ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಅವರು ಮೊದಲ ಬಾರಿಗೆ ಗರ್ಲ್‌ಫ್ರೆಂಡ್ ಗೌರಿ ಸ್ಪ್ರಾಟ್ (Gauri Spratt) ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿ ಫಸ್ಟ್ ಟೈಮ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ಆಮೀರ್ ಖಾನ್ ತಾವು ಬೆಂಗಳೂರಿನ ಬೆಡಗಿ ಗೌರಿ (Gauri Spratt) ಜೊತೆ ಡೇಟಿಂಗ್ (Dating) ಮಾಡುತ್ತಿರೋದಾಗಿ ಇತ್ತೀಚೆಗೆ ರಿವೀಲ್ ಮಾಡಿದ್ದರು. ಈಗ ಮೊದಲ ಬಾರಿಗೆ ಆಮೀರ್ ಮತ್ತು ಗೌರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮುಂಬೈನ ಎಕ್ಸೆಲ್ ಆಫೀಸ್‌ನಿಂದ ಹೊರಬರುವಾಗ ಪಾಪರಾಜಿಗಳ ಕ್ಯಾಮೆರಾಗೆ ಆಮೀರ್ ಸ್ಮೈಲ್ ಮಾಡಿದ್ದಾರೆ. ಗರ್ಲ್‌ಫ್ರೆಂಡ್ ಗೌರಿಯನ್ನು ಮೊದಲಿಗೆ ಕಾರಿನಲ್ಲಿ ಕೂರಿಸಿ ಅವರು ತೆರಳಿದ್ದಾರೆ. ಇದನ್ನೂ ಓದಿ:ಮದುವೆಗೆ ಸಜ್ಜಾದ ‘ಬಿಗ್ ಬಾಸ್’ ಖ್ಯಾತಿಯ ತೇಜಸ್ವಿ ಪ್ರಕಾಶ್, ಕರಣ್ ಕುಂದ್ರಾ ಜೋಡಿ
View this post on Instagram
ಅಂದಹಾಗೆ, ಮಾ.14ರಂದು ಆಮೀರ್ ಖಾನ್ 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದರು. ಈ ವೇಳೆ, ಮಾಧ್ಯಮದ ಜೊತೆ ಡೇಟಿಂಗ್ ಬಗ್ಗೆ ಅಧಿಕೃತವಾಗಿ ತಿಳಿಸಿದ್ದರು. ಗೌರಿ ಜೊತೆ 1 ವರ್ಷದಿಂದ ಡೇಟಿಂಗ್ ಮಾಡುತ್ತಿದ್ದೇನೆ. ಅವರನ್ನು ಕಳೆದ 25 ವರ್ಷಗಳಿಗಿಂತ ಹೆಚ್ಚಿನ ಕಾಲದಿಂದ ಪರಿಚಿತರು ಎಂದು ಹೇಳಿದ್ದಾರೆ. ಗೌರಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ತಮ್ಮದೇ ನಿರ್ಮಾಣದ ಸಂಸ್ಥೆಯಡಿಯಲ್ಲಿ ಕೆಲಸ ಮಾಡುತ್ತಿರೋದಾಗಿ ಆಮೀರ್ ಮಾಹಿತಿಯನ್ನು ಹಂಚಿಕೊಂಡಿದ್ದರು.
ಗೌರಿಗೆ 6 ವರ್ಷದ ಮಗನಿದ್ದು, ನಾನು ಅವರೊಂದಿಗೆ ವಾಸಿಸುತ್ತಿದ್ದೇನೆ. ನಮ್ಮ ಕುಟುಂಬಸ್ಥರನ್ನು ಆಕೆ ಭೇಟಿಯಾಗಿದ್ದಾರೆ. ನಮ್ಮ ಸಂಬಂಧದ ಬಗ್ಗೆ ಮನೆಯವರಿಗೂ ಖುಷಿಯಿದೆ ಎಂದು ನಟ ಹೇಳಿದ್ದರು.
ಆಮೀರ್ ಗೆಳತಿ ಗೌರಿ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಏನೆಂದರೆ, ಅರ್ಧ ತಮಿಳಿನ ಮತ್ತು ಐರಿಷ್ ಆಗಿದ್ದಾರೆ. ಅವರ ಅಜ್ಜ ಸ್ವಾತಂತ್ರ‍್ಯ ಹೋರಾಟಗಾರರಾಗಿದ್ದರು.
2021ರಲ್ಲಿ ಕಿರಣ್ ರಾವ್‌ಗೆ ಆಮೀರ್ ಡಿವೋರ್ಸ್ ನೀಡಿದರು. ಇದಕ್ಕೂ ಮುನ್ನ ರೀನಾ ದತ್‌ಗೆ 2002ರಲ್ಲಿ ಡಿವೋರ್ಸ್ ಆಗಿತ್ತು. ಈಗ ಮತ್ತೆ ಹೊಸ ಬಾಳಿಗೆ ಕಾಲಿಡಲು ಆಮೀರ್ ರೆಡಿಯಾಗಿದ್ದಾರೆ.