋಟಿ ಕೊಟ್ಟು ಆಸ್ತಿ ಖರೀದಿ ಮಾಡಿದ್ದಾರೆ. ನಟನೆಯ ಜೊತೆ ಉದ್ಯಮ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಅಜಯ್ ದೇವಗನ್ ಅವರ ಕಚೇರಿಗಾಗಿ ಕೋಟ್ಯಾಂತರ ಮೌಲ್ಯದ ಆಸ್ತಿ ಖರೀದಿ ಮಾಡಿದ್ದಾರೆ.
ಕಲಾವಿದರಾಗಿ ಕಾಜೋಲ್ (Kajol)- ಅಜಯ್ ದೇವಗನ್ ಸಕ್ಸಸ್ ಕಂಡಿದ್ದಾರೆ. ನಿರ್ದೇಶನ, ನಿರ್ಮಾಣ, ಉದ್ಯಮ ಕ್ಷೇತ್ರ ಅಂತಾ ತಮ್ಮನ್ನ ಅಜಯ್ ದೇವಗನ್ ತೊಡಗಿಸಿಕೊಂಡಿದ್ದಾರೆ. ಪತಿಯ ಕೆಲಸಕ್ಕೆ ಕಾಜೋಲ್ ಕೂಡ ಸಾಥ್ ನೀಡಿದ್ದಾರೆ. ತಮ್ಮ ಸಿನಿಮಾ ನಿರ್ಮಾಣ, ವಿತರಣೆ ಹಾಗೂ ವಿಎಫ್‌ಎಕ್ಸ್ ಸಂಸ್ಥೆಗಳ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಹಾಗೂ ಇತರೆ ನಟರ ಸಿನಿಮಾಗಳ ನಿರ್ಮಾಣ ಹಾಗೂ ವಿತರಣೆಯೆಡೆಗೂ ಗಮನ ಹರಿಸುವ ಯೋಜನೆಗಾಗಿಯೇ ದೊಡ್ಡ ಕಚೇರಿಯನ್ನು ದೇವಗನ್ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿ ಭಾರಿ ದೊಡ್ಡ ಮೊತ್ತವನ್ನೇ ತೆತ್ತು ತಮ್ಮ ಅಭಿರುಚಿಗೆ ಅನುಗುಣವಾಗಿ ಕಚೇರಿಯನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.
13,293 ಚದರ ಅಡಿಯ ದೊಡ್ಡ ಅಪಾರ್ಟ್ಮೆಂಟ್ ಅನ್ನು ದೆವಗನ್ ಖರೀದಿ ಮಾಡಿದ್ದಾರೆ. ದೇವಗನ್‌ರ ಈ ಕಚೇರಿಯು ಮುಂಬೈನ ಒಶಿವಾರದ ವೀರಾ ದೇಸಿ ರಸ್ತೆಯಲ್ಲಿದೆ. ನೊಂದಣಿ ದಾಖಲೆಗಳ ಅನ್ವಯ ಈ ಕಚೇರಿ ಸ್ಥಳಕ್ಕೆ 45.09 ಕೋಟಿ ಮೊತ್ತವನ್ನು ಅಜಯ್ ದೇವಗನ್ ನೀಡಿದ್ದಾರೆ. ಇದು ದಾಖಲಾಗಿರುವ ಮೊತ್ತವಾದರೆ ಇದಕ್ಕಿಂತಲೂ ಸುಮಾರು 30% ಹೆಚ್ಚು ಮೊತ್ತವನ್ನು ಮಾಲೀಕರಿಗೆ ದೇವಗನ್ ನೀಡಿದ್ದಾರೆ ಎನ್ನಲಾಗುತ್ತದೆ. ಇದನ್ನೂ ಓದಿ:3ನೇ ಪತ್ನಿಯಿಂದಲೂ ದೂರಾವಾದ್ರಾ ನಟ ಪವನ್ ಕಲ್ಯಾಣ್?
ಇದರ ಹೊರತಾಗಿ ಮುಂಬೈನ ಮತ್ತೊಂದು ಅಪಾರ್ಟ್ಮೆಂಟ್ ಸಮುಚ್ಛಯದಲ್ಲಿ ಫ್ಲ್ಯಾಟ್ ಒಂದನ್ನು ಖರೀದಿಸಿದ್ದು ಇದೂ ಸಹ ಕಚೇರಿಗಾಗಿಯೇ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಮನಿಕಂಟ್ರೋಲ್ ಮಾಹಿತಿ ಪ್ರಕಾರ, 8405 ಚದರ ಅಡಿಯ ದೊಡ್ಡ ಕಚೇರಿ ಸ್ಥಳವನ್ನು 30.35 ಕೋಟಿ ತೆತ್ತು ಅಜಯ್ ಖರೀದಿ ಮಾಡಿದ್ದಾರೆ. ಇದಕ್ಕೂ ಸಹ ದಾಖಲೆಗಳಲ್ಲಿ ನಮೂದಿಸಿದಕ್ಕಿಂತಲೂ ಹೆಚ್ಚಿನ ಮೊತ್ತವನ್ನೇ ಅಜಯ್ ನೀಡಿದ್ದಾರೆ. ಮೂರನೇ ಕಚೇರಿಯನ್ನು ಮುಂಬೈನ ವೀರ್ ಸಾವರ್ಕರ್ ಪ್ರಾಜೆಕ್ಟ್‌ನವರಿಂದ ಖರೀದಿ ಮಾಡಿದ್ದು 4893 ಚದರ ಅಡಿಯ ಕಚೇರಿ ಸ್ಥಳವನ್ನು 14.74 ಕೋಟಿ ನೀಡಿ ಖರೀದಿ ಮಾಡಿದ್ದಾರೆ. ಅಲ್ಲಿಗೆ ಮೂರು ಕಚೇರಿಗೆ ಸುಮಾರು 100 ಕೋಟಿಗೂ ಹೆಚ್ಚು ಹಣವನ್ನು ನೀಡಿ ಅಜಯ್ ಖರೀದಿಸಿದ್ದಾರೆ. ಇದೇ ವರ್ಷದ ಏಪ್ರಿಲ್‌ನಲ್ಲಿ ಅಜಯ್ ದೇವಗನ್ ಪತ್ನಿ ಕಾಜೋಲ್ ಮುಂಬೈನಲ್ಲಿಯೇ 16.50 ಕೋಟಿ ಹಣ ನೀಡಿ 2493 ಚದರ ಅಡಿಯ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದರು. ಈ ಫ್ಲ್ಯಾಟ್ ಜೊತೆಗೆ ನಾಲ್ಕು ಕಾರುಗಳ ಪಾರ್ಕಿಂಗ್ ಸ್ಥಳವೂ ಅವರಿಗೆ ದೊರಕಿತ್ತು. ಇದಕ್ಕಾಗಿ ಹೆಚ್ಚಿನ ಮೊತ್ತವನ್ನು ನಟಿ ತೆತ್ತಿದ್ದರು.
ನಟ ಅಜಯ್ ದೇವಗನ್ ಅವರು ನಟನೆ, ನಿರ್ದೇಶನ ಅಂತಾ ಬ್ಯುಸಿಯಾಗಿದ್ದಾರೆ. ಕಾಜೋಲ್ ಅವರು ಇತ್ತೀಚಿಗೆ ‘ಲಸ್ಟ್ ಸ್ಟೋರೀಸ್ 2’ನಲ್ಲಿ ನಟಿಸಿದ್ದರು. ‘ದಿ ಟ್ರಯಲ್’ ಸಿನಿಮಾ ರಿಲೀಸ್‌ಗೆ ಎದುರು ನೋಡ್ತಿದ್ದಾರೆ.