ಬಿಗ್ ಬಾಸ್ ಮನೆ ಸಾಕಷ್ಟು ವಿಚಾರಗಳಿಂದ ನೋಡುಗರ ಗಮನ ಸೆಳೆದಿದೆ. ಇದೀಗ 12 ಸ್ಪರ್ಧಿಗಳ ನಡುವೆ ಜಟಾಪಟಿ ಜೋರಾಗಿದೆ. ಈ ಶೋನಲ್ಲಿ ಸಾನ್ಯ ಅಯ್ಯರ್ ಕೂಡ ಸ್ಟ್ರಾಂಗ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಬಾಡಿ ಶೇಮಿಂಗ್ ಜಾಸ್ತಿ ಆಗಿರುವುದರ ಕುರಿತು ಸಾನ್ಯ ಅಯ್ಯರ್ ಮಾತನಾಡಿದ್ದಾರೆ. ಬಾಡಿ ಶೇಮಿಂಗ್ ವಿಚಾರ ಈಗ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.
ದೊಡ್ಮನೆಯಲ್ಲಿ ಭಿನ್ನ ಮನಸ್ಥಿತಿಯ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅದೇ ರೀತಿ ದೇಹದ ಆಕಾರ, ರೂಪ ಎಲ್ಲವೂ ಬೇರೇ ಬೇರೇ ರೀತಿಯಲ್ಲಿ ಭಿನ್ನವಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಬಾಡಿ ಶೇಮಿಂಗ್ ಎದುರಿಸುತ್ತಿದ್ದಾರೆ. ಆರ್ಯವರ್ಧನ್ ಗುರೂಜಿ ಹೊಟ್ಟೆ ನೋಡಿ ಕೆಲವರು ಟೀಕಿಸಿದ್ದರು. ಹಾಗೆಯೇ ಈ ವಿಚಾರವಾಗಿ ಗೂರೂಜಿ ಬೇಸರ ಹೊರ ಹಾಕಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಿಂದ ಈ ವಾರ ಜಯಶ್ರೀ ಆರಾಧ್ಯಗೆ ಗೇಟ್ ಪಾಸ್?
ಗುರೂಜಿ ಅವರ ಹೊಟ್ಟೆ ನೋಡಿ ಕೆಲವರು ನಕ್ಕಿದ್ದರು. ಅವರು ನೋಡಲು ಸುಂದರವಾಗಿಲ್ಲ ಎಂಬ ಕಾರಣಕ್ಕೆ ಅನೇಕರು ಅವರನ್ನು ಟೀಕೆ ಮಾಡಿದ್ದರು. ಹೀಗಾಗಿ, ತಾವು ಹೊಟ್ಟೆ ಕರಗಿಸಿಕೊಳ್ಳುತ್ತೇವೆ ಎಂಬುದನ್ನು ಆರ್ಯವರ್ಧನ್ ಒತ್ತಿ ಹೇಳಿದ್ದರು. ನನ್ನನ್ನು ನನಗೆ ನೋಡಿಕೊಳ್ಳಲು ಆಗುತ್ತಿಲ್ಲ. ಹೊಟ್ಟೆ ತುಂಬಾ ದೊಡ್ದಾಗಿದೆ. ನನಗೆ ನನ್ನ ಮೇಲೆ ಅಸಹ್ಯ ಹುಟ್ಟುತ್ತಿದೆ. ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಹೊಟ್ಟೆ ಕರಗಿಸುತ್ತೇನೆ ಎಂದು ಆರ್ಯವರ್ಧನ್ ಹೇಳಿದ್ದರು.
ತಮ್ಮ ಬಗ್ಗೆಯೇ ಕೆಟ್ಟಾದಾಗಿ ಮಾತನಾಡಿಕೊಂಡ ಗುರೂಜಿಗೆ ಸಾನ್ಯ ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಬಗ್ಗೆ ಮೊದಲು ಕೆಟ್ಟದಾಗಿ ಮಾತನಾಡಬೇಡಿ. ಮೊದಲೇ ಬಿಗ್ ಬಾಸ್ ಮನೆಯಲ್ಲಿ ಬಾಡಿ ಶೇಮಿಂಗ್ ಜಾಸ್ತಿ ಆಗಿದೆ. ನನಗೂ ಈ ಬಗ್ಗೆ ಅನುಭವ ಆಗಿದೆ. ನಮ್ಮನ್ನು ನಾವು ಮೊದಲು ಕೀಳಾಗಿ ನೋಡುವುದನ್ನ ಬಿಡಬೇಕು ಎಂದು ಸಾನ್ಯ ಅಯ್ಯರ್ ಗುರೂಜಿ ಬಳಿ ಮಾತನಾಡಿದ್ದಾರೆ.