CrimeLatestLeading NewsMain PostNational

ಪಕ್ಕದ್ಮನೆ ಯುವಕನೊಂದಿಗೆ ಆಂಟಿ ಎಸ್ಕೇಪ್ – 10 ದಿನಗಳ ನಂತರ ಬಯಲಾಯ್ತು ರಹಸ್ಯ

ಜೈಪುರ: ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧಗಳು ಹೆಚ್ಚಾಗುತ್ತಿದ್ದು, ವೈವಾಹಿಕ ಜೀವನದಲ್ಲಿ ಬಿರುಕು ಮೂಡುತ್ತಿರುವ ಸಂಗತಿಗಳು ಹೆಚ್ಚಾಗುತ್ತಿವೆ. ಪತಿ ಮತ್ತು ಪತ್ನಿಯ ನಡುವಿನ ಸಣ್ಣ ಸಣ್ಣ ಜಗಳಗಳು, ಲೈಂಗಿಕ ಹಿತಾಸಕ್ತಿಯ ಕೊರತೆಯೂ ಕಾರಣವಾಗುತ್ತಿವೆ. ಆದರೆ ಇಂತಹ ಅಕ್ರಮ ಸಂಬಂಧಗಳ ಅಂತ್ಯವು ದುರಂತದಿಂದಲೇ ಕೂಡಿರುತ್ತದೆ ಅನ್ನೋದಕ್ಕೆ ರಾಜಸ್ಥಾನದಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ.

ಪಕ್ಕದ್ಮನೆ ಯುವಕನೊಂದಿಗೆ ಆಂಟಿ ಎಸ್ಕೇಪ್ - 10 ದಿನಗಳ ನಂತರ ಬಯಲಾಯ್ತು ರಹಸ್ಯ

ಇತ್ತೀಚೆಗೆ ರಾಜಸ್ಥಾನದ (Rajasthan) ಬರ್ಮರ್ ಜಿಲ್ಲೆಯ ಸಿಂಧಾರಿ ಪೊಲೀಸ್ ಠಾಣೆಯ (Police Station) ವ್ಯಾಪ್ತಿಯಲ್ಲಿ ಬರುವಾ ಮೋತಿಸಾರ ಗ್ರಾಮದ ಮನೆಯೊಂದರ ನೀರಿನ ಟ್ಯಾಂಕ್‌ನಲ್ಲಿ ಮಹಿಳೆ ಮತ್ತು ಯುವಕನ ಶವ ಪತ್ತೆಯಾಗಿತ್ತು. ಮೃತರನ್ನು ಸಿಂಧಾರಿ ಗ್ರಾಮದ ಚವ್ಹಾನಿ ಮತ್ತು ಜೋಗರಾಮ್ ಎಂದು ಗುರುತಿಸಲಾಗಿತ್ತು. ಬಳಿಕ ಪೊಲೀಸರು ಮೃಹದೇಹಗಳನ್ನು ಟ್ಯಾಂಕರ್‌ನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.

ಪಕ್ಕದ್ಮನೆ ಯುವಕನೊಂದಿಗೆ ಆಂಟಿ ಎಸ್ಕೇಪ್ - 10 ದಿನಗಳ ನಂತರ ಬಯಲಾಯ್ತು ರಹಸ್ಯ

ಆದರೀಗ ಪೊಲೀಸರ ಮಾಹಿತಿ ಪ್ರಕಾರ, ವಿವಾಹಿತ ಮಹಿಳೆ (Women) ಚವ್ಹಾನಿ ಮತ್ತು ಯುವಕ ಜೊಗರಾಮ್ ನಡುವೆ ವಿವಾಹೇತರ ಸಂಬಂಧ ಇತ್ತು ಎಂಬ ರಹಸ್ಯ ಬೆಳಕಿಗೆ ಬಂದಿದೆ. ಚವ್ಹಾನಿಗೆ ನೆರೆಮನೆಯವನಾದ ಜೋಗರಾಮ್ ಪರಿಚಯವಾಗಿದ್ದ. ನಂತರ ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ, ಪರಸ್ಪರ ಪ್ರೀತಿಸಲು (Love) ಶುರು ಮಾಡಿದ್ದರು. ಇಬ್ಬರ ಪ್ರೀತಿ ಗಾಢವಾಗುತ್ತಾ ದೈಹಿಕ ಸಂಬAಧವೂ ಬೆಳೆದಿತ್ತು. ಯಾರೂ ಇಲ್ಲದ ಸಮಯದಲ್ಲಿ ಇಬ್ಬರೂ ಸೇರುತ್ತಿದ್ದರು. ಹೀಗೆ ತಮ್ಮ ಸಂಬಂಧವನ್ನು ಮುಂದುವರಿಸಿದ್ದರು. ನವೆಂಬರ್ 13 ರಂದು ಮನೆಯಿಂದ ಕಾಣೆಯಾಗಿದ್ದರು. ಬಳಿಕ ಶವವಾಗಿ ಪತ್ತೆಯಾಗಿದ್ದರು.

ಪಕ್ಕದ್ಮನೆ ಯುವಕನೊಂದಿಗೆ ಆಂಟಿ ಎಸ್ಕೇಪ್ - 10 ದಿನಗಳ ನಂತರ ಬಯಲಾಯ್ತು ರಹಸ್ಯ

ಮೃತ ಮಹಿಳೆ 6 ತಿಂಗಳ ಹಿಂದಷ್ಟೇ ವಿಷ್ಣರಾಮ್ ಎಂಬಾತನೊಂದಿಗೆ ವಿವಾಹವಾಗಿದ್ದಳು. ದೂರಿನ ಅನ್ವಯ ಪೊಲೀಸರು ತನಿಖೆ ನಡೆಸುವಾಗ 10 ದಿನಗಳ ಬಳಿಕ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರನ್ನು ಆಘಾತಕ್ಕೆ ದೂಡಿದೆ. ಕೊಳತ ಸ್ಥಿತಿಯಲ್ಲಿದ್ದ ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಓಡಿ ಹೋದವರು ಇದೀಗ ಶವವಾಗಿ ಪತ್ತೆಯಾಗಿರುವುದು ಇದು ಆತ್ಮಹತ್ಯೆಯೋ? ಅಥವಾ ಕೊಲೆಯೋ? ಎಂಬ ಅನುಮಾನ ಹುಟ್ಟುಹಾಕಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಆರಂಭಿಸಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button