ಭಾವಿ ಪತಿಗೆ ಸಿಹಿ ಮುತ್ತನಿಟ್ಟು 25ನೇ ವರ್ಷದ ಬರ್ತ್‌ಡೇ ಆಚರಿಸಿದ ಆಮೀರ್ ಖಾನ್ ಪುತ್ರಿ

Public TV
1 Min Read
ira khan

ಬಾಲಿವುಡ್ (Bollywood) ನಟ ಆಮೀರ್ ಖಾನ್ (Aamir Khan) ಪುತ್ರಿ ಇರಾ ಖಾನ್ (Ira Khan) ಅವರು 25ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಭಾವಿ ಪತಿ ನೂಪುರ್‌ಗೆ ಸಿಹಿಮುತ್ತನಿಟ್ಟು ಬರ್ತ್ಡೇಯನ್ನ ಸ್ಪೆಷಲ್ ಆಗಿ ಸೆಲೆಬ್ರೆಟ್ ಮಾಡಿದ್ದಾರೆ.

ira khan and nupur shikhare 1

ಆಮಿರ್ ಖಾನ್ ಅವರ ಪುತ್ರಿ ಇರಾ ಖಾನ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿಲ್ಲ. ಹಾಗಿದ್ದರೂ ಕೂಡ ಅವರು ಸಾಕಷ್ಟು ಜನಪ್ರಿಯತೆ ಹೊಂದಿದ್ದಾರೆ. ಸದಾ ಭಾವಿ ಪತಿ ಜೊತೆಗಿನ ಬೋಲ್ಡ್ ಫೋಟೋ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದನ್ನೂ ಓದಿ:ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟ ಕ್ರಿಕೆಟಿಗ ಶುಭಮನ್‌ ಗಿಲ್

ira khan

ಕಳೆದ ನವೆಂಬರ್‌ನಲ್ಲಿ ಆಮೀರ್ ಪುತ್ರಿ ಇರಾ- ನೂಪುರ್ ಶಿಖಾರೆ (Nupur Shikhare) ಅದ್ದೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡರು. ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲು ಈ ಜೋಡಿ ಸಜ್ಜಾಗಿದ್ದಾರೆ.

 

View this post on Instagram

 

A post shared by Popeye ⚓ (@nupur_popeye)

ಇದೀಗ ಇರಾ ಖಾನ್, ಮೇ 8ರಂದು 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಭಾವಿ ಪತಿ ನೂಪುರ್ ಜೊತೆ ಇರಾ ಖಾನ್ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಭಾವಿ ಪತ್ನಿಯ ಬರ್ತ್‌ಡೇ ಪ್ರಯುಕ್ತ ನೂಪುರ್ ಶಿಖಾರೆ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇರಾ ಖಾನ್ ಅವರು ಸಿಹಿ ಮುತ್ತು (Kiss) ನೀಡಿದ ಕ್ಷಣ ಈ ಫೋಟೋದಲ್ಲಿ ಸೆರೆಯಾಗಿದೆ. ಈ ಫೋಟೋಗೆ ನೆಟ್ಟಿಗರು ಮತ್ತು ಸ್ನೇಹಿತರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

Share This Article