ದಾವಣಗೆರೆ: ಕೆರೆ ಕೋಡಿ ಬಿದ್ದಿದ್ದನ್ನು ನೋಡಲು ಹೋಗಿದ್ದ ವ್ಯಕ್ತಿ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಜಗಳೂರು (Jagalur) ತಾಲೂಕಿನ ಸಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಭರಮ ಸಾಗರ ಮೂಲದ ಜಯಣ್ಣ (45) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಸಂಗೇನಹಳ್ಳಿ ಕೆರೆ ಕೋಡಿ ಬಿದ್ದಿದ್ದನ್ನು ನೋಡಲು ಜಯಣ್ಣ ಹೋಗಿದ್ದರು. ಬಳಿಕ ತಂಗಿಯ ಮನೆಗೆ ತೆರಳುವಾಗ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ. ಇದನ್ನೂ ಓದಿ: ಪತಿಯನ್ನು ಕಂಬಕ್ಕೆ ಕಟ್ಟಿಹಾಕಿ, ಆತನ ಎದುರೇ ಪತ್ನಿ ಮೇಲೆ ಗ್ಯಾಂಗ್ ರೇಪ್
ಗುರುವಾರ ರಾತ್ರಿ ಹಳ್ಳದಲ್ಲಿ ಜಯಣ್ಣ ಕೊಚ್ಚಿ ಹೋಗಿದ್ದರು. ಶುಕ್ರವಾರ ಅವರ ಮೃತದೇಹ ಪತ್ತೆಯಾಗಿದೆ. ಸಂಗೇನಹಳ್ಳಿ ಗ್ರಾಮಕ್ಕೆ ಬೇರೆ ಕಡೆ ದಾರಿಯಿಲ್ಲದೆ ಹಳ್ಳ ದಾಟಲು ಅವರು ಯತ್ನಿಸಿದ್ದರು. ಮೃತ ದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ.
ದಾವಣಗೆರೆ (Davanagere) ಸುತ್ತಮುತ್ತ ಭಾರೀ (Rain) ಮಳೆಯಾಗುತ್ತಿದ್ದು, ಕೆರೆಗಳು ತುಂಬಿ ಹರಿಯುತ್ತಿವೆ. ಇತ್ತೀಚೆಗೆ ಜಗಳೂರಿನಲ್ಲಿ ಜಮೀನುಗಳಿಗೂ ಕೆರೆ ನೀರು ನುಗ್ಗುವ ಆತಂಕ ಎದುರಾಗಿತ್ತು. ಇದರಿಂದ ರೈತರಿಗೆ ಜಮೀನುಗಳಿಗೆ ತೆರಳದಂತೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಬಸ್ ಸೀಟಿಗಾಗಿ ಚಪ್ಪಲಿಯಲ್ಲಿ ಬಡಿದಾಡಿದ ಮಹಿಳೆಯರು