ಭುವನೇಶ್ವರ: ಒಡಿಶಾದಲ್ಲಿ (Odisha) ಮಂಗಳವಾರ ಮತ್ತೊಬ್ಬ ರಷ್ಯಾದ ವ್ಯಕ್ತಿಯ (Russian) ಶವ ಪತ್ತೆಯಾಗಿದ್ದು, ಇದು ಕಳೆದ 15 ದಿನಗಳಲ್ಲಿ ನಡೆದ 3ನೇ ಘಟನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಗತ್‌ಸಿಂಗ್‌ಪುರ ಜಿಲ್ಲೆಯ ಪಾರಾದೀಪ್ ಬಂದರಿನಲ್ಲಿ ಲಂಗರು ಹಾಕಲಾಗಿದ್ದ ಹಡಗಿನಲ್ಲಿ (Ship) ರಷ್ಯಾ (Russia) ವ್ಯಕ್ತಿಯ ಶವ ಪತ್ತೆಯಾಗಿದೆ. ಅವರನ್ನು ಮಿಲ್ಯಕೋವ್ ಸೆರ್ಗೆ(51) ಎಂದು ಗುರುತಿಸಲಾಗಿದೆ. ಅವರು ಹಡಗಿನ ಮುಖ್ಯ ಎಂಜಿನಿಯರ್ ಆಗಿದ್ದು, ಹಡಗು ಬಾಂಗ್ಲಾದೇಶದ ಚಿತ್ತಗಾಂಗ್ ಬಂದರಿನಿಂದ ಮುಂಬೈಗೆ ತೆರಳುತ್ತಿತ್ತು ಎನ್ನಲಾಗಿದೆ.
Advertisement
Advertisement
ಇಂದು ಮುಂಜಾನೆ 4:30ರ ವೇಳೆಗೆ ರಷ್ಯಾದ ವ್ಯಕ್ತಿ ಹಡಗಿನ ಕೊಠಡಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಸ್ತುತ ಸಾವಿಗೆ ಕಾರಣವನ್ನು ಕಂಡುಹಿಡಿಯಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಒಡಿಶಾದಲ್ಲಿ ರಷ್ಯಾ ವ್ಯಕ್ತಿಯ ಸಾವು ವರದಿಯಾಗಿರುವುದು 15 ದಿನಗಳಲ್ಲಿ ಇದು 3ನೇ ಬಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜ.31ಕ್ಕೆ ಸಂಸತ್ ಅಧಿವೇಶನ; ಫೆ.1ಕ್ಕೆ ಕೇಂದ್ರ ಬಜೆಟ್ ಮಂಡನೆ
Advertisement
ಪಾರಾದೀಪ್ ಪೋರ್ಟ್ ಟ್ರಸ್ಟ್ ಅಧ್ಯಕ್ಷ ಪಿಎಲ್ ಹರಾನಂದ್ ಅವರು ರಷ್ಯಾದ ಎಂಜಿನಿಯರ್ ಸಾವನ್ನು ದೃಢಪಡಿಸಿದ್ದಾರೆ ಹಾಗೂ ತನಿಖೆ ನಡೆಯುತ್ತಿದೆ ಎಂದಿದ್ದಾರೆ.
Advertisement
ಡಿಸೆಂಬರ್‌ನಲ್ಲಿ ದಕ್ಷಿಣ ಒಡಿಶಾದ ರಾಯಗಡ ಪಟ್ಟಣದಲ್ಲಿ ರಷ್ಯಾದ ಶಾಸಕ ಹಾಗೂ ಅವರ ಸ್ನೇಹಿತ ನಿಗೂಢವಾಗಿ ಸಾವನ್ನಪ್ಪಿದ್ದರು. ರಷ್ಯಾದಲ್ಲಿ ಶಾಸಕರಾಗಿರುವ ಪಾವೆಲ್ ಆಂಟೊವ್(65) ಅವರು ಡಿಸೆಂಬರ್ 24 ರಂದು ಹೋಟೆಲ್‌ನ 3ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರೆ, ಅವರ ಸ್ನೇಹಿತ ವ್ಲಾಡಿಮಿರ್ ಬಿಡೆನೋವ್(61) ಡಿಸೆಂಬರ್ 22 ರಂದು ಅವರ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಎರಡೂ ಪ್ರಕರಣಗಳನ್ನು ಒಡಿಶಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಭೀಕರ ಸರಣಿ ಅಪಘಾತ – ಒಂದೇ ಕುಟುಂಬದ ಐವರು ಸಾವು