ಮಗನ ಆ ಮಾತು ಮದ್ಯಪಾನ ಬಿಡಲು ಪ್ರೇರಣೆ ನೀಡಿತ್ತು- ಬಾಬಿ ಡಿಯೋಲ್ ಭಾವುಕ

Public TV
1 Min Read
bobby deol

ಬಾಲಿವುಡ್ ನಟ ಬಾಬಿ ಡಿಯೋಲ್ (Bobby Deol) ‘ಕಾಫಿ ವಿತ್ ಕರಣ್-8’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದು, ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮದ್ಯದ ದಾಸನಾಗಿದ್ದ ಬಾಬಿ, ಮಗನ ಮಾತಿಂದ ಪ್ರೇರಣೆಗೊಂಡು ಹೊರಬಂದ ಬಗ್ಗೆ ಭಾವುಕರಾಗಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ‘ಟೈಗರ್ 3’ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ

bobby deol 1ಬಾಬಿ ಮಾತಾನಾಡಿ, ನಾನು ಪೂರ್ತಿಯಾಗಿ ಸೋತಿದ್ದೆ, ಆ ಸೋಲು ನನ್ನನ್ನು ಪೂರ್ತಿಯಾಗಿ ಮದ್ಯದ ದಾಸನಾಗಿ ಮಾಡಿತ್ತು. ಯಾಕೆ ಯಾರು ನನಗೆ ಒಳ್ಳೆಯ ಸಿನಿಮಾ ಅವಕಾಶಗಳನ್ನ ನೀಡುತ್ತಿಲ್ಲ ಎಂದು ಒಳ್ಳೆಯ ದಿನಗಳ ಬಗ್ಗೆ ನಂಬಿಕೆ ಕಳೆದುಕೊಂಡಿದ್ದೆ. ಆಗ ನನ್ನ ಪತ್ನಿ ಕೆಲಸಕ್ಕೆ ಹೋಗುತ್ತಿದ್ದಳು. ನಾನು ಮನೆಯಲ್ಲಿ ಕೂರುತ್ತಿದ್ದೆ, ಆ ಸಮಯದಲ್ಲಿ ನನ್ನ ಕುಟುಂಬ ನನ್ನ ಜೊತೆಯಲ್ಲಿತ್ತು ಎಂದಿದ್ದಾರೆ.

ಜೀವನದ ಬಗ್ಗೆ ನನಗಿದ್ದ ನಿಲುವನ್ನ ನನ್ನ ಮಗ ಬದಲಾಯಿಸಿದ. ಅಮ್ಮಾ ನೀನು ಕೆಲಸಕ್ಕೆ ಹೋಗುತ್ತೀಯಾ? ಅಪ್ಪ ಮನೆಯಲ್ಲಿ ಕೂರುತ್ತಾರೆ ಎಂಬ ನನ್ನ ಮಗನ ಮಾತು ನನ್ನ ಮನಸ್ಸಿಗೆ ತಟ್ಟಿತ್ತು. ಆ ಸಂದರ್ಭದಿಂದ ಬದಲಾದೆ, ಬದಲಾಗಲು ಸಮಯ ತೆಗೆದುಕೊಂಡೆ ಎಂದು ಕಾಫಿ ವಿತ್‌ ಕರಣ್‌-8 ಕಾರ್ಯಕ್ರಮದಲ್ಲಿ  ನಟ ಬಾಬಿ ಮಾತನಾಡಿದ್ದಾರೆ.

1995ರಲ್ಲಿ ‘ಬರ್ಸಾತ್’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ರಣ್‌ಬೀರ್ ನಟನೆಯ ‘ಅನಿಮಲ್’ (Animal Film) ಚಿತ್ರದಲ್ಲಿ ಬಾಬಿ ಡಿಯೋಲ್ ವಿಲನ್ ಆಗಿ ನಟಿಸಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article