ಭೋಪಾಲ್: ಒಂದೇ ಮರಕ್ಕೆ ಮೂವರು ಸಹೋದರಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ.
ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೂವರು ಸಹೋದರಿಯರ ಶವ ಪತ್ತೆಯಾಗಿದ್ದು, ಈ ಘಟನೆ ಖಾಂಡ್ವಾದ ಜವಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ಖೇಡಿ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ಚೆಸ್ ಒಲಿಂಪಿಯಾಡ್‌ನಲ್ಲಿ ಮೋದಿ ಫೋಟೋ ಹಾಕದೇ ಜಾಹೀರಾತು – ಎಲ್ಲ ಬೋರ್ಡ್‍ಗಳಿಗೂ ಫೋಟೋ ಅಂಟಿಸಿದ ಬಿಜೆಪಿ
ಮೃತ ಸಹೋದರಿಯರನ್ನು ಸೋನು, ಸಾವಿತ್ರಿ ಮತ್ತು ಲಲಿತಾ ಎಂದು ಗುರುತಿಸಲಾಗಿದ್ದು, ಮೂವರು ಕೂಡ ತಮ್ಮ ತಾಯಿ ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದರು. ಇದೀಗ ಮೂವರು ಸಹೋದರಿಯರು ಸಾವನ್ನಪ್ಪಿದ್ದು ತನ್ನ ತಾಯಿ, ಇಬ್ಬರು ಸಹೋದರಿಯರು ಮತ್ತು ಮೂವರು ಸಹೋದರರನ್ನು ಅಗಲಿದ್ದಾರೆ. ಇದನ್ನೂ ಓದಿ: ಸಾಮೂಹಿಕ ರಾಜೀನಾಮೆಗೆ ಮುಂದಾದ ಬಿಜೆಪಿ ಯುವ ಮೋರ್ಚಾ ಘಟಕ ಸದಸ್ಯರು
ಈ ಕುರಿತಂತೆ ಮಾಹಿತಿ ದೊರೆತ ಪೊಲೀಸರು ನಂತರ ಘಟನಾ ಸ್ಥಳಿಕ್ಕೆ ಆಗಮಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೇ ಘಟನಾ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗದ ಹಿನ್ನೆಲೆ ಸಾವಿನ ಹಿಂದಿನ ಪ್ರಮುಖ ಕಾರಣವೇನು ಎಂಬುವುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.