ನವದೆಹಲಿ: ದೆಹಲಿಯಿಂದ ಗುವಾಹತಿ ಮೂಲಕ ಇಂಫಾಲ್ ಗೆ ಪ್ರಯಾಣ ಬೆಳೆಸಿದ್ದ ಏರ್ ಏಷ್ಯಾ ವಿಮಾನದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ.
ಬುಧವಾರ ಈ ಘಟನೆ ನಡೆದಿದೆ. ವಿಮಾನ ಹಾರಾಟ ವೇಳೆಯೇ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಲಾಗಿದ್ದು, ಈ ವೇಳೆ ಮಗುವಿನ ಬಾಯಿಗೆ ಶೌಚಾಲಯದ ಪೇಪರ್ ಇಟ್ಟು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ
Advertisement
ಮಗುವಿಗೆ ಜನ್ಮ ನೀಡಿರುವ ಹುಡುಗಿ ಅಪ್ರಾಪ್ತೆಯಾಗಿರುವ ಸಾಧ್ಯತೆ ಇದ್ದು, ಇಂಫಾಲ್ ನಿಂದ ಆಗಮಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಳಿಕ ವಿಮಾನ ಮಂಡಳಿ ವಿಮಾನದಲ್ಲಿದ್ದ ಎಲ್ಲ ಮಹಿಳಾ ಪ್ರಯಾಣಿಕರನ್ನು ಪ್ರಶ್ನಿಸಿದ್ದು, ಆರೋಪಿ ಅಪ್ರಾಪ್ತೆಯನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಈ ಕುರಿತು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. “ಈ ವಿಷಯವನ್ನು ಡಿಜಿಸಿಎ ವರದಿ ಮಾಡಿದೆ ಮತ್ತು ವಿಮಾನಯಾನ ಸಿಬ್ಬಂದಿ ಹಾಗು ಇತರರು ದೆಹಲಿ ಪೊಲೀಸರಿಗೆ ಸಹಕಾರ ನೀಡುತ್ತಿದ್ದಾರೆ. ನಾವು ತನಿಖೆಯಲ್ಲಿ ಸಹಾಯ ಮಾಡುತ್ತೇವೆ. ಜೊತೆಗೆ ಎಲ್ಲ ಸಂಬಂಧಪಟ್ಟ ಏಜೆನ್ಸಿಗಳಿಗೆ ಸಹಕಾರ ನೀಡುತ್ತೇವೆ” ಎಂದು ಏರ್ ಏಷ್ಯಾ ವಿಮಾನ ಮಂಡಳಿ ತಿಳಿಸಿದೆ.
Advertisement