ರಾಯಚೂರು: ಕೃಷಿ ಕೂಲಿ ಕಾರ್ಮಿಕರನ್ನು (Laborers) ಹೊತ್ತೊಯ್ಯುತ್ತಿದ್ದ ಬೊಲೆರೊ (Bolero) ವಾಹನ ಪಲ್ಟಿಯಾಗಿದ್ದು (Overturns), ಅಪಘಾತದಲ್ಲಿ (Accident) 16 ಕಾರ್ಮಿಕರು ಗಾಯಗೊಂಡಿರುವ ಘಟನೆ ರಾಯಚೂರು (Raichur) ಜಿಲ್ಲೆಯ ಸಿರವಾರ ಬಳಿ ನಡೆದಿದೆ.
ವರದಿಗಳ ಪ್ರಕಾರ ಕೃಷಿ ಕಾರ್ಮಿಕರನ್ನು ಜಮೀನು ಕೆಲಸಕ್ಕೆಂದು ಮಸ್ಕಿಯಿಂದ ಕೆರಕಲಮರಡಿ ಗ್ರಾಮಕ್ಕೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ವಾಹನ ಪಲ್ಟಿಯಾಗಿದ್ದು, 16 ಜನರಿಗೆ ಗಾಯಗಳಾಗಿವೆ. ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಇದನ್ನೂ ಓದಿ: ಕಾರಿನಲ್ಲೇ ನೈಟ್ರೋಜನ್ ಸಿಲಿಂಡರ್ ಲೀಕ್ ಮಾಡ್ಕೊಂಡು ಸೀನಿಯರ್ ಟೆಕ್ಕಿ ಆತ್ಮಹತ್ಯೆ
ಅಪಘಾತ ಸಿರವಾರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಸಿರವಾರ ಪೊಲೀಸರು ಭೇಟಿ ನೀಡಿದ್ದಾರೆ.