ನೀವು ಸ್ನೇಹಿತರ ಜೊತೆ ಅಥವಾ ಕ್ಲಬ್ನಲ್ಲಿ ಪಾರ್ಟಿಗೆ ಹೋಗುತ್ತಿದ್ದರೆ ಖಂಡಿತವಾಗಿಯೂ ಈ ಮಹಿಳಾ ಉಡುಗೆ ಬಾಡಿಕಾನ್ ಡ್ರೆಸ್ ಧರಿಸಿ.
ಹೌದು. ಕನ್ನಡ ಮಾತ್ರವಲ್ಲದೇ ಬಾಲಿವುಡ್ ಸಿನಿ ತಾರೆಯರೂ ಇಂದು ಹೆಚ್ಚಾಗಿ ಇಷ್ಟಪಡುವ ಈ ಬಾಡಿಕಾನ್ ಹಾಟ್ ಮತ್ತು ಆಕರ್ಷಕ ನೋಟವನ್ನು ನೀಡುತ್ತದೆ. ಅನೇಕ ಬಣ್ಣ, ಆಯ್ಕೆಗಳಲ್ಲೂ ಲಭ್ಯವಿವೆ ಮತ್ತು ತುಂಬಾ ಆರಾಮದಾಯಕವಾಗಿದೆ. ಹೀಲ್ಡ್ಸ್ ಗಳೊಂದಿಗೆ ಧರಿಸೋದ್ರಿಂದ 40 ವರ್ಷದ ಮಹಿಳೆಯೂ ಸಹ 25ರ ಹರೆಯದ ಯುವತಿಯಂತೆ ಕಾಣ್ತಾರೆ. ಹುಟ್ಟುಹಬ್ಬದಂದು ಗೆಳತಿ ಅಥವಾ ಹೆಂಡತಿಗೆ ಉಡುಗೊರೆ ನೀಡಲು ಈ ಉಡುಗೆ ಸೂಕ್ತ.
Advertisement
Advertisement
ಹಾಗಿದ್ದರೆ, ತಮ್ಮ ಮೈಮಾಟಗಳಿಂದಲೇ ಯುವಕರು, ಪುರುಷರನ್ನ ಆಕರ್ಷಿಸಬೇಕೆನ್ನುವ ಹೆಂಗಳೆಯರಿಗೆ ಪಕ್ಕಾ ಫಿಟ್ ಆಗಿ ಕಾಣುವ ಈ ಬಾಡಿಕಾನ್ ಡ್ರೆಸ್ನಲ್ಲಿ ಯಾವೆಲ್ಲಾ ಬಗೆಗಳಿವೆ ಅನ್ನೋದನ್ನ ನೋಡಿ.
Advertisement
ಮಾಕ್ ನೆಟ್ ಸ್ವೆಟರ್:
ಇದು ಹವಾಮಾನಕ್ಕೆ ತಕ್ಕಂತೆ ಸ್ವೆಟರ್ ರೂಪದಲ್ಲಿ ಸ್ಟ್ರೆಚ್ ಮಾಡಲಾದ ಉಡುಗೆ. ಜೊತೆಗೆ ಎಕ್ಸ್ಪೆಂಡೆಬಲ್ (ಹಿಗ್ಗುವಿಕೆ) ಆಗಿರುತ್ತದೆ. ಚಿಕ್ಕವರಿಂದ ದೊಡ್ಡ ವಯಸ್ಸಿನವರೂ ಇದನ್ನ ಧರಿಸಬಹುದು.
Advertisement
ಲಾಂಗ್ ಸ್ಲೀವ್ ವಿ-ನೆಕ್:
ಲಾಂಗ್ ಸ್ಲೀವ್ ವಿ-ನೆಕ್ ಬಾಡಿಕಾನ್ ಎಲ್ಲಾ ಬಣ್ಣಗಳಲ್ಲೂ ಇರುತ್ತದೆ. ಯಾವ ಕಾಲಮಾನಕ್ಕೂ ಹೊಂದಿಕೆಯಾಗುತ್ತದೆ. ಕುತ್ತಿಗೆಯಿಂದ ಎದೆಯಭಾಗದ ವರೆಗೆ ವಿ-ಶೇಪ್ ಹೊಂದಿರೋದ್ರಿಂದ ಹೆಂಗಳೆಯರು ಮತ್ತಷ್ಟು ಹಾಟ್ ಹಾಟ್ ಆಗಿ ಕಾಣುವಂತೆ ಮಾಡುತ್ತದೆ.
ಸ್ಲೀವ್ ಲೆಸ್ ಮಿಡಿ ಡ್ರೆಸ್:
ಪ್ರತಿದಿನ ಹೊಸ ಟ್ರೆಂಡ್ ಬಯಸುವ ಯುವತಿಯರಿಗೆ ಈ ಡ್ರೆಸ್ ಹೆಚ್ಚು ಪ್ರಿಯವಾಗುತ್ತದೆ. ಬಾಲಿವುಡ್ ಸಿನಿ ತಾರೆಯರಂತೂ ಇದರಿಂದ ಹೊರತಾಗಿಯೇ ಇರೋದಿಲ್ಲ. ಇದು ಇಡೀ ದೇಹವನ್ನ ಅಪ್ಪಿಕೊಂಡ ಅನುಭವ ನೀಡುತ್ತದೆ. ಜೊತೆಗೆ ಹಾಟ್ ಲುಕ್ನಲ್ಲಿ ಅಂದವನ್ನು ಹೆಚ್ಚಿಸಿ, ಯುವಕರನ್ನು ಸೆಳೆಯುವಂತೆ ಮಾಡುತ್ತೆ.
ರಚ್ಡ್ ಮಿನಿ ಡ್ರೆಸ್:
ಈ ಡ್ರಸ್ ಹೆಚ್ಚು ಎಕ್ಸ್ಪೆಂಡೆಬಲ್ ಆಗಿರೋದ್ರಿಂದ ಎಲ್ಲ ವಯೋಮಾನದವರಿಗೂ ಒಗ್ಗಿಕೊಳ್ಳುತ್ತೆ. ಆದ್ರೆ ಮೃದುವಾಗಿರಲ್ಲ, ಒರಟಾಗಿರುತ್ತೆ. ಕಾಲೇಜು ಯುವತಿಯರು ಹಾಗೂ ಮೆಟ್ರೋ ಸಿಟಿಗಳಲ್ಲಿನ ಯುವತಿಯರು ಹಾಗೂ ಮಹಿಳೆಯರು ಇಂತಹ ಉಡುಗೆಯನ್ನು ಇಷ್ಟಪಡೋದು ಸಹಜ.
ವೈರಲ್ ಸ್ಕಿಮ್ಸ್ ಸ್ಲಿಪ್ ಡ್ರೆಸ್:
ಟಿಕ್ಟಾಕ್ ಸ್ಟಾರ್ ಯುವತಿಯರು ಈ ಡ್ರೆಸ್ಗಳನ್ನ ಬಳಸದೇ ರೀಲ್ಸ್ ಮಾಡೋದೇ ಇಲ್ಲ ಅಂತಾರೆ. ಬಾಲಿವುಡ್ ತಾರೆ ಜಾಹ್ನವಿ ಕಪೂರ್ ಸಹ ಆಗಾಗ್ಗೆ ಈ ರೀತಿಯ ಉಡುಗೆ ಧರಿಸಿಯೇ ವೈರಲ್ ಆಗಿದ್ದಾರೆ. ಪಾರ್ಟಿ, ಮದುವೆ ಕಾರ್ಯಕ್ರಮಗಳಿಗೆ ಮಾತ್ರವಲ್ಲದೇ ಎಲ್ಲ ರೀತಿಯ ಈವೆಂಟ್ಗಳಿಗೂ ಈ ಡ್ರೆಸ್ ಹೊಂದಿಕೊಳ್ಳುತ್ತದೆ. ಆದ್ದರಿಂದಲೇ ಹೆಚ್ಚು ಅಗ್ಗದ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k