ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಜಲಪಾತ ಹೊಗೆನಕಲ್‍ನಲ್ಲಿ ದೋಣಿ ವಿಹಾರಕ್ಕೆ ಅಧಿಕ ಶುಲ್ಕ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ.
Advertisement
ದೋಣಿ ಮತ್ತು ತೆಪ್ಪ ನಡೆಸುವವರು ಅಧಿಕ ಶುಲ್ಕ ವಸೂಲಿಗೆ ಮುಂದಾಗಿದ್ದಾರೆ ಎಂದು ಪ್ರವಾಸಿಗರು ಆರೋಪ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ದೋಣಿ ಸವಾರಿಗೆ ತಲಾ ಒಬ್ಬರಿಗೆ 125 ರೂ. ಶುಲ್ಕ ವಿಧಿಸಿದೆ. ಆದ್ರೆ ತೆಪ್ಪ ಓಡಿಸುವವರು ಸವಾರಿಗೆ ದುಬಾರಿ ಶುಲ್ಕ ವಸೂಲಿ ಆರೋಪ ಬಂದಿದೆ. ಜೊತೆಗೆ ಎಲ್ಲರಿಗೂ ಕೂಡ ಲೈಫ್ ಜಾಕೆಟ್, ಮುಂಜಾಗ್ರತಾ ಕ್ರಮ ಕೈಗೊಳ್ತಿಲ್ಲ ಎಂಬ ಆರೋಪವಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಟಿಕಾಯತ್ ಮುಖಕ್ಕೆ ಮಸಿ – ವ್ಯಕ್ತಿಗೆ ಥಳಿತ
Advertisement
Advertisement
125 ರೂ. ಶುಲ್ಕದ ಬದಲು ಅತಿ ಹೆಚ್ಚು ಹಣ ವಸೂಲಿ ಮಾಡ್ತಿದ್ದಾರೆ. ನಾಲ್ಕು ಜನರ ಸವಾರಿಗೆ 1,500 ರೂ. ಡಿಮ್ಯಾಂಡ್ ಮಾಡ್ತಿದ್ದಾರೆಂದು ಪ್ರವಾಸಿಗರು ತೆಪ್ಪ ನಡೆಸುವವರ ವಿರುದ್ಧ ಆರೋಪ ಹೊರಿಸಿದ್ದಾರೆ. ಈ ಹಗಲು ದರೋಡೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸ್ತಿದ್ದಾರೆ. ಅರಣ್ಯ ಇಲಾಖೆಯ ಒಬ್ಬ ಸಿಬ್ಬಂದಿಯೂ ಕೂಡ ಸ್ಥಳದಲ್ಲಿರಲ್ಲ. ಪ್ರಾಣಕ್ಕೆ ಸಂಚಕಾರ ಉಂಟಾಗುವ ಪರಿಸ್ಥಿತಿಯಿದೆ. ಅರಣ್ಯಾಧಿಕಾರಿಗಳು ಎಚ್ಚೆತ್ತು ಅಧಿಕ ಶುಲ್ಕ ವಸೂಲಿ ಮಾಡುವವರ ವಿರುದ್ಧ ಕ್ರಮವಹಿಸಲು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪಿಎಂ ಕೇರ್ ಫಾರ್ ಚಿಲ್ಡ್ರನ್ ಕಾರ್ಯಕ್ರಮದಡಿಯಲ್ಲಿ ರಾಯಚೂರಿನ 4 ಮಕ್ಕಳಿಗೆ ಸೌಲಭ್ಯ
Advertisement