ನವದೆಹಲಿ: ಯುದ್ಧಪೀಡಿತ ಇರಾಕ್‍ನ ಮೊಸೆಲ್‍ನಲ್ಲಿ ಐಎಸ್ ಉಗ್ರರಿಂದ ಹತ್ಯೆಗೊಳಗಾಗಿದ್ದ 38 ಭಾರತೀಯರ ಶವಗಳನ್ನು ತರಲು ಕೇಂದ್ರ ಸಚಿವ ವಿಕೆ ಸಿಂಗ್ ಇರಾಕ್‍ಗೆ ತೆರಳಿದ್ದಾರೆ. ಡಿಎನ್‍ಎ ಆಧಾರದಲ್ಲಿ ಶವ ಹಸ್ತಾಂತರ ಪ್ರಕ್ರಿಯೆ ನಡೆದಿದ್ದು ಭಾರತಕ್ಕೆ ಇಂದು ತಡರಾತ್ರಿ ಪಾರ್ಥಿವ ಶರೀರಗಳು ಆಗಮಿಸುವ ಸಾಧ್ಯತೆ ಇದೆ.
ಮೃತದೇಹಗಳ ಹಸ್ತಾಂತರಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್ ಇರಾಕ್ ಗೆ ತೆರಳಿದ್ದಾರೆ. ಈ ಸಂಬಂಧ ಮೇಲ್ವಿಚಾರಣೆ ವಿ.ಕೆ.ಸಿಂಗ್ ನೇತೃತ್ವದಲ್ಲಿ ನಡೆಯಲಿದೆ. ಭಾರತಕ್ಕೆ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು ಅಂತಾ ಹೇಳಲಾಗಿದೆ. ಇತ್ತೀಚೆಗೆ ಕುಟುಂಬಸ್ಥರನ್ನು ಭೇಟಿಯಾಗಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮೃತದೇಹಗಳನ್ನು ಒಂದು ವಾರದಲ್ಲಿ ತರಲಾಗುವುದು ಅಂತಾ ಭರವಸೆಯನ್ನು ನೀಡಿದ್ದರು. ಇದನ್ನೂ ಓದಿ: ಇರಾಕ್‍ನಲ್ಲಿ ಐಸಿಸ್‍ನಿಂದ ಹತ್ಯೆಯಾಗಿದ್ದ 39 ಭಾರತೀಯರ ಮೃತ ದೇಹ ಪತ್ತೆ ಮಾಡಿದ್ದು ಹೇಗೆ?
Advertisement
Advertisement
ಕಳೆದ ವರ್ಷ ಜುಲೈನಲ್ಲಿ ಸದನಕ್ಕೆ ಮಾಹಿತಿ ನೀಡಿದ್ದ ಸುಷ್ಮಾ ಸ್ವರಾಜ್ ಅವರು, ಅಪಹರಣಕ್ಕೆ ಒಳಗಾಗಿರುವ 39 ಮಂದಿಯ ಖಚಿತ ಮಾಹಿತಿ ದೊರೆಯದ ಹೊರತು ಅವರು ಮೃತ ಪಟ್ಟಿದ್ದಾರೆ ಎಂದು ಪ್ರಕಟಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಆದರೆ ಮಾರ್ಚ್ ನಲ್ಲಿ ಖಚಿತ ಮಾಹಿತಿಯ ಮೇಲೆ 39 ಮಂದಿಯ ಹತ್ಯೆಯಾಗಿರುವುದನ್ನು ದೃಢಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಟ್ವೀಟನ್ನು ರಿಟ್ವೀಟ್ ಮಾಡಿದ್ರು ಸುಷ್ಮಾ ಸ್ವರಾಜ್!
Advertisement
ಹತ್ಯೆಯಾದ ಭಾರತೀಯ ಮೃತದೇಹದ ಅವಶೇಷಗಳನ್ನು ಭಾರತಕ್ಕೆ ತರಲಾಗುವುದು. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿಕೆ ಸಿಂಗ್ ಇರಾಕ್ ಗೆ ತೆರಳಿ ಅಲ್ಲಿಂದ ಮೃತರ ಅವಶೇಷಗಳನ್ನು ಅಮೃತಸರ, ಪಾಟ್ನಾ ಹಾಗೂ ಕೋಲ್ಕತ್ತಾಗಳಿಗೆ ತರಲಿದ್ದಾರೆ ಎಂದು ಮಾಹಿತಿ ನೀಡಿದರು.
Advertisement
Bodies of 38 Indians to be brought back from #Iraq today
Read @ANI story | https://t.co/npfAzZ51uP pic.twitter.com/s7gkVHmLZG
— ANI Digital (@ani_digital) April 1, 2018