ಆನೇಕಲ್: ಸೂಟ್‌ಕೇಸ್‌ನಲ್ಲಿ (Suitcase) ಅಪರಿಚಿತ ಬಾಲಕಿ ಶವ ಪತ್ತೆಯಾಗಿರುವ ಘಟನೆ ಬೆಂಗಳೂರು (Bengaluru) ಹೊರವಲಯ ಆನೇಕಲ್ (Anekal) ತಾಲೂಕಿನ ಚಂದಾಪುರ (Chandapura) ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ.
ಹೊಸೂರು ಮುಖ್ಯರಸ್ತೆಗೆ ಹೊಂದಿಕೊಂಡಿರುವ ರೈಲ್ವೆ ಬ್ರಿಡ್ಜ್ ಬಳಿ ಸುಮಾರು ಹತ್ತು ವರ್ಷದ ಬಾಲಕಿಯ ಮೃತದೇಹವಿದ್ದ ಸೂಟ್‌ಕೇಸ್ ಪತ್ತೆಯಾಗಿದೆ. ಚಲಿಸುವ ರೈಲಿನಿಂದ ಸೂಟ್‌ಕೇಸ್ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಗೃಹ ಸಚಿವ ಪರಂ ಕೇಸ್‌ಗೆ ರನ್ಯಾರಾವ್ ಲಿಂಕ್?
ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರ ಆಗಮನದ ಬಳಿಕ ಸೂಟ್‌ಕೇಸ್ ಪರಿಶೀಲನೆ ನಡೆಯಲಿದೆ. ಇದನ್ನೂ ಓದಿ: ಬಲೂಚಿಸ್ತಾನದಲ್ಲಿ ಆರ್ಮಿ ಸ್ಕೂಲ್ ಬಸ್ ಮೇಲೆ ಬಾಂಬ್ ದಾಳಿ – 4 ಮಕ್ಕಳು ಸಾವು