ಕೊಪ್ಪಳ: ಇಳಿವಯಸ್ಸಿನಲ್ಲೂ ಬೆಟ್ಟವೇರಿ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ಕೊಪ್ಪಳದ ಪ್ರಸಿದ್ಧ ಗವಿಸಿದ್ದೇಶ್ವರ ದೇವರ ದರ್ಶನ ಪಡೆದಿದ್ದಾರೆ. ಇದನ್ನ ಕಂಡು ಕಾರ್ಯಕರ್ತರು ಅಚ್ಚರಿ ಪಟ್ಟಿದ್ದಾರೆ.
ಕಾರ್ಯಕರ್ತರ ಸಭೆಗೆ ಕೊಪ್ಪಳಕ್ಕೆ ಆಗಮಿಸಿದ ವೇಳೆ ಎಚ್‍ಡಿ ದೇವೇಗೌಡ ಅವರು ಅಂಗರಕ್ಷಕರ ಸಹಾಯದಿಂದ ಹರಸಾಹಸಪಟ್ಟು ಗವಿಸಿದ್ದೇಶ್ವರ ದೇವರ ದರ್ಶನ ಪಡೆದ್ರು.
Advertisement
Advertisement
ಅಂಗರಕ್ಷರ ಸಹಾಯದಿಂದಲೇ ಗರ್ಭ ಗುಡಿಯಲ್ಲಿ ಇಳಿದರು. ಕಳೆದ ವರ್ಷದ ಗವಿಸಿದ್ದೇಶ್ವರ ಜಾತ್ರೆಗೆ ದೇವೇಗೌಡ ಬಂದಿದ್ದರು. ಆಗ ಗರ್ಭ ಗುಡಿಯ ದರ್ಶನ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಹರಸಾಹಸ ಪಟ್ಟು ಗರ್ಭಗುಡಿಯ ದರ್ಶನ ಪಡೆದ್ರು.
Advertisement
Advertisement
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಹೆಚ್‍ಡಿಡಿ, ಸಿದ್ದರಾಮಯ್ಯರಿಗೆ ಒಂದು ಕಾಲಕ್ಕೆ ರಿಯಲೈಸೇಷನ್ ಆಗುತ್ತೆ. ರಾಮಕೃಷ್ಣ ಹೆಗಡೆಯವರು ಎಂಎಲ್‍ಎ ಆಗಿದ್ರಾ? ಹೆಗಡೆ ವಿಧಾನಸಭೆಗೆ ನಿಂತು ಸೋತ್ರು. ಆದ್ರೂ ಅವರನ್ನ ಮುಖ್ಯಮಂತ್ರಿ ಮಾಡಿದ್ದವನು ಇಲ್ಲಿ ಕುಂತೀನಿ. ಸಿದ್ದರಾಮಯ್ಯ ಹೆಗೆಡೆಯವರಂತ ಟಾಪ್ ಲೀಡರ್ ಅಲ್ಲ. ಸಿದ್ದರಾಮಯ್ಯ ಎಲ್ಲಿದ್ರು? ಆದ್ರೂ ಡೆಪ್ಯೂಟಿ ಸಿಎಂ ಮಾಡಿ ಈ ಹಂತಕ್ಕೆ ತಂದ್ವಿ. ಆಗ ಸಿಎಂ ಆಗ್ತೀನಿ ಎಂದಿದ್ದ ಸಿದ್ದರಾಮಯ್ಯಗೆ ಜೆ.ಎಚ್.ಪಟೇಲ್ ಜೋಡು(ಚಪ್ಪಲಿ) ಹಿಡಿದಿದ್ರು ಅಂತ ಹೇಳಿದ್ರು.
1996ರಲ್ಲಿ ದೇವೇಗೌಡ ಸಿದ್ದರಾಮಯ್ಯಗೆ ಸಿಎಂ ಸ್ಥಾನ ತಪ್ಪಿಸಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ರು. ಸಿದ್ದರಾಮಯ್ಯ, ಎಂಪಿ ಪ್ರಕಾಶ್, ರಾಯರಡ್ಡಿ ಎಲ್ಲಿಂದ ಬೆಳೆದು ಬಂದಿದ್ದಾರೆ. ನಿಮ್ಮ ಹಿಂದೆ ಕಾರ್ಯಕರ್ತರ ದಂಡೆ ಬಂದಿದ್ದಾರೆ ಅಂತ ತಿಳಿದುಕೊಂಡಿದ್ದೀರೇನು. ನಿಷ್ಟಾವಂತ ಕಾರ್ಯಕರ್ತರಿದ್ದಾರೆ. ಅವರಿಂದ ಪಕ್ಷ ಸಂಘಟನೆ ಮಾಡಿ, ಕೆಲವು ಭಿನ್ನಾಭಿಪ್ರಾಯ ಬಗೆಹರಿಸ್ತೇವೆ ಅಂದ್ರು. ಹೆಗಡೆ ನನ್ನ ವಿರುದ್ಧವೇ ಸ್ಪರ್ಧೆ ಮಾಡ್ತೀಯಾ ಅಂತ ಸಿದ್ದರಾಮಯ್ಯರವರನ್ನ ಕೇಳಿದ್ರು. ಸಿದ್ದರಾಮಯ್ಯ ಎಲ್ಲಿದ್ರು? ಉಪ ಮುಖ್ಯಮಂತ್ರಿ ಆಗುವವರೆಗೆ ಬೆಳಸಿದ್ದು ಯಾರು? ಸಿದ್ದರಾಮಯ್ಯ ದೊಡ್ಡ ಅಹಂಕಾರಿ, ಮಾತಾಡಲಿ ಬಿಡಿ. ಇಕ್ಬಾಲ್ ಅನ್ಸಾರಿ ದೊಡ್ಡವರು. ಅವರ ಬಗ್ಗೆ ನಾನು ಮಾತಾಡಲ್ಲ ಅಂದ್ರು.
ಯಡಿಯೂರಪ್ಪ ಅವರ ಮಹದಾಯಿ ವಿವಾದ ತಿಂಗಳೊಳಗಾಗಿ ಬಗೆಹರಿಸ್ತೀನಿ ಎನ್ನುವ ಹೇಳಿಕೆಯ ಕುರಿತು ಪತ್ರಕರ್ತರು ಪ್ರಶ್ನೆ ಕೇಳಿದ ಕೂಡಲೇ ಕೈ ಜೋಡಿಸಿದ್ರು. ನರೇಂದ್ರ ಮೋದಿಯವರಿಗೆ ಕೈಮುಗಿದು ಕೇಳಿದ್ರು ಏನೂ ಮಾತನಾಡಲಿಲ್ಲ. ಮಹದಾಯಿ ವಿವಾದ ಬಗೆಹರಿಸಿದ್ರೆ ಆ ಭಾಗದ ಜನರ ಪರವಾಗಿ ನಮಸ್ಕಾರ ಮಾಡ್ತೀನಿ ಅಂತ ಹೇಳಿದ್ರು.