ವಾಷಿಂಗ್ಟನ್: 143 ಪ್ರಯಾಣಿಕರಿದ್ದ ವಿಮಾನವೊಂದು ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಬದಲು ಆಯ ತಪ್ಪಿ ನದಿಗೆ ಬಿದ್ದ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ.
ಬೋಯಿಂಗ್ 737 ವಿಮಾನವು ಕ್ಯೂಬಾದ ಗ್ವಾಟನಾಮೋದಿಂದ 136 ಪ್ರಯಾಣಿಕರು ಮತ್ತು 7 ಮಂದಿ ಸಿಬ್ಬಂದಿಯನ್ನು ಹೊತ್ತು ಜಾಕ್ಸನ್ವಿಲ್‍ನ ನಾವಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಲ್ಯಾಂಡ್ ಆಗುವ ಸಮಯದಲ್ಲಿ ಆಯ ತಪ್ಪಿ ಅದು ಪ್ಲೋರಿಡಾದ ಸೇಂಟ್ ಜಾನ್ಸ್ ನ್ ನದಿಗೆ ಬಿದ್ದಿದೆ ಎಂದು ಅಲ್ಲಿನ ಏರ್ ಬೇಸ್ ವಕ್ತಾರರು ಹೇಳಿದ್ದಾರೆ.
Advertisement
ಈ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಎಲ್ಲರೂ ಕ್ಷೇಮವಾಗಿ ಇದ್ದಾರೆ. ಯಾವುದೇ ರೀತಿಯ ಸಾವು ಸಂಭವಿಸಿಲ್ಲ. ವಿಮಾನದಿಂದ ಜನರನ್ನು ಕೆಳಗೆ ಇಳಿಸುವ ಸಂದರ್ಭದಲ್ಲಿ 21 ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಅವರೆಲ್ಲರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಕ್ಷೇಮವಾಗಿದ್ದಾರೆ. ಎಲ್ಲಾ ಪ್ರಯಾಣಿಕರು ಲೆಕ್ಕಕ್ಕೆ ಸಿಕ್ಕಿದ್ದಾರೆ. ಯಾವ ಅಪಾಯವೂ ಇಲ್ಲ. ಹೀಗಾಗಿ ಯಾರು ಆತಂಕ ಪಡಬೇಡಿ ಎಂದು ಪ್ಲೋರಿಡಾದ ಜಾಕ್ಸನ್ವಿಲ್ ಶರೀಪ್ ಏಜೆನ್ಸಿ ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದೆ.
Advertisement
Advertisement
ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವಕೀಲ ಚೆರಿಲ್ ಬೋರ್ಮನ್, ವಿಮಾನವು ಕ್ಯೂಬಾದಿಂದ 4 ಗಂಟೆ ತಡವಾಗಿ ಹೊರಟಿತ್ತು. ನಂತರ ಮಿಂಚು ಗಾಳಿಗಳ ಮಧ್ಯೆ ಜ್ಯಾಕ್ಸನ್ವಿಲೆಗೆ ಕ್ಷೇಮವಾಗಿ ಬಂತು. ಆದರೆ ಲ್ಯಾಂಡಿಂಗ್ ಸಮಯದಲ್ಲಿ ತಾಂತ್ರಿಕ ದೋಷದಿಂದಾಗಿ ವಿಮಾನವು ಪೈಲಟ್ ನಿಯಂತ್ರಣಕ್ಕೆ ಸಿಗಲಿಲ್ಲ. ಹೀಗಾಗಿ ತಕ್ಷಣ ನೆಲಕ್ಕೆ ಅಪ್ಪಳಿಸಿ ಬಳಿಕ ವಿಮಾನ ನದಿಯಲ್ಲಿ ಬಂದು ನಿಂತಿತು. ಇದರಿಂದ ನಾವು ಸಾಗರದೊಳಗೆ ಇದ್ದೇವಾ ನದಿಯಲ್ಲಿ ಇದ್ದೇವಾ ಎಂಬುದು ನಮಗೆ ಗೊತ್ತೆ ಆಗಿರಲಿಲ್ಲಿ. ಅಲ್ಲಿಂದ ಸೇನೆಯ ಸಹಾಯದಿಂದ ಹೊರಗಡೆ ಬಂದೆವು ಎಂದು ವಿಮಾನದೊಳಗಾದ ರೋಚಕ ಅನುಭವವನ್ನು ಹಂಚಿಕೊಂಡರು.
Advertisement
ಈ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಜ್ಯಾಕ್ಸನ್ವಿಲೆಯ ಮೇಯರ್ ಲೆನ್ನಿ ಕರ್ರಿ, ಅಮೇರಿಕಾದ ಆಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಹಾಯ ನೀಡಬೇಕು ಎಂದು ಮನವಿ ಮಾಡಿದ್ದಾರೆ.