ಬೆಂಗಳೂರು: ನಾನು ಕರ್ನಾಟಕ ರಾಜಕೀಯದಲ್ಲಿ ಮತ್ತಷ್ಟು ಕ್ರಿಯಾಶೀಲನಾಗುತ್ತೇನೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜಕೀಯದಲ್ಲಿ ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು ದೇಹ ಮತ್ತು ಮನಸ್ಸು ಸಜ್ಜಾಗಿದೆ ಎಂದು ಬರೆದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
Advertisement
ಸಿದ್ದರಾಮಯ್ಯ ಅವರು ಧರ್ಮಸ್ಥಳದ ಶಾಂತಿವನದಲ್ಲಿ ಪಕೃತಿ ಚಿಕಿತ್ಸೆ ಪಡೆದು ಗುರುವಾರ ಬೆಂಗಳೂರುಗೆ ಆಗಮಿಸಿದ್ದಾರೆ. ಈ ಮೂಲಕ ತಾವು ಮತ್ತೇ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗುವ ಸಂದೇಶವನ್ನು ಟ್ವಿಟ್ಟರ್ ಮೂಲಕ ಹರಿಯಬಿಟ್ಟಿದ್ದಾರೆ.
Advertisement
ಉಜಿರೆಯ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಆರೋಗ್ಯ ಸುಧಾರಣೆ ಮಾಡಿಕೊಂಡ ನಂತರ, ರಾಜಕೀಯದಲ್ಲಿ ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು ದೇಹ ಮತ್ತು ಮನಸ್ಸು ಸಜ್ಜಾಗಿದೆ. pic.twitter.com/RPAV3rHS56
— Siddaramaiah (@siddaramaiah) June 29, 2018
Advertisement
“ಉಜಿರೆಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಕಳೆದ ರಾತ್ರಿ ಬೆಂಗಳೂರಿಗೆ ಹಿಂದಿರುಗಿದ್ದೇನೆ. ವಿಧಾನಸಭೆ ಚುನಾವಣೆ ಪ್ರಚಾರ ಹಾಗೂ ಸರ್ಕಾರ ರಚನೆಯ ಒತ್ತಡದಿಂದ ದೇಹ ಮತ್ತು ಮನಸ್ಸು ಬಳಲಿತ್ತು. ಇದರಿಂದಾಗಿ ಪಕೃತಿ ಚಿಕಿತ್ಸೆ ಪಡೆದಿದ್ದು, ಸುಧಾರಿಸಿ ಉಲ್ಲಸಿತನಾಗಿರುವೆ. ಇನ್ನು ರಾಜಕೀಯದಲ್ಲಿ ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು ದೇಹ ಮತ್ತು ಮನಸ್ಸು ಸಜ್ಜಾಗಿದೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.
Advertisement
ಉಜಿರೆಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಕಳೆದ ರಾತ್ರಿ ಬೆಂಗಳೂರಿಗೆ ಹಿಂದಿರುಗಿದ್ದೇನೆ. ಚುನಾವಣಾ ಕಾಲದ ಕಾರ್ಯದೊತ್ತಡದಿಂದ ಬಳಲಿದ್ದ ದೇಹ ಮತ್ತು ಮನಸ್ಸು ಸುಧಾರಿಸಿ ಉಲ್ಲಸಿತನಾಗಿದ್ದೇನೆ. pic.twitter.com/TZfmZrDI8r
— Siddaramaiah (@siddaramaiah) June 29, 2018
“ಹನ್ನೆರಡು ದಿನಗಳ ಕಾಲ ಉಜಿರೆ ಪ್ರಕೃತಿ ಚಿಕಿತ್ಸಾ ಕೇಂದ್ರ ನನ್ನ ಮನೆಯಾಗಿತ್ತು. ಅಲ್ಲಿನ ಡಾ. ಪ್ರಶಾಂತ್ ಶೆಟ್ಟಿ ನೇತೃತ್ವದ ವೈದ್ಯರ ತಂಡ ನನ್ನನ್ನು ತಮ್ಮ ಕುಟುಂಬದ ಸದಸ್ಯನಂತೆ ನನ್ನ ಪಾಲನೆ ಮಾಡಿದ್ದಾರೆ. ಅವರ ಸೇವಾ ಬದ್ಧತೆ ಮತ್ತು ತೋರಿಸಿದ ಕಾಳಜಿಗೆ ತುಂಬು ಹೃದಯದ ಕೃತಜ್ಞತೆಗಳು. ಎಲ್ಲರಿಗೂ ವೃತ್ತಿಯಲ್ಲಿ ಇನ್ನಷ್ಟು ಯಶಸ್ಸು ಸಿಗಲೆಂದು ಹಾರೈಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಉಜಿರೆ ಪ್ರಕೃತಿ ಚಿಕಿತ್ಸಾ ಕೇಂದ್ರ ಹನ್ನೆರಡು ದಿನ ನನ್ನ ಮನೆಯಾಗಿತ್ತು ಡಾ. ಪ್ರಶಾಂತ್ ಶೆಟ್ಟಿ ನೇತೃತ್ವದ ವೈದ್ಯರ ತಂಡ ತಮ್ಮ ಕುಟುಂಬದ ಸದಸ್ಯನಂತೆ ನನ್ನ ಪಾಲನೆ ಮಾಡಿದ್ದಾರೆ. ಅವರ ಸೇವಾ ಬದ್ಧತೆ ಮತ್ತು ತೋರಿಸಿದ್ದ ಕಾಳಜಿಗೆ ತುಂಬುಹೃದಯದ ಕೃತಜ್ಞತೆಗಳು. ಎಲ್ಲರಿಗೂ ವೃತ್ತಿಯಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. pic.twitter.com/PFeK6Ewu0Z
— Siddaramaiah (@siddaramaiah) June 29, 2018