-ರೇಪ್ ಮಾಡ್ತೀನಿ ಅಂದಿದ್ದವ ಕೊಲೆಯಾದದ್ದು ಹೇಗೆ?
ಬೆಂಗಳೂರು: ಶಿವಾಜಿನಗರದಲ್ಲಿ ನವೆಂಬರ್ 19ರಂದು ನಡೆದಿದ್ದ ಬಾಡಿ ಬಿಲ್ಡರ್ ಕೊಲೆಗೆ ಸ್ಫೋಟಕ ತಿರುವು ಸಿಕ್ಕಿದೆ. ಶಿವಾಜಿನಗರ ಪೊಲೀಸರು ಮೃತನ ಸ್ನೇಹಿತ ಸೇರಿ ಐದು ಜನರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮಾಹಿತಿ ಹೊರಬಂದಿದೆ.
ಶಿವಾಜಿನಗರದ ಇರ್ಫಾನ್, ಬನಶಂಕರಿಯ ಬರ್ಕತ್ ಅಹಮದ್, ತಾವರೆಕೆರೆಯ ಇಲಿಯಾಸ್ ಅಲಿಯಾಸ್ ಇಲ್ಲು, ಕೆ.ಜಿ.ಹಳ್ಳಿಯ ಮುಬಾರಕ್ ಅಲಿಯಾಸ್ ರೆಡ್ಡಿ ಹಾಗೂ ಶೆಕ್ ಮೊಹಮದ್ ಸಮಿ ಬಂಧಿತ ಆರೋಪಿಗಳು.
Advertisement
Advertisement
ಏನಿದು ಪ್ರಕರಣ?:
ಶಿವಾಜಿನಗರದಲ್ಲಿ ಅಕ್ವೇರಿಯಂ ಅಂಗಡಿ ಇಟ್ಟುಕೊಂಡಿದ್ದ ಬಾಡಿ ಬಿಲ್ಡರ್ ಇರ್ಫಾನ್ ಅಲಿಯಾಸ್ ಮಚ್ಚಿಯನ್ನು ನವೆಂಬರ್ 19ರಂದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಕುರಿತು ಶಿವಾಜಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಪರಿಶೀಲನೆ ನಡೆಸಿದಾಗ ದುಷ್ಕರ್ಮಿಗಳು ಕೃತ್ಯ ಎಸಗಿ ಬೈಕ್‍ನಲ್ಲಿ ಹೆಲ್ಮೆಟ್ ಹಾಕೊಂಡು ಹೋಗುವುದು ಸಿಕ್ಕಿದ್ದು, ಇದನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ಐವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೊಲೀಸರೇ ಬೆಚ್ಚಿ ಬೀಳುವ ಕಾರಣವನ್ನು ಆರೋಪಿಗಳು ನೀಡಿದ್ದಾರೆ.
Advertisement
ಕೊಲೆ ಮಾಡಿದ್ಯಾಕೆ?:
ಕೊಲೆಯಾಗಿದ್ದ ಮಚ್ಚಿ ಇರ್ಫಾನ್ ಶಿವಾಜಿನಗರದಲ್ಲಿ ಮೀಟರ್ ಬಡ್ಡಿ ದಂದೆ ನಡೆಸುತಿದ್ದ. 10 ಲಕ್ಷ ರೂ. ಸಾಲ ಕೊಟ್ಟರೆ ಮೂರು ತಿಂಗಳಿಗೆ 3ಲಕ್ಷ ರೂ. ಬಡ್ಡಿ ವಸೂಲಿ ಮಾಡುತ್ತಿದ್ದ. ಶಿವಾಜಿನಗರ ನಿವಾಸಿ ಮುಜೀಬ್ ಎಂಬವನು ಕಳೆದ ವರ್ಷ 1.5 ಲಕ್ಷ ರೂ. ಸಾಲ ಪಡೆದು, ಅದಕ್ಕೆ ಐದು ಲಕ್ಷ ರೂ. ಬಡ್ಡಿ ಮತ್ತು ಹಣ ನೀಡಿದ್ದ. ಕೊನೆಗೆ ಮಚ್ಚಿಯ ಕಾಟ ತಾಳಲಾಗದೆ ಅತ್ಮಹತ್ಯೆ ಮಾಡಿಕೊಂಡಿದ್ದ.
Advertisement
ಇದೇ ರೀತಿ ಶಿವಾಜಿನಗರ ನಿವಾಸಿ ಮನೆ ಕಾಂಟ್ರಾಕ್ಟ್ ಮಾಡುತ್ತಿದ್ದ ಸ್ನೇಹಿತ ಷರೀಫ್‍ಗೆ ಶೇ. 30 ರಂತೆ 10 ಲಕ್ಷ ರೂ. ಸಾಲ ನೀಡಿದ್ದ. ಈ ಮೂಲಕ ಇರ್ಫಾನ್ ಷರೀಫ್‍ನಿಂದ ಮೂರು ತಿಂಗಳಿಗೆ 3 ಲಕ್ಷ ರೂ. ಬಡ್ಡಿ ಪಡೆಯುತ್ತಿದ್ದ. ಹೀಗೆ ಷರೀಫ್‍ನಿಂದ ಬರೋಬ್ಬರಿ 10 ಲಕ್ಷ ರೂ.ಗಿಂತ ಅಧಿಕ ಹಣ ವಸೂಲಿ ಮಾಡಿದ್ದ.
ಇತ್ತ ತನ್ನ ಮನೆ ನಿರ್ಮಾಣದ ಕಾಂಟ್ರಾಕ್ಟ್ ಅನ್ನು ಷರೀಫ್‍ಗೆ ನೀಡಿ 50 ಲಕ್ಷ ರೂ. ಕೊಟ್ಟಿದ್ದ. ಆದರೆ ಷರೀಫ್‍ಗೆ ಸಾಲ ಹಾಗೂ ಬಡ್ಡಿಯನ್ನು ಹಿಂತಿರುಗಿಸಲು ಸಾಧ್ಯವಾಗಿರಲ್ಲಿ. ಇದರಿಂದಾಗಿ ಇರ್ಫಾನ್ ಅವಾಚ್ಯ ಪದಗಳಿಂದ ಷರೀಫ್‍ಗೆ ನಿಂದಿಸುತ್ತಿದ್ದ. ಮನೆಯ ಮುಂದೆ ಬಂದು ಗಲಾಟೆ ಮಾಡುತ್ತಿದ್ದ ಇರ್ಫಾನ್, ನಿನ್ನ ಪತ್ನಿ, ತಾಯಿ ಹಾಗೂ ಸಹೋದರಿಯರನ್ನು ರೇಪ್ ಮಾಡುತ್ತೇನೆ ಎಂದು ಅವಾಜ್ ಹಾಕುತ್ತಿದ್ದ.
ಇರ್ಫಾನ್ ವರ್ತನೆಯಿಂದ ಬೇಸತ್ತ ಷರೀಫ್ ತನ್ನ ಗೆಳೆಯ ಹಾಗೂ ಬನಶಂಕರಿ ರೌಡಿ ಶೀಟರ್ ಬರ್ಕತ್ ನೊಂದಿಗೆ ಕೊಲೆಯ ಸಂಚು ರೂಪಿಸಿದ್ದ. ಪ್ಲಾನ್‍ನಂತೆ ನವೆಂಬರ್ 19ರಂದು ಕೊಲೆ ಮಾಡಿದ್ದಾರೆ. ಐದು ಜನರ ಬಂಧನ ಆಗಿದ್ದು, ಇನ್ನು ಇಬ್ಬರು ತಲೆಮರಿಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv